ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಗೆ ನೂತನ ಪದಾಧಿಕಾರಿಗಳ ನೇಮಕ, ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಸ್ಥೆಗೆ ರಾಜ್ಯಾಧ್ಯಕ್ಷರಾಗಿ ಗಾರಾ.ಶ್ರೀನಿವಾಸ್ ಆಯ್ಕೆ,ಶಿವಮೊಗ್ಗ : ಮಾನವ ಹಕ್ಕುಗಳ ಕುರಿತಾಗಿ ಪ್ರತಿಪಾದಿಸುವುದು, ಸಾಮಾಜಿಕ ನ್ಯಾಯಕ್ಕಾಗಿ ಕಾನೂನು ರಿತ್ಯಾ ದನಿಯಾಗುವುದು, ವಿವಿಧ ಹಂತದ ಕಾರ್ಯಾಗಾರಗಳ ಹಮ್ಮಿಕೊಂಡು ಮನುಷ್ಯ ಬದುಕಿನ ಮೌಲ್ಯಗಳನ್ನು ಜಾಗೃತಿಗೊಳಿಸಿ ಅರಿವು ಮೂಡಿಸುವ ಕಾನೂನಾತ್ಮಕವಾದ ಹೆಜ್ಜೆಯ ಸದುದ್ದೇಶದಿಂದ ಕಟ್ಟಿದ ಸಂಸ್ಥೆ “ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ” ಗೆ ನೂತನ ಕಾರ್ಯಕಾರಿ ಮಂಡಳಿ ನೇಮಕ ಮಾಡಲಾಗಿದೆ,
ರಾಜ್ಯಾಧ್ಯಕ್ಷರಾಗಿ ಗಾರಾ.ಶ್ರೀನಿವಾಸ್, ಉಪಾಧ್ಯಕ್ಷರುಗಳಾಗಿ ಶಶಿ.ಕೆಎಸ್. ಎಲ್.ಕೆ ಪರಮೇಶ್ವರ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ್. ಎನ್.ವಿ, ಖಜಾಂಚಿಯಾಗಿ ಮಹೇಂದ್ರ.ಆರ್, ನಿರ್ದೇಶಕರುಗಳಾಗಿ ಗೋಪಾಲಕೃಷ್ಣ. ಜಿ.ಎನ್, ಚಿರಂಜೀವಿ ಬಾಬು, ರುದ್ರೇಶ್ ಯಾದವ್, ಸಿಬ್ಗತ್ ಉಲ್ಲಾ ಎನ್.ಎಂ, ಕಿರಣ್ ಕುಮಾರ್ ಹೆಚ್.ಎಸ್, ದಯಾನಂದ್ ಎಸ್.ವಿ, ಅನಿಲ್ ಕುಮಾರ್ ಹೆಚ್.ಎಲ್, ಇಮ್ರಾನ್.ಎಂ, ಲೋಕೇಶ್ ಫೈಲ್ವಾನ್, ಭರತ್ ಗುತ್ತಿ ರವರುಗಳನ್ನು ಆಯ್ಕೆ ಮಾಡಿ ಸಂಸ್ಥೆಯ ಜವಾಬ್ದಾರಿಗಳನ್ನು ಸಕ್ರಿಯವಾಗಿ ನಿರ್ವಹಿಸಲು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ತಿಳಿಸಿದೆ.
ಕಾನೂನು ಸಲಹೆಗಾರರಾಗಿ ವಕೀಲರಾದ ಗೀತಾ ಮಾನೆ ಅವರನ್ನು ನೇಮಕ ಮಾಡಿರುವುದು ಸಂಘಟನೆಯ ಬಲವರ್ಧನೆಗೆ ಮುನ್ನುಡಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.