ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿಗಳ ಹೆಸರು ಬಳಸಿಕೊಂಡು ಹಣದ ಬೇಡಿಕೆ ಆರೋಪ — ವರ್ಗಾವಣೆಗೆ ಒಂದು ದಿನ ಮುನ್ನ ಅಮಾನತು ಆದೇಶ ಹೊರಡಿಸಿದ ಪ್ರಭುಲಿಂಗ ಕವಳಿಕಟ್ಟಿ — ಅಮಾನತಿನಿಂದಲೇ ಪ್ರಕರಣ ಮುಕ್ತಾಯವೇ? ಹಣ ಪಡೆದ ಆರೋಪದ ಹಿಂದೆ ಮತ್ತಾರಿದ್ದಾರೆ..?!

ಶಿವಮೊಗ್ಗ, ನವೆಂಬರ್ 8 : ರೈತರಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಗಂಭೀರ ಆರೋಪ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಯೊಬ್ಬರ ವಿರುದ್ಧ ಕೇಳಿಬಂದಿದ್ದು, ಈ ಪ್ರಕರಣ ಜಿಲ್ಲೆಯ ಆಡಳಿತ ವ್ಯವಸ್ಥೆಯ ಪಾರದರ್ಶಕತೆ ಹಾಗೂ ಸಾರ್ವಜನಿಕರ ವಿಶ್ವಾಸದ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಮೋಹನ್ ಆರ್. ಅವರ ವಿರುದ್ಧ ರೈತರ ಪ್ರಕರಣವನ್ನು ಅವರ ಪರವಾಗಿ ಮಾಡಿಸಿಕೊಡುವುದಾಗಿ ಹೇಳಿ ₹50 ಲಕ್ಷಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ ₹5 ಲಕ್ಷ ಪಡೆದಿರುವ ಆರೋಪ ಕೇಳಿಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು 2026ರ ನವೆಂಬರ್ 5ರಂದು ಮೋಹನ್ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ವರ್ಗಾವಣೆಯಾಗುವ ಒಂದು ದಿನದ ಮುನ್ನವೇ ಈ ಅಮಾನತು ಆದೇಶ ಹೊರಬಿದ್ದಿರುವುದು ಪ್ರಕರಣದ ಕುರಿತು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ರಾಮಿನಕೊಪ್ಪ ರೈತರ ಪ್ರಕರಣದಲ್ಲಿ ₹50 ಲಕ್ಷದ ಬೇಡಿಕೆ ಆರೋಪ..!
ಶಿವಮೊಗ್ಗ ಜಿಲ್ಲೆಯ ರಾಮಿನಕೊಪ್ಪದ ರೈತರಿಗೆ ಸಂಬಂಧಿಸಿದ ಪ್ರಕರಣವನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅವರ ಪರವಾಗಿ ಇತ್ಯರ್ಥಪಡಿಸಿಕೊಡುವುದಾಗಿ ಹೇಳಿ ಮೋಹನ್ ₹50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ವ್ಯವಹಾರದಲ್ಲಿ ಮುಂಗಡವಾಗಿ ₹5 ಲಕ್ಷ ಪಡೆದಿರುವ ಆರೋಪವೂ ವ್ಯಕ್ತವಾಗಿದೆ.
ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳ ಹೆಸರುಗಳನ್ನು ಬಳಸಿಕೊಂಡು ರೈತರಲ್ಲಿ ವಿಶ್ವಾಸ ಮೂಡಿಸಿ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಯಬೇಕಿದೆ.
ಈ ಆರೋಪ ನಿಜವಾಗಿದ್ದರೆ, ಸರ್ಕಾರಿ ಕಚೇರಿಯಲ್ಲಿ ನ್ಯಾಯಕ್ಕಾಗಿ ಬರುವ ರೈತರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ಗಂಭೀರ ಪ್ರಕರಣ ಇದಾಗಲಿದೆ.
ಅಮಾನತು ಆದೇಶದಲ್ಲಿ ಏನಿದೆ?
