Big news: ಆಯನೂರಿನ ಚೋರಡಿ ಬಸ್ ಅಪಘಾತದ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಮಾಹಿತಿ..!! ಮೃತಪಟ್ಟವರೆಷ್ಟು ಜನ ಜನ ಗಾಯಾಳು ಎಷ್ಟು ಜನ..?!
- May 11, 2023

ಶಿವಮೊಗ್ಗ: ಆಯನೂರು ಸಮೀಪ ಚೋರಡಿ ಬಳಿ ಬಾಲಾಜಿ ಹಾಗೂ ಕಾಳಪ್ಪ ಬಸ್ ನಡುವೆ ಭೀಕರ ಮುಖಾಮುಖಿ ಅಪಘಾತ ಸಂಭವಿಸಿದ್ದು. ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದು ಸುಮಾರು ಮೂವತ್ತು ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಮೃತಪಟ್ಟವರಲ್ಲಿ ಹೊಸದುರ್ಗದ ತಿಪ್ಪೇಸ್ವಾಮಿ ಹಾಗೂ 43 ವರ್ಷದ ಅನಾಮದೇಯ ವ್ಯಕ್ತಿಯೊಬ್ಬರು ಸೇರಿದ್ದಾರೆ. ಅಪಘಾತದಲ್ಲಿ ಗಾಯಾಳುಗಳನ್ನು ಮೆಘನ್ ಆಸ್ಪತ್ರೆಗೆ ಸೇರಿಸಲಾಗಿದ್ದು ಸೂಕ್ತ ಚಿಕಿತ್ಸೆ ನಡೆಯುತ್ತಿದೆ. ಎನ್ನುವ ಪ್ರಾಥಮಿಕ ಮಾಹಿತಿಯನ್ನು ಶಿವಮೊಗ್ಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ ಕೆ ನೀಡಿದ್ದಾರೆ.

ಅಪಘಾತದ ಹಿನ್ನೆಲೆ :
ಶಿಕಾರಿಪುರದಿಂದ ಶಿವಮೊಗ್ಗದೆಡೆಗೆ ಕಾಳಪ್ಪ ಬಸ್ ಹೋಗುತ್ತಿದ್ದು ಶಿವಮೊಗ್ಗದಿಂದ ಶಿಕಾರಿಪುರದೆಡೆಗೆ ಸಾಗುತ್ತಿದ್ದ ಬಾಲಾಜಿ ಬಸ್ ನಡುವೆ ಕುಂಸಿ ಬಳಿಯ ಚೋರಡಿ ಸೇತುವೆ ಮೇಲೆ ಘಟನೆ ನಡೆದಿದೆ.
ಸ್ಥಳದಲ್ಲೇ ಕಾಳಪ್ಪ ಬಸ್‌ನ ಚಾಲಕ ಸಾವನ್ನಪ್ಪಿದು.
ಬಾಲಾಜಿ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು
ಹಲವಾರು ಜನರಿಗೆ ಗಂಭೀರ ಗಾಯಗಳಾಗಿವೆ.
ಎರಡೂ ಬಸ್ ಗಳಲ್ಲಿ ಸೇರಿ ಒಟ್ಟು 75-80 ಜನ ಪ್ರಯಾಣಿಕರು ಸಂಚರಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ…
ರಘುರಾಜ್ ಹೆಚ್.ಕೆ..9449553305…