Tuesday, 17 November 2026 — NEWS WARRIORS
BREAKING NEWS
ಶಿವಮೊಗ್ಗ Shivamogga :10 ಸಾವಿರ ಸಾಲ ₹35 ಸಾವಿರವಾಗಿದ್ದು ಹೇಗೆ? ಮೂಲ ಬಾರ್‌ನಲ್ಲಿ ನಡೆದಿದ್ದೇನು? ಸಾವಿನ ಸುತ್ತ ಅನುಮಾನದ ಹುತ್ತ..! ರಾಜ್ಯ Shivamogga :ನಾಲ್ಕು ಸದನಗಳ ಅನುಭವ ಹೊಂದಿರುವ ಆಯನೂರು ಮಂಜುನಾಥ್‌ಗೆ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿದೆಯೇ..?! ಶಿವಮೊಗ್ಗ Shivamogga : ಸಾಗರ ಉಪವಿಭಾಗದ ಆಡಳಿತಕ್ಕೆ ಅನುಭವಿ ಅಧಿಕಾರಿ ಜಿ.ಹೆಚ್. ಸತ್ಯನಾರಾಯಣ್ ನೇಮಕ..! ಶಿವಮೊಗ್ಗ ನೆಹರು ಕ್ರೀಡಾಂಗಣದ ಅಂದಗೆಡಿಸುತ್ತಿದ್ದ ಫ್ಲೆಕ್ಸ್‌ಗಳಿಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಖಡಕ್ ಆದೇಶಕ್ಕೆ ಸಾರ್ವಜನಿಕರ ಮೆಚ್ಚುಗೆ..! ಶಿವಮೊಗ್ಗ Big news: ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಲಕ್ಷ ಲಕ್ಷ ಎತ್ತುವಳಿ..! ವರ್ಗಾವಣೆಗೂ ಮುನ್ನ ಡಿಸಿ ಕವಳಿಕಟ್ಟಿ ನೀಡಿದ ಆದೇಶವೇನು..?! ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ..?!Big news: Lakhs of rupees extorted in the names of the Deputy Commissioner and the Additional Deputy Commissioner! What order did DC Kavalikatti issue just before his transfer?! Is there a connection between his transfer and this incident..?! ಶಿವಮೊಗ್ಗ Shivamogga breaking :ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ರಂಪಾಟ: ಅನಾಹುತ ನಿವಾರಣೆಗೆ ದೇವರ ಮೊರೆ ಹೋದ ಅರ್ಚಕರು..! ರಾಜ್ಯ Big news :2011ರ ಕೆಎಎಸ್ ನೇಮಕಾತಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್! 2022ರ ನೇಮಕಾತಿ ಸಿಂಧುಗೊಳಿಸುವ ಕಾಯ್ದೆ ಅಸಂವಿಧಾನಿಕ; ನೇಮಕಗೊಂಡ ಅಧಿಕಾರಿಗಳ ಸೇವೆ ಅಂತ್ಯಕ್ಕೆ ಆದೇಶ! ರಾಜ್ಯ Big news: ರಾಜ್ಯ ಆರೋಗ್ಯ ಇಲಾಖೆಗೆ ಭರ್ಜರಿ ಸರ್ಜರಿ – ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೂ ಮಹತ್ವದ ಬದಲಾವಣೆ..! ಶಿವಮೊಗ್ಗ Shivamogga :10 ಸಾವಿರ ಸಾಲ ₹35 ಸಾವಿರವಾಗಿದ್ದು ಹೇಗೆ? ಮೂಲ ಬಾರ್‌ನಲ್ಲಿ ನಡೆದಿದ್ದೇನು? ಸಾವಿನ ಸುತ್ತ ಅನುಮಾನದ ಹುತ್ತ..! ರಾಜ್ಯ Shivamogga :ನಾಲ್ಕು ಸದನಗಳ ಅನುಭವ ಹೊಂದಿರುವ ಆಯನೂರು ಮಂಜುನಾಥ್‌ಗೆ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿದೆಯೇ..?! ಶಿವಮೊಗ್ಗ Shivamogga : ಸಾಗರ ಉಪವಿಭಾಗದ ಆಡಳಿತಕ್ಕೆ ಅನುಭವಿ ಅಧಿಕಾರಿ ಜಿ.ಹೆಚ್. ಸತ್ಯನಾರಾಯಣ್ ನೇಮಕ..! ಶಿವಮೊಗ್ಗ ನೆಹರು ಕ್ರೀಡಾಂಗಣದ ಅಂದಗೆಡಿಸುತ್ತಿದ್ದ ಫ್ಲೆಕ್ಸ್‌ಗಳಿಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಖಡಕ್ ಆದೇಶಕ್ಕೆ ಸಾರ್ವಜನಿಕರ ಮೆಚ್ಚುಗೆ..! ಶಿವಮೊಗ್ಗ Big news: ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಲಕ್ಷ ಲಕ್ಷ ಎತ್ತುವಳಿ..! ವರ್ಗಾವಣೆಗೂ ಮುನ್ನ ಡಿಸಿ ಕವಳಿಕಟ್ಟಿ ನೀಡಿದ ಆದೇಶವೇನು..?! ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ..?!Big news: Lakhs of rupees extorted in the names of the Deputy Commissioner and the Additional Deputy Commissioner! What order did DC Kavalikatti issue just before his transfer?! Is there a connection between his transfer and this incident..?! ಶಿವಮೊಗ್ಗ Shivamogga breaking :ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ರಂಪಾಟ: ಅನಾಹುತ ನಿವಾರಣೆಗೆ ದೇವರ ಮೊರೆ ಹೋದ ಅರ್ಚಕರು..! ರಾಜ್ಯ Big news :2011ರ ಕೆಎಎಸ್ ನೇಮಕಾತಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್! 2022ರ ನೇಮಕಾತಿ ಸಿಂಧುಗೊಳಿಸುವ ಕಾಯ್ದೆ ಅಸಂವಿಧಾನಿಕ; ನೇಮಕಗೊಂಡ ಅಧಿಕಾರಿಗಳ ಸೇವೆ ಅಂತ್ಯಕ್ಕೆ ಆದೇಶ! ರಾಜ್ಯ Big news: ರಾಜ್ಯ ಆರೋಗ್ಯ ಇಲಾಖೆಗೆ ಭರ್ಜರಿ ಸರ್ಜರಿ – ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೂ ಮಹತ್ವದ ಬದಲಾವಣೆ..!
ರಾಜ್ಯ

ಶಿವಲಿಂಗದ ವಿಧಗಳು – ಮಹಾಶಿವರಾತ್ರಿ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ..!!

EDITOR NEWS WARRIORS
ವರದಿ: EDITOR NEWS WARRIORS ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 8 ವೀಕ್ಷಣೆಗಳು

ಚಲ ಮತ್ತು ಅಚಲ : ಚಲ ಲಿಂಗವನ್ನು ಯಾವುದಾದರೊಂದು ವಿಶಿಷ್ಟ ಪೂಜೆಯನ್ನು ಮಾಡಲು ತಯಾರಿಸುತ್ತಾರೆ. ಶ್ರೀಗಣೇಶ ಚತುರ್ಥಿಗೆ ಯಾವ ರೀತಿ ಶ್ರೀಗಣೇಶನ ನೂತನ ಮೂರ್ತಿಯನ್ನು ತಯಾರಿಸಿ ನಂತರ ಅದನ್ನು ವಿಸರ್ಜನೆ ಮಾಡುತ್ತಾರೆಯೋ ಅದೇ ರೀತಿ ಇದನ್ನು ಮಾಡುತ್ತಾರೆ. ಅಚಲ ಲಿಂಗವನ್ನು ಒಂದು ಸ್ಥಳದಲ್ಲಿ ಸ್ಥಾಪಿಸಲಾಗಿರುತ್ತದೆ. ಲಿಂಗಾಯತರು ಕುತ್ತಿಗೆಯಲ್ಲಿ ಧರಿಸುವ ಲಿಂಗಕ್ಕೆ ‘ಚಲ ಲಿಂಗ’ ಎಂದು ಹೇಳುತ್ತಾರೆ.

ಸ್ವಯಂಭೂ ಲಿಂಗಗಳು : ಇವುಗಳಲ್ಲಿ ಬಹಳ ಶಕ್ತಿಯಿರುತ್ತದೆ; ಆದುದರಿಂದಲೇ ಇವು ಭೂಮಿಯ ಒಳಗಿರುತ್ತವೆ. ಅವು ಭೂಮಿಯ ಮೇಲಿದ್ದರೆ ಅವುಗಳಿಂದ ಹೊರಬೀಳುವ ಶಕ್ತಿಯನ್ನು ಭಕ್ತರು ಸಹಿಸಲಾರರು. (ಕಣ್ಣುಗಳಿಂದ ಹೊರಬೀಳುವ ತೇಜದಿಂದ ದರ್ಶನಕ್ಕೆ ಬರುವ ಜನರಿಗೆ ತೊಂದರೆಯಾಗ ಬಾರದೆಂದು ತಿರುಪತಿ ಬಾಲಾಜಿಯ ಕಣ್ಣುಗಳು ಅರ್ಧಮುಚ್ಚಿರುತ್ತವೆ.) ಪೂಜೆಯನ್ನು ಮಾಡುವವರು ನೆಲದ ಮೇಲೆ ಮಲಗಿಕೊಂಡು ಕೆಳಗೆ ಕೈ ಹಾಕಿ ಲಿಂಗದ ಪೂಜೆಯನ್ನು ಮಾಡುತ್ತಾರೆ. ಜ್ಯೋತಿರ್ಲಿಂಗಗಳ ನಂತರ ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಶಿವತತ್ತ್ವವಿರುತ್ತದೆ. ಇವು ಶಿವೇಚ್ಛೆಯಿಂದ ತಯಾರಾಗುತ್ತವೆ. ಮುಂದೆ ಯಾವುದಾದರೊಬ್ಬ ಭಕ್ತನಿಗೆ ಸಾಕ್ಷಾತ್ಕಾರವಾಗಿ ಇವುಗಳ ಅಸ್ತಿತ್ವದ ಅರಿವಾಗುತ್ತದೆ ಮತ್ತು ಅವುಗಳ ಪೂಜೆಯು ಪ್ರಾರಂಭವಾಗುತ್ತದೆ.

ಭೂಮಿಗೆ ಸಮಾನವಾಗಿರುವ ಲಿಂಗಗಳು : ಇವುಗಳನ್ನು ಋಷಿ ಅಥವಾ ರಾಜರು ಸ್ಥಾಪಿಸಿರುತ್ತಾರೆ. ಇವುಗಳಲ್ಲಿ ಶಕ್ತಿಯು ಕಡಿಮೆಯಿರುತ್ತದೆ. ಭಕ್ತರಿಗೆ ಈ ಶಕ್ತಿಯನ್ನು ಸಹಿಸಲು ಸಾಧ್ಯವಾಗುತ್ತದೆ. ಪೂಜೆ ಮಾಡುವವನು ಲಿಂಗದ ಪಕ್ಕದಲ್ಲಿರುವ ತಗ್ಗಿನಲ್ಲಿ ಕುಳಿತುಕೊಂಡು ಪೂಜೆಯನ್ನು ಮಾಡುತ್ತಾನೆ.

ಭೂಮಿಯ ಮೇಲಿರುವ ಲಿಂಗಗಳು : ಇವುಗಳನ್ನು ಭಕ್ತರು ಸ್ಥಾಪಿಸಿರುತ್ತಾರೆ. ಇವುಗಳಲ್ಲಿ ಎಲ್ಲಕ್ಕಿಂತ ಕಡಿಮೆ ಮತ್ತು ಎಲ್ಲರಿಗೂ ಸಹನವಾಗುವಷ್ಟೇ ಶಕ್ತಿಯಿರುತ್ತದೆ. ಪೂಜೆ ಮಾಡುವವರು ಲಿಂಗದ ಪಕ್ಕದಲ್ಲಿ ಕಟ್ಟಿರುವ ಕಟ್ಟೆಯ ಮೇಲೆ ಕುಳಿತುಕೊಂಡು ಪೂಜೆಯನ್ನು ಮಾಡುತ್ತಾರೆ.

ಎರಡನೆಯ ಮತ್ತು ಮೂರನೆಯ ವಿಧದ ಲಿಂಗಗಳಿಗೆ ‘ಮಾನುಷ ಲಿಂಗ’ ಎನ್ನುತ್ತಾರೆ. ‘ಇವುಗಳನ್ನು ಮನುಷ್ಯರು ತಯಾರಿಸುವುದರಿಂದ ಇವುಗಳಿಗೆ ಮಾನುಷಲಿಂಗ ಎಂಬ ಹೆಸರು ಬಂದಿರಬಹುದು. ಈ ಲಿಂಗಗಳನ್ನು ಸ್ಥಿರಲಿಂಗಗಳೆಂದು ಪರಿಗಣಿಸಲಾಗುತ್ತದೆ. ಇವುಗಳಿಗೆ ಬ್ರಹ್ಮಭಾಗ, ವಿಷ್ಣುಭಾಗ ಮತ್ತು ರುದ್ರಭಾಗ ಎಂದು ಮೂರು ಭಾಗಗಳಿರುತ್ತವೆ. ಎಲ್ಲಕ್ಕಿಂತಲೂ ಕೆಳಗಿನ ಭಾಗಕ್ಕೆ ‘ಬ್ರಹ್ಮಭಾಗ’ ಎನ್ನುತ್ತಾರೆ. ಅದು ಚತುಷ್ಕೋನಾಕಾರದ್ದಾಗಿರುತ್ತದೆ. ಮಧ್ಯದ ಅಷ್ಟಕೋನಾಕಾರದ ಭಾಗವನ್ನು ‘ವಿಷ್ಣುಭಾಗ’ ಎನ್ನುತ್ತಾರೆ. ಈ ಎರಡೂ ಭಾಗಗಳು ಭೂಮಿಯ ಒಳಗೆ ಇರುತ್ತವೆ. ಎಲ್ಲಕ್ಕಿಂತಲೂ ಮೇಲಿನ ಉದ್ದನೆಯ ದುಂಡಾದ ಭಾಗಕ್ಕೆ ರುದ್ರಭಾಗ ಎಂಬ ಹೆಸರಿದೆ. ಇದಕ್ಕೆ ಪೂಜೆಯ ಭಾಗವೆಂದೂ ಕರೆಯುತ್ತಾರೆ. ಏಕೆಂದರೆ ಪೂಜೆಯ ಸಾಮಗ್ರಿಗಳನ್ನು ಇದರ ಮೇಲೆಯೇ ಅರ್ಪಿಸುತ್ತಾರೆ. ಮೂರ್ತಿಶಾಸ್ತ್ರದ ಗ್ರಂಥಗಳಲ್ಲಿ ರುದ್ರಭಾಗದ ಮೇಲೆ ಕೆಲವು ರೇಖೆಗಳಿರಬೇಕು ಎಂದು ಹೇಳಲಾಗಿದೆ. ಈ ರೇಖೆಗಳಿಗೆ ‘ಬ್ರಹ್ಮಸೂತ್ರಗಳು’ ಎನ್ನುತ್ತಾರೆ. ದೈವಿಕ ಮತ್ತು ಆರ್ಷಕ ಲಿಂಗಗಳ ಮೇಲೆ ಇಂತಹ ರೇಖೆಗಳು ಇರುವುದಿಲ್ಲ.’

ಗಾಳಿಯಲ್ಲಿ ತೇಲಾಡುವ ಲಿಂಗಗಳು : ಪಾದರಸದಿಂದ ತಯಾರಿಸಿದ ಸೋಮನಾಥನ ಲಿಂಗವು ನೆಲದಿಂದ ಐದು ಮೀ. ಎತ್ತರದಲ್ಲಿ ಯಾವುದೇ ಆಧಾರವಿಲ್ಲದೆ ತೇಲಾಡುತ್ತಿತ್ತು. ದರ್ಶನಾರ್ಥಿಗಳು ಅದರ ಕೆಳಗಿನಿಂದ ಹೋಗುತ್ತಿದ್ದರು. ಅದೇ ಲಿಂಗದ ಪ್ರದಕ್ಷಿಣೆಯಾಗುತ್ತಿತ್ತು.

ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶಿವ’

ರಘುರಾಜ್ ಹೆಚ್.ಕೆ..9449553305..

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 2011 ಲೇಖನಗಳು

EDITOR NEWS WARRIORS

EDITOR NEWS WARRIORS ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment