Saturday, May 3, 2025
Google search engine
HomeಬೆಳಗಾವಿShivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿಗಳು...

Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿಗಳು ಲಿಸ್ಟ್ ನಲ್ಲಿ..!

ಶಿವಮೊಗ್ಗ : ಮಹಾನಗರ ಪಾಲಿಕೆಯ ನಿಷ್ಕ್ರಿಯ ಆಯುಕ್ತರೆಂದೇ ಹೆಸರುವಾಸಿಯಾಗಿದ್ದರು ಶ್ರೀಮತಿ ಡಾ/ ಕವಿತಾ ಯೋಗಪ್ಪನವರ್ ವರ್ಗಾವಣೆಯಾಗುವ ಸಾಧ್ಯತೆ ಇದೆ..

ಕಳೆದ ವರ್ಷ ಜೂನ್ 18ರಂದು ಮಾಯಣ್ಣ ಗೌಡ ಅವರ ಜಾಗಕ್ಕೆ ಬಂದು ಅಧಿಕಾರ ಸ್ವೀಕರಿಸಿದ ಕವಿತಾ ಯೋಗಪ್ಪನವರ್ 2006ರ ಬ್ಯಾಚ್ ನ್ ಕೆ ಎ ಎಸ್ ಅಧಿಕಾರಿ ಮೂಲತ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದವರಾಗಿದ್ದು ತಂದೆ ದಿವಂಗತ ಎಸ್ ಎಸ್ ಯೋಗಪ್ಪನವರ ಕೂಡ ಕೆ ಎ‌ ಎಸ್ ಅಧಿಕಾರಿಯಾಗಿದ್ದರು.

ಬೆಂಗಳೂರಿನಲ್ಲಿ ಬಿಬಿಎಂಪಿಯಲ್ಲಿ ಶಿವರಾಂ ಕಾರಂತ್ ಬಡಾವಣೆ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಕವಿತಾ ಯೋಗಪ್ಪನವರ್ ಶಿವಮೊಗ್ಗಕ್ಕೆ ಕಳೆದ ವರ್ಷ ವರ್ಗಾವಣೆಯಾಗಿ ಬಂದಿದ್ದರು.

ಕವಿತಾ ಯೋಗಪ್ಪನವರ ಮೇಲೆ ಇದೇ ಸಾಲು ಸಾಲು ಆರೋಪಗಳು..!

ಕವಿತಾ ಯೋಗಪ್ಪನವರ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದ ದಿನದಿಂದ ಇಲ್ಲಿಯವರೆಗೂ ಸಾರ್ವಜನಿಕರಿಂದ ,ಸಂಘ ಸಂಸ್ಥೆಗಳಿಂದ, ಸಂಘಟನೆಗಳಿಂದ, ಪತ್ರಕರ್ತರಿಂದ ನಿರಂತರವಾಗಿ ಸಾಲು ಸಾಲು ಆರೋಪಗಳನ್ನು ಎದುರಿಸುತ್ತಿದ್ದಾರೆ. ಕಾರಣ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ,ತಮ್ಮ ಅಧೀನದಲ್ಲಿ ಕಾರ್ಯನಿರ್ವ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ, ಏನೇ ಕೆಲಸ ಹೇಳಿದರು ಅದನ್ನು ಪೂರ್ಣಗೊಳಿಸುವುದಿಲ್ಲ ರಾಜಕಾರಣಿಗಳ ಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ, ಭ್ರಷ್ಟಾಚಾರದ ಆರೋಪಗಳು ನಿರಂತರವಾಗಿ ಇವರ ಮೇಲೆ ಇದೆ ಮಾನ್ಯ ಲೋಕಾಯುಕ್ತದಲ್ಲಿ ಇವರ ಮೇಲೆ ಸುಮಟೊ ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಹಿಂದೆ ಯಾವುದೇ ಆಯುಕ್ತರು ಈ ರೀತಿ ಇರಲಿಲ್ಲ ಅಂತಹ ನಿಷ್ಕ್ರಿಯ ಆಯುಕ್ತರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇದ್ದಾರೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ. ಪತ್ರಿಕೆ ಕೂಡ ನಿರಂತರವಾಗಿ ಇವರ ವಿರುದ್ಧ ಸಾಕ್ಷಿ ಸಮೇತ ಸಾಕಷ್ಟು ಸುದ್ದಿಯನ್ನು ಪ್ರಕಟಿಸಿದ್ದು ಮಾನ್ಯ ಲೋಕಾಯುಕ್ತಕ್ಕೆ, ಪ್ರಾದೇಶಿಕ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ದೂರನ್ನು ಕೂಡ ನೀಡಲಾಗಿತ್ತು ಲೋಕಾಯುಕ್ತದಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಯಿತು. ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬಂದಿದ್ದು ಇದೆಲ್ಲಾದರ ಪರಿಣಾಮ ಆಯುಕ್ತೆ ಕವಿತಾ ಯೋಗಪ್ಪನವರ್ ಈಗ ಶಿವಮೊಗ್ಗದಿಂದ ಎತ್ತಂಗಡಿ ಆಗುವ ಸಾಧ್ಯತೆ ಇದೆ.

ಬೆಳಗಾವಿಗೆ ಕವಿತಾ ಯೋಗಪ್ಪನವರನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದ್ದು… ಇವರ ಜಾಗಕ್ಕೆ ಎಂಟು ಜನರು ಬರಲು ಕಾಯುತ್ತಿದ್ದಾರೆ ಎನ್ನುವ ಮಾಹಿತಿಗಳು ಬಲ್ಲಮೂಲಗಳಿಂದ ಲಭ್ಯವಾಗಿವೆ. ಅದರಲ್ಲಿ ಹಿಂದೆ ‌ ಯಶಸ್ವಿಯಾಗಿ ಎಲ್ಲರೊಂದಿಗೆ ಉತ್ತಮವಾಗಿ ಬೆರೆತು ಕಾರ್ಯನಿರ್ವಹಿಸಿದ ಮಾಯಣ್ಣಗೌಡರ ಅವರ ಹೆಸರು ಕೂಡ ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಡಾ/ ಕವಿತಾ ಯೋಗಪ್ಪನವರ್ ವೈಯಕ್ತಿಕವಾಗಿ ಸಹೃದಯಿ ಉತ್ತಮ ವ್ಯಕ್ತಿ ಎಂದರೆ ತಪ್ಪಾಗಲಾರದು ಆದರೆ ಆಡಳಿತದ ವಿಷಯಕ್ಕೆ ಬಂದರೆ ಅವರಿಂದ ‌ ಉತ್ತಮ ಆಡಳಿತವನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ… ಇವರು ಮಾಡುವ ತಪ್ಪುಗಳಿಂದ ಇಡೀ ಮಹಾನಗರ ಪಾಲಿಕೆ ಭ್ರಷ್ಟಾಚಾರದ ಕೋಪವಾಗಿ ಪರಿವರ್ತನೆ ಆಗಿದೆ… ಇದರಲ್ಲಿ ಕೆಲವೊಬ್ಬ ಉತ್ತಮ ಅಧಿಕಾರಿಗಳು ಇದ್ದಾರೆ ಅವರು ಯಾವಾಗ ಕರೆ ಮಾಡಿದರು ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ… ಆದರೆ ಕಂಡವರ ಮಾತಿಗೆ ಕಿವಿ ಕೊಡುವ ಆಯುಕ್ತರು ಇನ್ನು ಮುಂದಾದರೂ ಭ್ರಷ್ಟಾಚಾರ ರಹಿತವಾಗಿ ಉತ್ತಮ ಆಡಳಿತವನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿ ಎನ್ನುವುದು ಪತ್ರಿಕೆಯ ಆಶಯ…

ರಘುರಾಜ್ ಹೆಚ್‌ ಕೆ…9449553305…

RELATED ARTICLES
- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!