Saturday, June 14, 2025
Google search engine
Homeಸಿನಿಮಾ"ಪ್ರಾಮಿಸ್" ಚಿತ್ರದ ಚಿತ್ರೀಕರಣ ಮುಕ್ತಾಯ..! ತೆರೆಗೆ ಬರಲು ಸಿದ್ಧವಾಗಿದೆ..!!

“ಪ್ರಾಮಿಸ್” ಚಿತ್ರದ ಚಿತ್ರೀಕರಣ ಮುಕ್ತಾಯ..! ತೆರೆಗೆ ಬರಲು ಸಿದ್ಧವಾಗಿದೆ..!!


  • ವಿಜಯಪುರ : ಮಲಗೊಂಡ ಫಿಲಂ ಎಂಟ್ರಟೈನ್ ಮೆಂಟ್ಸ್ ಅರ್ಪಿಸುವ, ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಪತ್ರಿಕೆಯ ಸಹಯೋಗದಲ್ಲಿ, ಮಾದೇವಿ ಟಿ ಮಲಗೊಂಡ ನಿರ್ಮಾಣದಲ್ಲಿ,ನಟ ವಿಶ್ವಪ್ರಕಾಶ ಮಲಗೊಂಡ ನಾಯಕ ನಟನಾಗಿ ಅಭಿನಯಿಸುತ್ತಿರುವ 6ನೇ ಚಿತ್ರ “ಪ್ರಾಮಿಸ್” ಚಿತ್ರವು
    ಸತತ 10 ದಿನಗಳ ಕಾಲ ಉತ್ತರ ಕರ್ನಾಟಕದ ಸಿಂದಗಿ,ವಿಜಯಪುರ,ಇಂಚಗೇರಿ , ಸುತ್ತಮುತ್ತ ಚಿತ್ರೀಕರಣ ನಡೆಸಿ ಸುಕ್ಷೇತ್ರ ಇಂಚಗೇರಿ ಮಠದಲ್ಲಿ ಮುಕ್ತಾಯಗೊಂಡಿತು.
    ಈ ಸಂದರ್ಭದಲ್ಲಿ ಇಂಚಗೇರಿ ಮಠ ಪೀಠಾಧಿಪತಿ ಶ್ರೀ ಸ ಸ ರೇವಣಸಿದ್ಧೇಶ್ವರ ಮಹಾರಾಜರಿಗೆ ಪ್ರಾಮಿಸ್ ಚಿತ್ರತಂಡದಿಂದ ಸನ್ಮಾನಿಸಲಾಯಿತು. ನಂತರ ಅವರು ಚಿತ್ರತಂಡಕ್ಕೆ ಆಶೀರ್ವದಿಸಿ ಚಿತ್ರವು ಯಶಸ್ವಿಯಾಗಲಿ ಎಂದು ಹಾರೈಸಿದರು.
    ನಂತರ ಮಾತನಾಡಿದ ಹಿರಿಯ ಪತ್ರಿಕೋದ್ಯಮಿ ಟಿ. ಕೆ .ಮಲಗೊಂಡ ಅವರು ಪ್ರಾಮಿಸ್ ಚಿತ್ರವು ಸಂಪೂರ್ಣವಾಗಿ ಯುವ ಉತ್ಸಾಹಿಗಳಿಂದ ನಿರ್ಮಾಣವಾಗುತ್ತಿರುವ ಚಿತ್ರವಾಗಿದ್ದು, ಅತ್ಯುತ್ತಮ ಸಾಮಾಜಿಕ ಸಂದೇಶವನ್ನು ಹೊಂದಿದೆ. ಈ ಚಿತ್ರವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಖ್ಯಾತಿಯನ್ನು ಹೊಂದಿ, ಎಲ್ಲ ಯುವಕರ ಜನಪ್ರಿಯತೆ ಹೆಚ್ಚಾಗಲಿ ಎಂದು ಶುಭಕೋರಿದರು.
  • ಈ ಸಂದರ್ಭದಲ್ಲಿ ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ, ನಿರ್ಮಾಪಕಿ ಮಾದೇವಿ ಟಿ ಮಲಗೊಂಡ, ಚಿತ್ರದ ನಾಯಕ ನಟ ವಿಶ್ವಪ್ರಕಾಶ ಟಿ ಮಲಗೊಂಡ, ಹಿರಿಯ ಕಲಾವಿದ ಸಂತೋಷ ಉಪ್ಪಿನ, ನಿರ್ದೇಶಕ ಲಕ್ಕಿ ಎಸ್ ವಿ, ಮಲ್ಲಿಕಾರ್ಜುನ ಪತ್ತಾರ, ಪವನ್ ಬೂದಿಹಾಳ, ಹನಮಂತ ಐಹೊಳೆ, ಸಿದ್ದು ತಳ್ಳೊಳ್ಳಿ, ಸಚಿನ್ ತಳ್ಳೊಳ್ಳಿ, ಮತ್ತಿತರರು ಉಪಸ್ಥಿತರಿದ್ದರು.
    ಪ್ರಾಮಿಸ್ ಚಿತ್ರದಲ್ಲಿ ನಾಯಕ ನಟನಾಗಿ ವಿಶ್ವಪ್ರಕಾಶ ಟಿ ಮಲಗೊಂಡ, ನಾಯಕಿಯಾಗಿ ಸಾನ್ವಿ, ತಂದೆ ಪಾತ್ರದಲ್ಲಿ ಹಿರಿಯ ಕಲಾವಿದ ಸಂತೋಷ ಉಪ್ಪಿನ, ತಾಯಿ ಪಾತ್ರದಲ್ಲಿ ಮಂಜುಳಾ ಹಿಪ್ಪರಗಿ, ಸ್ನೇಹಿತರಾಗಿ ಲಕ್ಕಿ ಎಸ್ ವಿ, ಪ್ರಿಯಾಂಕ, ಯೋಗಿರಾಜ ಮುಳಗೆ, ಮಲ್ಲು ಎನ್ ವಿ, ನಟಿಯ ಅಣ್ಣನ ಪಾತ್ರದಲ್ಲಿ ವೀರೇಶ್ ರಾಯಚೂರು, ಸಹ ಕಲಾವಿದರಾಗಿ ದತ್ತಾತ್ರೇಯ ಹಿಪ್ಪರಗಿ, ವೀರೇಶ ಎಸ್ ಎಚ್, ಪೃಥ್ವಿ ನಾಯಕ, ಸಿದ್ದು ತಳ್ಳೋಳ್ಳಿ ಸೇರಿದಂತೆ ಇನ್ನಿತರರು ಅಭಿನಯಿಸಿದ್ದಾರೆ. ಲಕ್ಕಿ ಎಸ್ ವಿ ನಿರ್ದೇಶನದಲ್ಲಿ, ರವಿ ಕುಂಟೋಜಿ ಛಾಯಾಗ್ರಹಣ, ಸಂಕಲನ ವಿಕ್ಕಿ, ಸಹಕಾರ ನಿರ್ದೇಶಕ ಪವನ್ ಕುಮಾರ್ ಬೂದಿಹಾಳ, ಸಹ ನಿರ್ದೇಶಕ ಮಲ್ಲು ಎನ್ ವಿ, ಸುಧಾ ಹಾದಿಮನಿ, ಪ್ರೊಡಕ್ಷನ್ಸ್ ಹೆಡ್ ಸಿದ್ದು ತಳ್ಳೋಳ್ಳಿ, ಮೇಕಪ್ ವೀರೇಶ್, ಪೋಸ್ಟರ್ ಡಿಸೈನ್ ಸುಭಾಷ್ ಅರಸ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ ವೀರೇಶ್ ಹಂಡಗಿ, ಹರೀಶ್ ಅರಸು, ಉಮೇಶ್ ಕೆ ಎನ್, ಸೇರಿದಂತೆ ಇನ್ನಿತರರು ತಂಡದಲ್ಲಿದ್ದಾರೆ.

ವರದಿ:ಡಾ.ಪ್ರಭು ಗಂಜಿಹಾಳ
ಮೊ-9448775346….

###################################

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!