Friday, June 20, 2025
Google search engine
Homeರಾಜ್ಯಮಧು ಬಂಗಾರಪ್ಪ ಸಮ್ಮುಖದಲ್ಲಿ ಶಿರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ಗೌಡ್ರು ತಮ್ಮ ಅಪಾರ...

ಮಧು ಬಂಗಾರಪ್ಪ ಸಮ್ಮುಖದಲ್ಲಿ ಶಿರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ಗೌಡ್ರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ..!!

ಶಿರವಂತೆ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ಶಿರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ಗೌಡ್ರು ಹಾಗೂ ಅಪಾರವಾದ ಬೆಂಬಲಿಗರೊಂದಿಗೆ ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಅಭ್ಯರ್ಥಿ ಮಧು ಬಂಗಾರಪ್ಪ ಸಮ್ಮುಖದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಗಾಳಿಪುರ ಲೋಕೇಶ್ ಮಾಜಿ ಅಧ್ಯಕ್ಷರು ಶಿರವಂತೆ ಗ್ರಾಮ ಪಂಚಾಯಿತಿ ಸಾರಥ್ಯದಲ್ಲಿ ಸೇರ್ಪಡೆಯಾದರು.

ಶಿರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ಗೌಡ್ರು ಪ್ರಾಮಾಣಿಕವಾಗಿ ನಿಸ್ವಾರ್ಥ ಸೇವೆ ಮಾಡುತ್ತಾ ಜನಮಾನಸದಲ್ಲಿ ಹೆಸರುವಾಸಿಯಾಗಿದ್ದು, ಇವರ ಜೊತೆ ಅಪಾರವಾದ ಬೆಂಬಲಿಗರನ್ನೂ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ಈ ಭಾಗದಲ್ಲಿ ಆನೆಬಲ ಬಂದಂತೆಯಾಗಿದೆ ಎಂದು ಮಧು ಬಂಗಾರಪ್ಪ ಮಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು

ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನೂ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಬಿಜೆಪಿ ಪಕ್ಷದ ಮುಖಂಡರುಗಳು ನಿರ್ಲಕ್ಷ ಮಾಡಿರುವುದಕ್ಕೆ ಬೇಸತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ಸೊರಬ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಮಧು ಬಂಗಾರಪ್ಪರವನ್ನು ಅತೀ ಹೆಚ್ಚಿನ ಬಹುಮತದಿಂದ ಗೆಲ್ಲಿಸಿವುದೇ ನನ್ನ ಹಾಗೂ ನನ್ನ ಜೊತೆ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನನ್ನ ಆತ್ಮೀಯ ಬೆಂಬಲಿಗರ ಗುರಿ ಎಂದು ಶಿರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ಗೌಡ್ರು ಮಾಧ್ಯಮ ಹೇಳಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ತಾಳಗುಪ್ಪ ಹೋಬಳಿಯ ಅಧ್ಯಕ್ಷರಾದ ಶಿವಮೂರ್ತಿ ಮಂಡಗಳಲೆ, ಲೋಕೇಶ್ ಗಾಳಿಪುರ, ಬಸವರಾಜ್ ಗಾಳಿಪುರ, ಜಗದೀಶ್ ಗಾಳಿಪುರ, ಮನೋಜ್ ಜನ್ನೆಹಕ್ಲು ಅಶೋಕ್ ಮರಗಿ ಬರದವಳ್ಳಿ, ಮೈಲಪ್ಪ ಗಾಳಿಪುರ, ಶಿರವಂತೆ ಘಟಕದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚಂದ್ರಣ್ಣ ಬರದವಳ್ಳಿ, ಗಾಳಿಪುರ ಬೂತ್ ಕಮಿಟಿ ಅಧ್ಯಕ್ಷ ಕೃಷ್ಣಪ್ಪ ಗಾಳಿಪುರ ಇನ್ನಿತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು..

ಓಂಕಾರ್ ಎಸ್ ವಿ ತಾಳಗುಪ್ಪ….

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!