ಶಿಕ್ಷಣ ಸಚಿವ ಹಾಗೂ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರ ಮಗ ಸೂರ್ಯ ಮಧು ಬಂಗಾರಪ್ಪ ಐಸಿಎಸ್ಸಿ 12ನೇ ತರಗತಿಯ ಪರೀಕ್ಷೆಯಲ್ಲಿ 98.25% ಅಂಕ ಗಳಿಸಿ ವಿಜ್ಞಾನ ವಿಭಾಗದಲ್ಲಿ ಬಿಷಪ್ ಕಾಟನ್ ಶಾಲೆಗೆ ಮೊದಲನೇ ರ್ಯಾಂಕ್ ಪಡೆದಿದ್ದಾರೆ .
ಮಗನ ಸಾಧನೆಗೆ ಅಪ್ಪನ ಸಂತೋಷ :
ಮಗ ಸೂರ್ಯನ ಸಾಧನೆಗೆ ಅವನ ಶ್ರಮ, ಸಮರ್ಪಣೆ ಮತ್ತು ದೃಢ ಸಂಕಲ್ಪಕ್ಕೆ ಸಿಕ್ಕಿರುವ ಫಲ. ಅವನ ಈ ಸಾಧನೆಗೆ ನಾನು ಹೆಮ್ಮೆಪಡುತ್ತೇನೆ ಮತ್ತು ಅವನ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತೇನೆ. ಹಾಗೂ ಮಾರ್ಗದರ್ಶನ ನೀಡಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತೆನೆ.. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳಿಗೆ ಧನ್ಯವಾದಗಳು ಎಂದಿದ್ದಾರೆ.