News Warriors Kannada News Portal Shimoga : Local News
← All videos
🎲 Random video

ನೀಡಿದ ಭರವಸೆ ಈಡೇರಿಕೆ ನಾಳೆ ಬೆಳಿಗ್ಗೆ 11:30ಕ್ಕೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ದಂಪತಿಗಳು ಎಮ್ಮೆ ಹಟ್ಟಿ ಗ್ರಾಮಕ್ಕೆ ಭೇಟಿ..!

ಇತ್ತೀಚಿಗೆ ಹಾವೇರಿಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭದ್ರಾವತಿ ತಾಲೂಕಿನ ಎಮ್ಮೆ ಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಜನ ಮೃತರಾಗಿದ್ದು, ನಾಲ್ಕು ಜನ ತೀವ್ರ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈಗ ಇಬ್ಬರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಇನ್ನಿಬ್ಬರು ತೀವ್ರ ನಿಗ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಕುಟುಂಬಕ್ಕೆ ಸಂತಾಪ ಸೂಚಿಸಲು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ದಿನಾಂಕ-29-6-24 ಮೃತರ ಗ್ರಾಮಕ್ಕೆ ಭೇಟಿ ನೀಡಿ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಶ್ರೀಮತಿ ಗೀತಾ ಶಿವರಾಜಕುಮಾರ್ ರವರು ಮೃತರಾದ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿಗಳನ್ನು ನೀಡಲಿದ್ದಾರೆ ಎಂದು ಭರವಸೆ ನೀಡಿದ್ದರು.


ಅದರಂತೆ ನಾಳೆ ಬೆಳಗ್ಗೆ 11:30ಕ್ಕೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ದಂಪತಿಗಳು ಎಮ್ಮೆ ಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಸಚಿವರು ನೀಡಿದ ಭರವಸೆಯಂತೆ ಮೃತ ಕುಟುಂಬದ ಸದಸ್ಯರಿಗೆ ವೈಯಕ್ತಿಕ ಪರಿಹಾರ ಧನ ಹಸ್ತಾಂತರಿಸಲಿದ್ದು ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿರುತ್ತಾರೆ.

      

More like this

ಬದಲಾಗು ಮತದಾರ..! ಬದಲಾಗು ಮತದಾರ..! Former Chief Minister BSY advises the state government:ರಾಜ್ಯ ಸರ್ಕಾರಿ ನೌಕರರು ಬೀದಿಗಿಳಿಯದಂತೆ ನೋಡಿಕೊಳ್ಳಿ ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಸಲಹೆ..!! Former Chief Minister BSY advises the state government:ರಾಜ್ಯ ಸರ್ಕಾರಿ ನೌಕರರು ಬೀದಿಗಿಳಿಯದಂತೆ ನೋಡಿಕೊಳ್ಳಿ ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಸಲಹೆ..!! NEWS WARRIORS EXCLUSIVE NEWS : ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಿಗೆ ವೈದ್ಯಕೀಯ ವೆಚ್ಚಕ್ಕೆ ಇಲ್ಲ ಅನುಮತಿ..!!ಆಮ್ ಆದ್ಮಿ ಪಾರ್ಟಿಯಿಂದ ಜನ ಜಾಗೃತಿ..!! NEWS WARRIORS EXCLUSIVE NEWS : ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಿಗೆ ವೈದ್ಯಕೀಯ ವೆಚ್ಚಕ್ಕೆ ಇಲ್ಲ ಅನುಮತಿ..!!ಆಮ್ ಆದ್ಮಿ ಪಾರ್ಟಿಯಿಂದ ಜನ ಜಾಗೃತಿ..!! Baraguru Ramachandrappa’s health fluctuates : ದಾವಣಗೆರೆ ಜಿಲ್ಲೆ ಹರಿಹರ ದಲ್ಲಿ ನಡೆಯುತ್ತಿರುವ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಕಾರ್ಯಕ್ರಮದಲ್ಲಿ ಸುಸ್ತಾಗಿ ಆಸ್ಪತ್ರೆ ಸೇರಿದ ಖ್ಯಾತ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ..!! ಹೇಗಿದೆ ಸದ್ಯದ ಪರಿಸ್ಥಿತಿ..?!