Tuesday, 17 November 2026 — News Warriors

News Warriors

Kannada News Portal Shimoga : Local News

BREAKING NEWS
ಶಿವಮೊಗ್ಗ Shivamogga :10 ಸಾವಿರ ಸಾಲ ₹35 ಸಾವಿರವಾಗಿದ್ದು ಹೇಗೆ? ಮೂಲ ಬಾರ್‌ನಲ್ಲಿ ನಡೆದಿದ್ದೇನು? ಸಾವಿನ ಸುತ್ತ ಅನುಮಾನದ ಹುತ್ತ..! ರಾಜ್ಯ Shivamogga :ನಾಲ್ಕು ಸದನಗಳ ಅನುಭವ ಹೊಂದಿರುವ ಆಯನೂರು ಮಂಜುನಾಥ್‌ಗೆ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿದೆಯೇ..?! ಶಿವಮೊಗ್ಗ Shivamogga : ಸಾಗರ ಉಪವಿಭಾಗದ ಆಡಳಿತಕ್ಕೆ ಅನುಭವಿ ಅಧಿಕಾರಿ ಜಿ.ಹೆಚ್. ಸತ್ಯನಾರಾಯಣ್ ನೇಮಕ..! ಶಿವಮೊಗ್ಗ ನೆಹರು ಕ್ರೀಡಾಂಗಣದ ಅಂದಗೆಡಿಸುತ್ತಿದ್ದ ಫ್ಲೆಕ್ಸ್‌ಗಳಿಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಖಡಕ್ ಆದೇಶಕ್ಕೆ ಸಾರ್ವಜನಿಕರ ಮೆಚ್ಚುಗೆ..! ಶಿವಮೊಗ್ಗ Big news: ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಲಕ್ಷ ಲಕ್ಷ ಎತ್ತುವಳಿ..! ವರ್ಗಾವಣೆಗೂ ಮುನ್ನ ಡಿಸಿ ಕವಳಿಕಟ್ಟಿ ನೀಡಿದ ಆದೇಶವೇನು..?! ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ..?!Big news: Lakhs of rupees extorted in the names of the Deputy Commissioner and the Additional Deputy Commissioner! What order did DC Kavalikatti issue just before his transfer?! Is there a connection between his transfer and this incident..?! ಶಿವಮೊಗ್ಗ Shivamogga breaking :ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ರಂಪಾಟ: ಅನಾಹುತ ನಿವಾರಣೆಗೆ ದೇವರ ಮೊರೆ ಹೋದ ಅರ್ಚಕರು..! ರಾಜ್ಯ Big news :2011ರ ಕೆಎಎಸ್ ನೇಮಕಾತಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್! 2022ರ ನೇಮಕಾತಿ ಸಿಂಧುಗೊಳಿಸುವ ಕಾಯ್ದೆ ಅಸಂವಿಧಾನಿಕ; ನೇಮಕಗೊಂಡ ಅಧಿಕಾರಿಗಳ ಸೇವೆ ಅಂತ್ಯಕ್ಕೆ ಆದೇಶ! ರಾಜ್ಯ Big news: ರಾಜ್ಯ ಆರೋಗ್ಯ ಇಲಾಖೆಗೆ ಭರ್ಜರಿ ಸರ್ಜರಿ – ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೂ ಮಹತ್ವದ ಬದಲಾವಣೆ..! ಶಿವಮೊಗ್ಗ Shivamogga :10 ಸಾವಿರ ಸಾಲ ₹35 ಸಾವಿರವಾಗಿದ್ದು ಹೇಗೆ? ಮೂಲ ಬಾರ್‌ನಲ್ಲಿ ನಡೆದಿದ್ದೇನು? ಸಾವಿನ ಸುತ್ತ ಅನುಮಾನದ ಹುತ್ತ..! ರಾಜ್ಯ Shivamogga :ನಾಲ್ಕು ಸದನಗಳ ಅನುಭವ ಹೊಂದಿರುವ ಆಯನೂರು ಮಂಜುನಾಥ್‌ಗೆ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿದೆಯೇ..?! ಶಿವಮೊಗ್ಗ Shivamogga : ಸಾಗರ ಉಪವಿಭಾಗದ ಆಡಳಿತಕ್ಕೆ ಅನುಭವಿ ಅಧಿಕಾರಿ ಜಿ.ಹೆಚ್. ಸತ್ಯನಾರಾಯಣ್ ನೇಮಕ..! ಶಿವಮೊಗ್ಗ ನೆಹರು ಕ್ರೀಡಾಂಗಣದ ಅಂದಗೆಡಿಸುತ್ತಿದ್ದ ಫ್ಲೆಕ್ಸ್‌ಗಳಿಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಖಡಕ್ ಆದೇಶಕ್ಕೆ ಸಾರ್ವಜನಿಕರ ಮೆಚ್ಚುಗೆ..! ಶಿವಮೊಗ್ಗ Big news: ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಲಕ್ಷ ಲಕ್ಷ ಎತ್ತುವಳಿ..! ವರ್ಗಾವಣೆಗೂ ಮುನ್ನ ಡಿಸಿ ಕವಳಿಕಟ್ಟಿ ನೀಡಿದ ಆದೇಶವೇನು..?! ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ..?!Big news: Lakhs of rupees extorted in the names of the Deputy Commissioner and the Additional Deputy Commissioner! What order did DC Kavalikatti issue just before his transfer?! Is there a connection between his transfer and this incident..?! ಶಿವಮೊಗ್ಗ Shivamogga breaking :ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ರಂಪಾಟ: ಅನಾಹುತ ನಿವಾರಣೆಗೆ ದೇವರ ಮೊರೆ ಹೋದ ಅರ್ಚಕರು..! ರಾಜ್ಯ Big news :2011ರ ಕೆಎಎಸ್ ನೇಮಕಾತಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್! 2022ರ ನೇಮಕಾತಿ ಸಿಂಧುಗೊಳಿಸುವ ಕಾಯ್ದೆ ಅಸಂವಿಧಾನಿಕ; ನೇಮಕಗೊಂಡ ಅಧಿಕಾರಿಗಳ ಸೇವೆ ಅಂತ್ಯಕ್ಕೆ ಆದೇಶ! ರಾಜ್ಯ Big news: ರಾಜ್ಯ ಆರೋಗ್ಯ ಇಲಾಖೆಗೆ ಭರ್ಜರಿ ಸರ್ಜರಿ – ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೂ ಮಹತ್ವದ ಬದಲಾವಣೆ..!
ಆರೋಗ್ಯ

Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ್ತಂಗಡಿ ಏನು ಇವರ ವಿಶೇಷ..?!

EDITOR NEWS WARRIORS
ವರದಿ: EDITOR NEWS WARRIORS ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 32 ವೀಕ್ಷಣೆಗಳು
ಶಿವಮೊಗ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡು ಹಲವು ವರ್ಷಗಳಿಂದ ಇಲಾಖೆಯಲ್ಲಿ ಬಿಡು ಬಿಟ್ಟಿದ್ದ ಸಿಬ್ಬಂದಿಗಳನ್ನು ಹಾಗೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿ  ವರ್ಗಾವಣೆಯಲ್ಲಿ ಕೌನ್ಸಿಲಿಂಗ್ ಪದ್ಧತಿಯನ್ನು ಸಮಗ್ರವಾಗಿ ಜಾರಿಗೆ ಆಗುವಂತೆ ನೋಡಿಕೊಂಡು ಹಲವು ಅಧಿಕಾರಿಗಳ ಸಿಬ್ಬಂದಿಗಳ ತಲೆ ನೋವಿಗೆ ಕಾರಣವಾಗಿದ್ದ  ಪ್ರಿನ್ಸಿಪಾಲ್ ಸೆಕ್ರೆಟರಿ ಹರ್ಷ ಗುಪ್ತಾ  ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ  ಎತ್ತಂಗಡಿ ಆಗಿದ್ದಾರೆ.
26 ವರ್ಷದ ಸೇವೆಯಲ್ಲಿ 30 ಸಲ ಎತ್ತಂಗಡಿ..!
26 ವರ್ಷದ ಸೇವಾವಧಿಯಲ್ಲಿ 30 ಸಲ ಏಕಾಏಕಿ ಎತ್ತಂಗಡಿ ಆಗಿ ದಾಖಲೆ ಮಾಡಿರುವ ಐಎಎಸ್‌ ಅಧಿಕಾರಿ ಹರ್ಷ ಗುಪ್ತಾ  ಅವರನ್ನು ಆರೋಗ್ಯ ಇಲಾಖೆಯಿಂದಲೂ ವರ್ಗಾವಣೆ ಮಾಡಿದ್ದು   ಸದ್ಯಕ್ಕೆ ಅವರಿಗೆ ಬೇರೊಂದು ಇಲಾಖೆಗೆ ಸ್ಥಳ ನಿಯುಕ್ತಿ ಮಾಡಿಲ್ಲ ಎನ್ನುವುದೇ ವಿಶೇಷ.
ವಿಚಿತ್ರ  ವಿಲಕ್ಷಣ  ನಡವಳಿಕೆಯ ಐಎಎಸ್ ಅಧಿಕಾರಿ..!
ಕೆಲವೊಂದು ಅಧಿಕಾರಿಗಳೇ ಹಾಗೆ ಒಂತರಾ ವಿಚಿತ್ರ ಒಂತರಾ ವಿಲಕ್ಷಣ ಮನೋಭಾವನೆ ಯವರು ತಾವು ಅಂದುಕೊಂಡ ಕೆಲಸಗಳನ್ನು ಯಾವುದೇ ಅಡ್ಡಿ ಆತಂಕಗಳು ಬಂದರೂ ಕೂಡ ಬಿಡದೆ ಮಾಡುವಂತವರು ಇಂತವರ ಸಾಲಿನಲ್ಲಿ ನಿಲ್ಲುವ ಹಲವು ಅಧಿಕಾರಿಗಳಲ್ಲಿ ಹರ್ಷಗುಪ್ತಾ  ಕೂಡ ಒಬ್ಬರು ತಮ್ಮದೇ ಇಲಾಖೆಯ ಸಿಬ್ಬಂದಿಗಳನ್ನು ಅಧಿಕಾರಿಗಳನ್ನು ರಾಜಕಾರಣಿಗಳನ್ನು ನಿಷ್ಠುರ  ಮಾಡಿಕೊಂಡು ಹಲವು  ಮಹತ್ವದ ‌ಸುಧಾರಣೆಗಳನ್ನು ತಂದರು ಇದೆ ಅವರಿಗೆ ಮುಳುವಾಯಿತು ಎನ್ನಬಹುದು.
ನಿಶಾಚರಿ ಅಧಿಕಾರಿ..!
ರಾತ್ರಿ ಸುಮಾರು ಎರಡು ಗಂಟೆವರೆಗೂ ಕಾರ್ಯನಿರ್ವಹಿಸುವ ವ್ಯಕ್ತಿಯಾಗಿದ್ದ ಹರ್ಷಗುಪ್ತಾ ಯಾರದೇ ಮೆಸೇಜ್ ಅಥವಾ ಕರೆ ಬಂದರೂ ಕೂಡ ಅವರಿಗೆ ಸ್ಪಂದಿಸಿ ಆ ಸಮಸ್ಯೆಗೆ ಪರಿಹಾರ  ನೀಡುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದ್ದ ವ್ಯಕ್ತಿ.
ಬೆಂಗಳೂರಿನ ಅಧಿಕಾರಿಗಳು ಸಿಬ್ಬಂದಿಗಳೇ ಇವರ ಟಾರ್ಗೆಟ್ ಆಗಿದ್ದರು..!
ರಾಜ್ಯದ ರಾಜಧಾನಿ ಬೆಂಗಳೂರನಲ್ಲಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಬಹಳ ವರ್ಷಗಳಿಂದ ಬೀಡು ಬಿಟ್ಟು ತಮ್ಮದೇ ಆದ ಶಿಫಾರಸ್ಸುಗಳನ್ನು ಬಳಸಿಕೊಂಡು ಇದ್ದ ಹಲವು ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಬೇರೆಡೆ ವರ್ಗಾವಣೆ ಮಾಡುವ ಉದ್ದೇಶದಿಂದ ಮಹತ್ವದ ತೀರ್ಮಾನಗಳನ್ನು ಹರ್ಷ ಗುಪ್ತಾ ತೆಗೆದುಕೊಂಡರು. ಆದರೆ ಅದು ಇಡೀ ಕರ್ನಾಟಕದ ಸಿಬ್ಬಂದಿಗಳಿಗೂ ಅಧಿಕಾರಿಗಳಿಗೂ ಅನ್ವಯಿಸಿದ್ದು ಇದು ಹಲವರಿಗೆ ಸಮಸ್ಯೆಗಳನ್ನು ತಂದೊಡ್ಡಿತ್ತು ಕೆಲವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಇನ್ನೂ ಕೆಲವರು ಮಕ್ಕಳ ವಿದ್ಯಾಭ್ಯಾಸ ಓದು ಇತ್ಯಾದಿ ಕಡೆ ಗಮನಹರಿಸಿ ಒಂದೆಡೆ ವಾಸಿಸುತ್ತಿದ್ದರು ಅವರನ್ನು ಕೂಡ ‌ ಇವರ ಆದೇಶ ಡಿಸ್ಟರ್ಬ್ ಮಾಡಿಬಿಟ್ಟಿತ್ತು ಇದರಿಂದ ಒಂದು ರೀತಿ ಇಡೀ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹರ್ಷ ಗುಪ್ತಾ ವಿಲನ್ ರೀತಿ ಕಾಣಿಸಿಕೊಂಡಿದ್ದರು.
ನೆಮ್ಮದಿಯ ನಿಟ್ಟುಸಿರು ಬಿಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು..!
ಹರ್ಷ ಗುಪ್ತಾ ವರ್ಗಾವಣೆಯಿಂದ ಒಂದಷ್ಟು ಜನ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಚಿವರ ಆಪ್ತರು ರಾಜಕಾರಣಿಗಳು ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಘುರಾಜ್ ಹೆಚ್‌ ಕೆ..9449553305…
👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 2011 ಲೇಖನಗಳು

EDITOR NEWS WARRIORS

EDITOR NEWS WARRIORS ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.