ತೀರ್ಥಹಳ್ಳಿ: ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬಂದು ಇಡೀ ರಾಜ್ಯದಲ್ಲಿ ತೀರ್ಥಹಳ್ಳಿ ತಾಲೂಕಿಗೆ ಅ ಮೂಲಕ ಇಡೀ ಶಿವಮೊಗ್ಗ ಜಿಲ್ಲೆಗೆ ಹೆಸರು ತಂದ ತೀರ್ಥಹಳ್ಳಿಯ ಪ್ರತಿಭೆ ಕುಮಾರಿ ದೀಕ್ಷಾ ಅವರನ್ನು ಅವರ ಪ್ರತಿಭೆಗೆ ಗೌರವ ನೀಡಿ ಇನ್ನಷ್ಟು ಮಕ್ಕಳಿಗೆ ಉತ್ತೇಜನವಾಗಲಿ ಎನ್ನುವ ಉದ್ದೇಶದಿಂದ ಮಾಮ್ಕೋಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ರೂ.10,000 ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಮ್ಕೋಸ್ ಉಪಾಧ್ಯಕ್ಷರಾದ ಹೆಚ್.ಎಸ್.ಮಹೇಶ್ ಹುಲ್ಕುಳಿ, ಹಾಗೂ ನಿರ್ದೇಶಕರುಗಳಾದ ಹಸಿರುಮನೆ ನಂದನ್ , ಕೆ.ರತ್ನಾಕರ, ಶ್ರೀಮತಿ ಜಯಶ್ರೀ ಕೆ.ಕೆ. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕಾಂತ್ ಬರುವೆ ಮತ್ತು ಮಾಮ್ಕೋಸ್ ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.