
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ದಿನಾಂಕಗಳಂದು ಇಬ್ಬರು ಮಹಿಳೆಯರು ಕಾಣಿಯಾಗಿರುವ ಬಗ್ಗೆ ನೀಡಿದ ದೂರಿನನ್ವಯ ಮಾಹಿತಿಗಾಗಿ ಪೊಲೀಸ್ ಪ್ರಕಟಣೆ ಕೋರಿದೆ.
ನಗರದ ಹೊಸಮನೆ 5ನೇ ತಿರುವಿನಲ್ಲಿ ವಾಸವಿರುವ ಮಹೇಶ ಎಂಬುವವರ ಪತ್ನಿ ಆಶಾ ಎಂಬ ಮಹಿಳೆ ಜನವರಿ 29 ರಂದು ಮನೆಯಿಂದ ಕಾಣೆಯಾಗಿದ್ದು, ಈವರೆಗೂ ವಾಪಸ್ಸು ಬಂದಿರುವುದಿಲ್ಲ. ಈಕೆಯ ಚಹರೆ ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ತಲೆ ಕೂದಲು, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಇನ್ನೊಂದು ಪ್ರಕರಣದಲ್ಲಿ ಸವಾಯಿ ಪಾಳ್ಯ ವಾಸಿ ಶಬಾನಾ ಬಾನು ಕೋಂ ಲೇಟ್ ಹಿದಾಯಿತ್ತುಲ್ಲಾ ಎಂಬುವವರ ಮಗಳು ಆಯೀಶಾ ಮೆಹಕ್ ಎಂಬ 22 ವರ್ಷದ ಮಹಿಳೆ ದಿ: 16/06/2024ರಂದು ಮನೆಯಿಂದ ಕಾಣೆಯಾಗಿರುತ್ತಾರೆ. ಈಕೆ ಮಾನಸಿಕ ಅಸ್ವಸ್ಥಳಾಗಿದ್ದು, ಮೆಗ್ಗಾನ್ ಆಸ್ಪತ್ರೆ ಹಾಗೂ ಮಾನಸಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈಕೆಯ ಚಹರೆ 4 ಅಡಿ ಎತ್ತರ, ಕೋಲುಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಪ್ರಾಕ್ ಹಾಗೂ ಲೆಗಿನ್ಸ್ ಧರಿಸಿರುತ್ತಾರೆ.
ಕಾಣೆಯಾದ ಈ ಇಬ್ಬರು ಮಹಿಳೆಯರ ಬಗ್ಗೆ ಯಾವುದೇ ಮಾಹಿತಿಯಿದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.