
ರಾಜ್ಯದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು ನಾಳೆ ಮತದಾನ ನಡೆಯಲಿದೆ. ಆದರೆ ಮತದಾನ ಮಾಡಲು ಮತದಾರರಿಗೆ ಮತದಾನದ ಗುರುತಿನ ಚೀಟಿ ಕಡ್ಡಾಯವಾಗಿತ್ತು.
ಆದರೆ ಕೆಲವು ಮತದಾರರ ಮತದಾನದ ಗುರುತಿನ ಚೀಟಿಗಳು ಲಭ್ಯವಿಲ್ಲದಿದ್ದರೆ, ಕಳೆದು ಹೋಗಿದ್ದರೆ, ಮನೆಯಲ್ಲೇ ಮರೆತು ಬಂದಿದ್ದರೆ, ಅದಕ್ಕೆ ಪರ್ಯಾಯವಾಗಿ ಕೂಡ ಮತದಾನ ಚಲಾಯಿಸಬಹುದು.
ಆದರೆ ಮತದಾನ ಮಾಡಲು ಚುನಾವಣಾ ಆಯೋಗದ ಅಧಿಕಾರಿಗಳು ಗುರುತಿಸಿರುವ ಪರ್ಯಾಯ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದು ಕಡ್ಡಾಯವಾಗಿ ಇರಬೇಕು.
ಮತದಾನ ಮಾಡಲು ಬೇಕಾಗುವ ಪರ್ಯಾಯ ದಾಖಲೆಗಳು
ಆಧಾರ್ ಕಾರ್ಡ್..
ಎಂಎನ್‌ಆರ್‌ಇಜಿಎ ಜಾಬ್ ಕಾರ್ಡ್ ಬ್ಯಾಂಕ್..
ಅಂಚೆ ಕಚೇರಿ ನೀಡಿದ ಭಾವಚಿತ್ರವಿರುವ ಪಾಸ್ಬುಕ್ಗಳು…
ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್…
ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್..
ಎನ್ಪಿಆರ್ ಅಡಿಯಲ್ಲಿ ಆರ್ಜಿಐ ನೀಡಿದ ಸ್ಮಾರ್ಟ್ ಕಾರ್ಡ್…
ಭಾರತೀಯ ಪಾಸ್ಫೋರ್ಟ್…
ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ…
ರಾಜ್ಯ, ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳು ತಮ್ಮ ನೌಕರರಿಗೆ ನೀಡಿರುವ ಸೇವಾ ಗುರುತಿನ ಚೀಟಿ…
ಸಂಸದರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳು…
ಅಂಗವಿಕಲರ ಗುರುತಿನ ಚೀಟಿ (ಯುಡಿಐಡಿ ಕಾರ್ಡ್) ಪತ್ರದ ಮೂಲ ಪ್ರತಿಗಳನ್ನು ಮತದಾನದ ವೇಳೆ ಪರ್ಯಾಯ ದಾಖಲೆಗಳನ್ನಾಗಿ ಬಳಸಬಹುದು…
ಹೀಗೆ ಮೇಲೆ ತಿಳಿಸಿದ ದಾಖಲೆಗಳಲ್ಲಿ ಯಾವುದಾದರು ಒಂದನ್ನು ತೋರಿಸಿ ಮತ ಚಲಾಯಿಸಬಹುದು…
ಕಡ್ಡಾಯವಾಗಿ ಮತದಾನ ಮಾಡಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ.. ಹಣ ಹೆಂಡಕ್ಕೆ ಮರಳಾಗಿ ಭ್ರಷ್ಟರನ್ನು ಆಯ್ಕೆ ಮಾಡಬೇಡಿ…
ರಘುರಾಜ್ ಹೆಚ್.ಕೆ..9449553305…