News Warriors Kannada News Portal Shimoga : Local News
← All videos
🎲 Random video

“”ಹುಷಾರ್”” ಇನ್ನು ಮುಂದೆ ರೋಟರಿ ಚಿತ್ತಾಗಾರಕ್ಕೆ ಹೋಗುವ ಹಾಗಿಲ್ಲ..! ಬದುಕಿರುವವರಿಗೆ ಓಡಾಡಲು ಬಿಡುವುದಿಲ್ಲ..! ಸತ್ತವರನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಂತಿಲ್ಲ..!ಇದು ಜಿಲ್ಲಾಧಿಕಾರಿಗಳ ಆದೇಶವಂತೆ..?! ರಸ್ತೆಗೆ ಬೀಳುತ್ತಂತೆ ಬೇಲಿ..! ವಿಡಿಯೋ ವೈರಲ್..!!!!!!!!!

ಶಿವಮೊಗ್ಗ : ನಗರದ ವಿದ್ಯಾನಗರದ ವ್ಯಾಪ್ತಿಗೆ ಒಳಪಡುವ ಬಿ ,ಹೆಚ್ ರಸ್ತೆಯಲ್ಲಿರುವ ರೋಟರಿ ಚಿತಾಗರಕ್ಕೆ ಹೋಗುವ ದಾರಿಯನ್ನು ಗಣೇಶ ಆಲಿಯಾಸ್ ಮಂಜಪ್ಪ ಎನ್ನುವ ವ್ಯಕ್ತಿ ಆಕ್ರಮಿಸಿಕೊಂಡಿದ್ದು. ಜೊತೆಗೆ ಅಲ್ಲಿರುವ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಜಾಗವನ್ನು ಆಕ್ರಮಿಸಿಕೊಂಡಿದ್ದು. ಸರ್ಕಾರಿ ಅಂಗನವಾಡಿಯ ಹೆಸರಿಗೆ ಈತ ಬಣ್ಣವನ್ನು ಬಳಿದಿದ್ದು ಬೇಲಿ ಹಾಕಿಕೊಂಡಿದ್ದಾನೆ. ಇಲ್ಲಿ ಓಡಾಡುವ ಜನರಿಗೆ ಧಮ್ಕಿ ಹಾಕುತ್ತಾನೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ.

ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರಿಗೂ ದಮ್ಕಿ ಹಾಕುತ್ತಾನೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ:

ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರು ಮಾಜಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಯಮುನಾ ರಂಗೇಗೌಡ ಅವರು ಜನರ ದೂರಿನ ಮೇರೆಗೆ ಈತನ ಬಳಿ ಹೀಗೆಲ್ಲ ಮಾಡುವುದು ಸರಿನಾ..? ತಪ್ಪಲ್ಲವೇ..? ಎಂದು ಪ್ರಶ್ನೆ ಮಾಡಿದ್ದಕ್ಕೆ. ಅವರ ವಿರುದ್ಧವೇ ತಿರುಗಿ ಬಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಯ್ಯುತ್ತಾನೆ…

ಸ್ಥಳೀಯವಾಗಿ ಓಡಾಡುವ ಜನರಿಗೂ ಬೈಯುತ್ತಾನೆ, ನಿಂದಿಸುತ್ತಾನೆ:

ಸ್ಥಳೀಯವಾಗಿ ಸಾರ್ವಜನಿಕರು ಸಾಮಾನ್ಯವಾಗಿ ಆ ರಸ್ತೆಯಲ್ಲಿ ಓಡಾಡುವಾಗ ಅವರಿಗೆ ಬೈಯುವುದು ನಿಂದಿಸುವುದು ಈ ರಸ್ತೆಯಲ್ಲಿ ಓಡಾಡಬೇಡಿ ಇದು ನನಗೆ ಸೇರಿದ್ದು ಎಂದು ಧಮ್ಕಿ ಹಾಕುತ್ತಾನೆ…

ಪತ್ರಕರ್ತರಿಗೆ ಅವಾಜ್ ಹಾಕುವ ಈತ ಜಿಲ್ಲಾಧಿಕಾರಿಗಳ ಆದೇಶ ಇದೆ ಎನ್ನುತ್ತಾನೆ:

ಸಾರ್ವಜನಿಕರ ಹಾಗೂ ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರ ದೂರಿನ ಮೇರೆಗೆ ಇಂದು ಸ್ಥಳಕ್ಕೆ ಭೇಟಿ ನೀಡಿದಾಗ ಮಾಧ್ಯಮದವರೆಂದು ಹೇಳಿದರು ಕೂಡ ಕೇಳಿಸಿಕೊಳ್ಳದೆ ನಮಗೆ ಧಮ್ಕಿ ಹಾಕಲು ಪ್ರಯತ್ನಿಸುತ್ತಾನೆ. ಕೇಳಿದ್ದಕ್ಕೆ ಜಿಲ್ಲಾಧಿಕಾರಿಗಳ ಆದೇಶವಿದೆ ಈ ರಸ್ತೆ ನನಗೆ ಸೇರಿದ್ದು ಇದಕ್ಕೆ ಬೇಲಿ ಹಾಕುತ್ತೇನೆ ಎಂದು ಹೇಳುತ್ತಾನೆ…

ಜಿಲ್ಲಾಧಿಕಾರಿಗಳೇ ಸರ್ಕಾರಿ ಜಾಗವನ್ನೇ ಆಕ್ರಮಿಸಿಕೊಂಡಿರುವ ಈತನ ಮೇಲೆ ಕ್ರಮ ತೆಗೆದುಕೊಳ್ಳಿ..! ಅಥವಾ ಈತ ಹೇಳುತ್ತಿರುವುದು ಸರಿ ಇದೆಯಾ ಪರೀಕ್ಷಿಸಿ..! ಸಾರ್ವಜನಿಕರಿಗೆ ನಮಗೆ ಇರುವ ಗೊಂದಲವನ್ನು ಬಗೆಹರಿಸಿ..!

ರಘುರಾಜ್ ಹೆಚ್.ಕೆ…9449553305….

More like this

NEWS WARRIORS BIG IMPACT ::: ಕೆಲಸಕ್ಕಾಗಿ ರೈತರಿಂದ ಲಂಚ ತೆಗೆದುಕೊಳ್ಳುತ್ತಿದ್ದ ಸಾಗರದ ಗ್ರಾಮ ಲೆಕ್ಕಿಗ ರಾಘು ಶಾನ್ಭಾಗ್..!!!!! ಪತ್ರಿಕೆ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಗಳಿಂದ ಅಮಾನತ್ತು ಆದೇಶ..!!!!! ವಿಡಿಯೋ ಇದೆ..!!!!! “ಸಿಮ್ಸ್ ನಲ್ಲಿ ವಿದ್ಯಾರ್ಥಿನಿ ಜೊತೆಗೆ (MALE STAFF  NURSE ) ಶುಶ್ರೂಷಣಾಧಿಕಾರಿಂದ ಲೈಂಗಿಕ ಕಿರುಕುಳ ಪ್ರಕರಣ”  ಪತ್ರಿಕಾ ವರದಿ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಗಳಿಂದ ತನಿಖೆಗೆ ಆದೇಶ..!!!! ಮೆಘನ್ ಆಸ್ಪತ್ರೆಯಲ್ಲಿ ಲಂಚಾವತಾರ ಬಗ್ಗೆ ಆಸ್ಪತ್ರೆಯ ಅಧಿಕ್ಷಕರಾದ ಶ್ರೀಧರ್ ಏನು ಹೇಳಿದರು..?! ಹುಟ್ಟುವ ಮಕ್ಕಳಿಗೆ ಲಿಂಗದ ಆಧಾರದ ಮೇಲೆ ರೇಟ್ ಫಿಕ್ಸ್ ಮಾಡಿದ್ದಾರಾ..?! “ಸಿಮ್ಸ್ ನಲ್ಲಿ ವಿದ್ಯಾರ್ಥಿನಿ ಜೊತೆಗೆ (MALE STAFF NURSE ) ಶುಶ್ರೂಷಣಾಧಿಕಾರಿಂದ ಲೈಂಗಿಕ ಕಿರುಕುಳ ಪ್ರಕರಣ” ಪತ್ರಿಕಾ ವರದಿ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಗಳಿಂದ ತನಿಖೆಗೆ ಆದೇಶ..!!!! ಮೆಘನ್ ಆಸ್ಪತ್ರೆಯಲ್ಲಿ ಲಂಚಾವತಾರ ಬಗ್ಗೆ ಆಸ್ಪತ್ರೆಯ ಅಧಿಕ್ಷಕರಾದ ಶ್ರೀಧರ್ ಏನು ಹೇಳಿದರು..?! ಹುಟ್ಟುವ ಮಕ್ಕಳಿಗೆ ಲಿಂಗದ ಆಧಾರದ ಮೇಲೆ ರೇಟ್ ಫಿಕ್ಸ್ ಮಾಡಿದ್ದಾರಾ..?! ಮುಖ್ಯಮಂತ್ರಿಗಳು ಮಳೆಹಾನಿ ಕುರಿತಂತೆ ಕರೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಗೃಹ ಸಚಿವರ ಸಂವಾದ ಮಳೆ ಹಾನಿ ಕುರಿತಂತೆ ಚರ್ಚೆ..! ಗೃಹ ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು..!! ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಬೃಹತ್ ಭ್ರಷ್ಟಾಚಾರ – ಸೂಕ್ತ ತನಿಖೆಗೆ ಆಗ್ರಹ..!!

1 comment

EnriquelowAugust 8, 2025

В этой статье-обзоре мы соберем актуальную информацию и интересные факты, которые освещают важные темы. Читатели смогут ознакомиться с различными мнениями и подходами, что позволит им расширить кругозор и глубже понять обсуждаемые вопросы.
Подробнее можно узнать тут – https://quick-vyvod-iz-zapoya-1.ru/

Leave a comment