Tuesday, 17 November 2026 — News Warriors

News Warriors

Kannada News Portal Shimoga : Local News

BREAKING NEWS
ಶಿವಮೊಗ್ಗ Shivamogga :10 ಸಾವಿರ ಸಾಲ ₹35 ಸಾವಿರವಾಗಿದ್ದು ಹೇಗೆ? ಮೂಲ ಬಾರ್‌ನಲ್ಲಿ ನಡೆದಿದ್ದೇನು? ಸಾವಿನ ಸುತ್ತ ಅನುಮಾನದ ಹುತ್ತ..! ರಾಜ್ಯ Shivamogga :ನಾಲ್ಕು ಸದನಗಳ ಅನುಭವ ಹೊಂದಿರುವ ಆಯನೂರು ಮಂಜುನಾಥ್‌ಗೆ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿದೆಯೇ..?! ಶಿವಮೊಗ್ಗ Shivamogga : ಸಾಗರ ಉಪವಿಭಾಗದ ಆಡಳಿತಕ್ಕೆ ಅನುಭವಿ ಅಧಿಕಾರಿ ಜಿ.ಹೆಚ್. ಸತ್ಯನಾರಾಯಣ್ ನೇಮಕ..! ಶಿವಮೊಗ್ಗ ನೆಹರು ಕ್ರೀಡಾಂಗಣದ ಅಂದಗೆಡಿಸುತ್ತಿದ್ದ ಫ್ಲೆಕ್ಸ್‌ಗಳಿಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಖಡಕ್ ಆದೇಶಕ್ಕೆ ಸಾರ್ವಜನಿಕರ ಮೆಚ್ಚುಗೆ..! ಶಿವಮೊಗ್ಗ Big news: ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಲಕ್ಷ ಲಕ್ಷ ಎತ್ತುವಳಿ..! ವರ್ಗಾವಣೆಗೂ ಮುನ್ನ ಡಿಸಿ ಕವಳಿಕಟ್ಟಿ ನೀಡಿದ ಆದೇಶವೇನು..?! ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ..?!Big news: Lakhs of rupees extorted in the names of the Deputy Commissioner and the Additional Deputy Commissioner! What order did DC Kavalikatti issue just before his transfer?! Is there a connection between his transfer and this incident..?! ಶಿವಮೊಗ್ಗ Shivamogga breaking :ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ರಂಪಾಟ: ಅನಾಹುತ ನಿವಾರಣೆಗೆ ದೇವರ ಮೊರೆ ಹೋದ ಅರ್ಚಕರು..! ರಾಜ್ಯ Big news :2011ರ ಕೆಎಎಸ್ ನೇಮಕಾತಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್! 2022ರ ನೇಮಕಾತಿ ಸಿಂಧುಗೊಳಿಸುವ ಕಾಯ್ದೆ ಅಸಂವಿಧಾನಿಕ; ನೇಮಕಗೊಂಡ ಅಧಿಕಾರಿಗಳ ಸೇವೆ ಅಂತ್ಯಕ್ಕೆ ಆದೇಶ! ರಾಜ್ಯ Big news: ರಾಜ್ಯ ಆರೋಗ್ಯ ಇಲಾಖೆಗೆ ಭರ್ಜರಿ ಸರ್ಜರಿ – ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೂ ಮಹತ್ವದ ಬದಲಾವಣೆ..! ಶಿವಮೊಗ್ಗ Shivamogga :10 ಸಾವಿರ ಸಾಲ ₹35 ಸಾವಿರವಾಗಿದ್ದು ಹೇಗೆ? ಮೂಲ ಬಾರ್‌ನಲ್ಲಿ ನಡೆದಿದ್ದೇನು? ಸಾವಿನ ಸುತ್ತ ಅನುಮಾನದ ಹುತ್ತ..! ರಾಜ್ಯ Shivamogga :ನಾಲ್ಕು ಸದನಗಳ ಅನುಭವ ಹೊಂದಿರುವ ಆಯನೂರು ಮಂಜುನಾಥ್‌ಗೆ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿದೆಯೇ..?! ಶಿವಮೊಗ್ಗ Shivamogga : ಸಾಗರ ಉಪವಿಭಾಗದ ಆಡಳಿತಕ್ಕೆ ಅನುಭವಿ ಅಧಿಕಾರಿ ಜಿ.ಹೆಚ್. ಸತ್ಯನಾರಾಯಣ್ ನೇಮಕ..! ಶಿವಮೊಗ್ಗ ನೆಹರು ಕ್ರೀಡಾಂಗಣದ ಅಂದಗೆಡಿಸುತ್ತಿದ್ದ ಫ್ಲೆಕ್ಸ್‌ಗಳಿಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಖಡಕ್ ಆದೇಶಕ್ಕೆ ಸಾರ್ವಜನಿಕರ ಮೆಚ್ಚುಗೆ..! ಶಿವಮೊಗ್ಗ Big news: ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಲಕ್ಷ ಲಕ್ಷ ಎತ್ತುವಳಿ..! ವರ್ಗಾವಣೆಗೂ ಮುನ್ನ ಡಿಸಿ ಕವಳಿಕಟ್ಟಿ ನೀಡಿದ ಆದೇಶವೇನು..?! ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ..?!Big news: Lakhs of rupees extorted in the names of the Deputy Commissioner and the Additional Deputy Commissioner! What order did DC Kavalikatti issue just before his transfer?! Is there a connection between his transfer and this incident..?! ಶಿವಮೊಗ್ಗ Shivamogga breaking :ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ರಂಪಾಟ: ಅನಾಹುತ ನಿವಾರಣೆಗೆ ದೇವರ ಮೊರೆ ಹೋದ ಅರ್ಚಕರು..! ರಾಜ್ಯ Big news :2011ರ ಕೆಎಎಸ್ ನೇಮಕಾತಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್! 2022ರ ನೇಮಕಾತಿ ಸಿಂಧುಗೊಳಿಸುವ ಕಾಯ್ದೆ ಅಸಂವಿಧಾನಿಕ; ನೇಮಕಗೊಂಡ ಅಧಿಕಾರಿಗಳ ಸೇವೆ ಅಂತ್ಯಕ್ಕೆ ಆದೇಶ! ರಾಜ್ಯ Big news: ರಾಜ್ಯ ಆರೋಗ್ಯ ಇಲಾಖೆಗೆ ಭರ್ಜರಿ ಸರ್ಜರಿ – ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೂ ಮಹತ್ವದ ಬದಲಾವಣೆ..!
ಶಿವಮೊಗ್ಗ

Shivamogga Traffic police: ಪಶ್ಚಿಮ ಸಂಚಾರಿ ಠಾಣೆ ಪಿಎಸ್ಐ ತಿರುಮಲೇಶ್ ಉತ್ತಮ ಕಾರ್ಯ ವೀಲಿಂಗ್ ಸವಾರರಿಗೆ ನ್ಯಾಯಾಲಯದಿಂದ ಬಿತ್ತು ದಂಡ..!

EDITOR NEWS WARRIORS
ವರದಿ: EDITOR NEWS WARRIORS ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 12 ವೀಕ್ಷಣೆಗಳು

ಶಿವಮೊಗ್ಗ: ನಗರದಲ್ಲಿ ಇತ್ತೀಚಿಗೆ ಬೈಕ್ ವೀಲಿಂಗ್ ಸವಾರರ ಹಾವಳಿ ಮಿತಿಮೀರಿದ್ದು ಟ್ರಾಫಿಕ್ ಪೊಲೀಸ್ ನವರು ಇದಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ತಮ್ಮ ಜೀವಕ್ಕೆ ಅಪಾಯ ಮಾಡಿಕೊಳ್ಳುವುದರ ಜೊತೆಗೆ ಬೇರೆಯವರಿಗೂ ತೊಂದರೆ ನೀಡುತ್ತಿರುವವರ ಇಂಥವರ ವಿರುದ್ಧ ಶಿವಮೊಗ್ಗ ಜಿಲ್ಲಾ ಟ್ರಾಫಿಕ್ ಪೊಲೀಸ್ ನವರು ಸಿಡಿದೆದ್ದಿದ್ದು ಎಲ್ಲೆಡೆ ಪ್ರಕರಣಗಳನ್ನು ದಾಖಲು ಮಾಡುತ್ತಿದ್ದಾರೆ. ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘನ ನ್ಯಾಯಾಲಯ ಕೂಡ ಇಂತಾ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದು ನಿರಂತರವಾಗಿ ದಂಡ ವಿಧಿಸುತ್ತಿದ್ದಾರೆ. ಅಂತದ್ದೇ ಒಂದು ಪ್ರಕರಣದಲ್ಲಿ ದಿನಾಂಕ15/08/2023 ರಂದು ಬೆಳಿಗ್ಗೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ವಿನೋಬನಗರ ಡಿ.ವಿ.ಎಸ್. ಶಾಲೆ ಮುಂಭಾಗದ 100 ಅಡಿ ರಸ್ತೆಯಲ್ಲಿ ಫೈಸಲ್ ಅಹ್ಮದ್ ಮತ್ತು ಸೂಫಿಯಾನ್ ಖಾನ್ ಎಂಬ ಯುವಕರಿಬ್ಬರು ಎರಡು YAMAHA RX ಬೈಕಿಗಳಲ್ಲಿ ಅತಿ ವೇಗ, ಅಜಾಗರುಕತೆ ಮತ್ತು ಅಪಾಯಕಾರಿ ರೀತಿಯಲ್ಲಿ ಸಾರ್ವಜನಿಕರ ಮತ್ತು ತನ್ನ ಪ್ರಾಣಕ್ಕೆ ಹಾನಿಯಾಗುವಂತೆ ವ್ಹೀಲಿಂಗ್ ಮಾಡುತ್ತಿದ್ದು,ಈ ಬಗ್ಗೆ ಗುನ್ನೆ ಸಂಖ್ಯೆ 0107/2023 ಕಲಂ 279 ಐಪಿಸಿ, 184, 189, 177 ಐಎಂವಿ ಕಾಯ್ದೆ ಮತ್ತು 51 ಸಿಎಂವಿ ರೂಲ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತಾರೆ

ಶಿವಮೊಗ್ಗ ಪಶ್ಚಿಮ ಸಂಚಾರಿ ಠಾಣೆಯ ಪಿಎಸ್ಐ ಆದ ತಿರುಮಲೇಶ್ ಅವರು ಈ ಪ್ರಕರಣದ ತನಿಖಾಧಿಕಾರಿಗಳಾಗಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೈಕ್ ಗಳ ಚಾಲಕರು & ಮಾಲೀಕ ಸೇರಿ 3 ಜನ ಆರೋಪಿತರ ವಿರುದ್ದ ಘನ ನ್ಯಾಯಾಲಯಕ್ಕೆ ದೋಷರೋಪಣ ಪತ್ರವನ್ನು ಸಲ್ಲಿಸಿದರು. ಘನ ನ್ಯಾಯಾಲಯದಲ್ಲಿ ಕಿರಣ್ ಕುಮಾರ್ ಸಹಾಯಕ ಸರ್ಕಾರಿ ಅಭಿಯೋಜಕರು ಪ್ರಕರಣದ ವಾದ ಮಂಡಿಸಿದ್ದು, ಘನ 3ನೇ ಎಸಿಜೆ & ಜೆಎಂಎಫ್ ಸಿ, ಶಿವಮೊಗ್ಗ, ನ್ಯಾಯಾಲಯದಲ್ಲಿಪ್ರಕರಣದ ವಿಚಾರಣೆ ನಡೆದಿದ್ದು, ಪ್ರಕರಣದ ಆರೋಪಿತರ ವಿರುದ್ಧ ಆರೋಪ ದೃಢ ಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಧೀಶರಾದ ಮಾಯಪ್ಪ ರವರು ದಿನಾಂಕ:-06/12/2023ರಂದು ಆರೋಪಿ 1) ಫೈಸಲ್ ಅಹ್ಮದ್, 20 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 11,000 ರೂ, ದಂಡ, 2) ಸೂಫಿಯಾನ್ ಖಾನ್, 21 ವರ್ಷ ಟ್ಯಾಂಕ್ ಮೊಹಲ್ಲಾ , ಶಿವಮೊಗ್ಗ ಟೌನ್ ಈತನಿಗೆ 8000 ರೂ ದಂಡ ಮತ್ತು ಬೈಕಿನ ಆರ್ ಸಿ ಮಾಲೀಕನಾದ 3) ಮೊಹಮ್ಮದ್ ಸೈಫುಲ್ಲಾ, 50 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 4500 ರೂ ದಂಡ ವಿಧಿಸಿ ಆದೇಶ ನೀಡಿರುತ್ತಾರೆ.

ಇನ್ನು ಮುಂದಾದರೂ ವೀಲಿಂಗ್ ಮಾಡುವ ಬೈಕ್ ಸವಾರರು ಎಚ್ಚೆತ್ತುಕೊಂಡು ತಮಗೂ ಸಾಮಾಜಿಕ ಜವಾಬ್ದಾರಿ ಇದೆ ಎಂದು ಅರಿತುಕೊಂಡು ಇದ್ದರೆ ಒಳಿತು.

ರಘುರಾಜ್ ಹೆಚ್‌. ಕೆ.9449553305.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 2011 ಲೇಖನಗಳು

EDITOR NEWS WARRIORS

EDITOR NEWS WARRIORS ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.