ಭದ್ರಾವತಿ : ಹಳೆ ವೈಶ್ಯಮದ ಹಿನ್ನೆಲೆಯಲ್ಲಿ ಗಲಾಟೆ ಮಾಡಿಕೊಂಡ ಭದ್ರಾವತಿಯ ಎರಡು ಯುವಕರ ಗುಂಪುಗಳು ರಾತ್ರಿ ರಾಜಿ ವಿಚಾರಕ್ಕೆ ಮಾತುಕತೆಗೆ ಕರೆದಾಗ ಗಾಂಜಾ ಹಾಗೂ ಎಣ್ಣೆಯ ಮತ್ತಿನಲ್ಲಿದ್ದ ಗುಂಪುಗಳು ಅರುಣ್ ಎಂಬಾತನ ಮೇಲೆ ದಾಳಿ ಮಾಡಿ ಅರುಣ್, ಸಚಿನ್, ಸಂಜೀವ್ , ಮುಂತಾದವರು ಸೇರಿಕೊಂಡು ಕೊಲೆ ಮಾಡಿರುತ್ತಾರೆ.
ನಿನ್ನೆ ಮಧ್ಯಾಹ್ನ ಕ್ರಿಕೆಟ್ ಪಂದ್ಯ ಆಡಿದ ಈ ಗುಂಪುಗಳ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಕೊಲೆಯಾಗಿರುವ ಅರುಣ್, ಸಚಿನ್ ಎಂಬಾತನ ಕಪಾಳಕ್ಕೆ ಹೊಡೆದಿರುತ್ತಾನೆ. ನಂತರ ಸಂಜೆ ವೇಳೆಗೆ ಸಚಿನ್ ಸಹ ಅರುಣ್ ಗೆ ಕಪಾಳಕ್ಕೆ ಹೊಡೆದಿದ್ದಾನೆ. ನಂತರ ರಾತ್ರಿ 10:30 ವೇಳೆಗೆ ಅರುಣ್ ನನ್ನು ಕರೆಸಿಕೊಂಡ ಸಚಿನ್ ಅರುಣ್ ಮತ್ತು ಸಂಜು ಗುಂಪು ಅರುಣ್ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುತ್ತಾರೆ ಸಂಜೀವ್ ಎಂಬಾತನು ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಈತನೊಂದಿಗೆ ಐದು ಜನರನ್ನು ವಶಕ್ಕೆ ಪಡೆಯಲಾಗಿದೆ. ಇವರೆಲ್ಲಾ ಸ್ನೇಹಿತರಾಗಿದ್ದು ಒಂದೇ ಏರಿಯಾದವರಾಗಿರುತ್ತಾರೆ. ಅರುಣ್ ಮತ್ತು ಸಚಿನ್ ಮದ್ಯ ಉಂಟಾಗಿದ್ದ ಹಳೆ ವೈಶ್ಯಮ್ಯ ಈ ಸಾವಿಗೆ ಕಾರಣವಾಗಿದ್ದು.
ಇಂದು ಪೊಲೀಸರು ಅರುಣ್ ಅಲಿಯಾಸ್ ಕುಕ್ಕು ಕುಮಾರ ನನ್ನು ಹಿಡಿಯಲು ಪ್ರಯತ್ನಿಸಿದಾಗ ಹನುಮಂತ ಅಮತಿ ಎನ್ನುವ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಯತ್ನಿಸಿ ಪರಾರಿ ಯಾಗಲು ಪ್ರಯತ್ನಿಸಿದಾಗ ಹೊಸಮನೆಯ ವ್ಯಾಪ್ತಿಯ ಪೊಲೀಸ್ ಠಾಣೆಯ ಪಿ ಎಸ್ ಕೃಷ್ಣಕುಮಾರ್ ಮನೆ ಆರೋಪಿ ಅರುಣ್ ಕಾಲಿಗೆ ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಅರುಣ್ ಮೇಲೆ ಐದು ಪ್ರಕರಣಗಳಿದ್ದು ಈತ ಒಬ್ಬ ರೌಡಿಶೀಟರ್ ಆಗಿದ್ದು ಪೊಲೀಸರ ಗುಂಡೇಟಿನಿಂದ ಬಾಲ ಬಿಚ್ಚಿದರೆ ಬಿಡಲ್ಲ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.
ರಘುರಾಜ್ ಹೆಚ್.ಕೆ..9449553305…