
ರಾಜ್ಯ ಸರ್ಕಾರ ನಿರಂತರವಾಗಿ ಮದ್ಯ ಮಾರಾಟಗಾರರ ಮೇಲೆ ಮುಗಿಬಿದ್ದಿದ್ದು ಪ್ರತಿ ಮೂರು ತಿಂಗಳಿಗೊಮ್ಮೆ ಬೆಲೆ ಏರಿಕೆಯ ಬಿಸಿ ನೀಡುತ್ತಿದೆ. ತಾನು ನೀಡಿರುವ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣ ಕ್ರೂಡೀಕರಣ ಮಾಡುವುದು ಹಾಗೂ ರಾಜ್ಯದ ಪ್ರಗತಿಗೆ ಹಣ ಕ್ರೂರಡೀಕರಣ ಮಾಡುವುದು ರಾಜ್ಯ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ.
ಹಾಗಾಗಿ ಆದಾಯದ ಮೂಲವನ್ನು ಹುಡುಕಲು ಹೊರಟ ಸರ್ಕಾರಗಳಿಗೆ ಬೇಗ ಕಣ್ಣಿಗೆ ಕಾಣುವುದು ಮದ್ಯ ಏಕೆಂದರೆ ಎಗ್ಗಿಲ್ಲದೆ ಮದ್ಯ ನಡೆಯುತ್ತಿದೆ ಇದರ ಬೆಲೆ ಎಷ್ಟಾದರೂ ಜನ ಕುಡಿಯೋದು ನಿಲ್ಲಿಸುವುದಿಲ್ಲ ಎನ್ನುವ ದೃಢವಾದ ನಂಬಿಕೆಯಿಂದ ಸತತವಾಗಿ ಮಧ್ಯಬೆಲೆಯನ್ನು ಸರ್ಕಾರ ಏರಿಕೆ ಮಾಡುತ್ತಾ ಬರುತ್ತಿದೆ ಒಂದು ಕಡೆ ಬೆಲೆ ಏರಿಕೆಯ ಬಿಸಿ ಮತ್ತೊಂದು ಕಡೆ ನಿರಂತರವಾಗಿ ಎಲ್ಲೆಂದರಲ್ಲಿ ಸಿಎಲ್ 7 ಲೈಸೆನ್ಸ್ ಗಳಿಗೆ ಅನುಮತಿ ನೀಡುವುದರೊಂದಿಗೆ ಪ್ರತಿ ಕಿಮೀಟರುಗಳಿಗೆ ಒಂದರಂತೆ ತಲೆಯೆತ್ತಲು ಆರಂಭಿಸಿರುವ ಹೊಸ ಲೈಸೆನ್ಸ್ ಗಳು. ಇದರಿಂದ ಇತ್ತ ಮೂಲ ವ್ಯಾಪಾರಸ್ಥರಿಗೆ ತಮ್ಮ ವ್ಯಾಪಾರಕ್ಕೂ ಕುತ್ತು ಜೊತೆಗೆ ಸರ್ಕಾರದ ಬೆಲೆ ಏರಿಕೆಯ ಬಿಸಿ ನಡುವೆಯೇ ಸರ್ಕಾರ ವಾರ್ಷಿಕ ನವೀಕರಣದ ಶುಲ್ಕವನ್ನು ದುಪ್ಪಟ್ಟು ಮಾಡಿದೆ.
ಸತತ ನಾಲ್ಕನೇ ಸಲ ಬಿಯರ್ ನ ಬೆಲೆ ಹೆಚ್ಚಳ ಮಾಡಿದ ಸರ್ಕಾರ ಜೊತೆಗೆ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ನ ಬೆಲೆಯನ್ನು ಮೂರು ಸಲ ಮಾಡಿದೆ ಇದು ಸಾಲದೆಂಬಂತೆ ಇದೀಗ ವಾರ್ಷಿಕ ನವೀಕರಣದ ಶುಲ್ಕವನ್ನು ದುಪ್ಪಟ್ಟು ಮಾಡಿ ಮತ್ತೊಂದು ಶಾಕ್ ಅನ್ನು ವ್ಯಾಪಾರಸ್ಥರಿಗೆ ನೀಡಿದೆ. ಇದರಿಂದ ಕಂಗಾಲಾಗಿರುವ ಸನ್ನದುದಾರರು ಅನಿವಾರ್ಯವಾಗಿ ಪರ್ಮಿಟ್ ಚಳುವಳಿಗೆ ಧುಮುಕಿದ್ದಾರೆ.
ಏನಿದು ಪರ್ಮಿಟ್ ಚಳುವಳಿ :
ಸನ್ನದುದಾರರು (ಮಾಲೀಕರು) ತಮ್ಮ ಅಂಗಡಿಗಳಿಗೆ ಮದ್ಯ ಖರೀದಿ ಮಾಡದೆ ಪ್ರತಿಭಟನೆ ನಡೆಸುವುದು ಇದರಿಂದ ಸರ್ಕಾರಕ್ಕೆ ದಿನವೊಂದಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುತ್ತದೆ ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವುದು ಈ ಪ್ರತಿಭಟನೆಯ ಉದ್ದೇಶ.
ಯಾವ ಲೈಸೆನ್ಸ್ ಗಳಿಗೆ ಎಷ್ಟು ಹೆಚ್ಚಳ :
ಸರ್ಕಾರ ಲೈಸೆನ್ಸ್ ಗಳ ವಾರ್ಷಿಕ ನವೀಕರಣವನ್ನು ದುಪ್ಪಟ್ಟು ಮಾಡಿದ್ದು ಸಿಎಲ್ 2 ಲೈಸೆನ್ಸ್ ಗಳಿಗೆ 6 ಲಕ್ಷ ಇದ್ದದ್ದು 13.5 ಲಕ್ಷ ಮಾಡಿದ್ದಾರೆ. ಸಿ ಎಲ್ 9 ಲೈಸೆನ್ಸ್ ಗೆ 9 ಲಕ್ಷ ಇದ್ದಿದ್ದು 15 ಲಕ್ಷ ಮಾಡಿದ್ದಾರೆ. ಸಿಎಲ್ 7 ಲೈಸೆನ್ಸ್ ಗಳಿಗೆ 17 ಲಕ್ಷ ಮಾಡಿದ್ದಾರೆ.
ಮಧ್ಯದಿಂದ ಒಂದು ದಿನಕ್ಕೆ ಸರ್ಕಾರಕ್ಕೆ ಬರುವ ಆದಾಯ ಎಷ್ಟು..?!
ಒಂದು ದಿನಕ್ಕೆ ಸರ್ಕಾರಕ್ಕೆ ಮಧ್ಯ ಮಾರಾಟದಿಂದ 89 ಕೋಟಿ ಹಣ ಬರುತ್ತದೆ ಇದರ ವಾರ್ಷಿಕ ಹಣ 40,000 ಸಾವಿರ ಕೋಟಿ ಮೀರುತ್ತದೆ. ಪ್ರತಿದಿನ ಐಎಂಎಲ್ ಇಂಡಿಯನ್ ಮೇಡ್ ಲಿಕ್ಕರ್ ನಿಂದ ಸುಮಾರು 80 ಕೋಟಿ ಆದಾಯ ಬರುತ್ತದೆ. ಬಿಯರ್ ನಿಂದ 18 ಕೋಟಿ ಆದಾಯ ಬರುತ್ತದೆ. ಇತರೆ ಮಧ್ಯಗಳಾದ ವೋಡ್ಕಾ ,ಜಿನ್, ಗಳಿಂದ ಸುಮಾರು ಒಂದು ಕೋಟಿ ಆದಾಯ ಬರುತ್ತದೆ. ಪ್ರತಿ ತಿಂಗಳು 50 ರಿಂದ 60 ಲಕ್ಷ ಐಎಂಎಲ್ ಖರ್ಚಾಗುತ್ತದೆ.
ಸರ್ಕಾರ ಖರೀದಿಸುವುದು ಎಷ್ಟಕ್ಕೆ..?! ಮಾರಾಟ ಮಾಡುವುದು ಎಷ್ಟಕ್ಕೆ..?!
ಕಡಿಮೆ ಹಣಕ್ಕೆ ಮಧ್ಯವನ್ನು ಖರೀದಿಸುವ ಸರ್ಕಾರ ಅಧಿಕ ಬೆಲೆಗೆ ಮಾರಾಟಗಾರರಿಗೆ ಮಾರಾಟ ಮಾಡುತ್ತದೆ ಉದಾಹರಣೆಗೆ ಕಡಿಮೆ ಬೆಲೆಗೆ ದೊರಕುವ ಮಧ್ಯಕ್ಕೆ 96 ಪೀಸ್ ಗಳಿರುವ 90 ಎಂಎಲ್‌ನ ಬಾಕ್ಸ್ ಗೆ ಸರ್ಕಾರಕ್ಕೆ ಖರೀದಿಗೆ ಬೀಳುವ ಹಣ ಬರೀ 575 ರೂಗಳು, ಆದರೆ ಸರ್ಕಾರ ಮಾರಾಟಗಾರರಿಗೆ ಮಾರಾಟ ಮಾಡುವುದು 4,800 ರೂಂ, ಗಳಿಗೆ ನೀವೇ ಊಹಿಸಿ ಇದರ ಮಧ್ಯೆ ಎಷ್ಟು ಲಾಭ ಸರ್ಕಾರಕ್ಕೆ ಇದೆ ಎಂದು….
ಮಧ್ಯಕ್ಕೆ ಬೆಲೆ ಹೆಚ್ಚಳವಾದರೆ ಗಾಂಜಾದ ಗಮ್ಮತ್ತಿಗೆ ಕಡಿವಾಣ ಹಾಕುವವರು ಯಾರು..?!
ಹೀಗೆ ನಿರಂತರವಾಗಿ ಮಧ್ಯಕ್ಕೆ ಬೆಲೆ ಹೆಚ್ಚಳವಾಗುತ್ತಿದ್ದರೆ ಮಧ್ಯವನ್ನು ದಿನ ನಿತ್ಯ ಸೇವಿಸುವ ಅಭ್ಯಾಸ ಮಾಡಿಕೊಂಡಿರುವ ಹಲವು ಕುಡುಕರು ಅದರಲ್ಲೂ ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಕಾರ್ಮಿಕರು ಕೆಲವು ಯುವಕರು ಹಣದ ಅಭಾವದಿಂದ ಅನಿವಾರ್ಯವಾಗಿ ತಮ್ಮ ಚಟವನ್ನು ಬಿಡಲು ಆಗದೆ ಗಾಂಜಾದ ಗಮ್ಮತ್ತಿಗೆ ಮರಳಾದರೆ ಆಶ್ಚರ್ಯ ಪಡಬೇಕಾಗಿಲ್ಲ ಈಗಾಗಲೇ ಗಾಂಜಾ ದಿಂದ ಎಷ್ಟು ಅನಾಹುತಗಳು ಸಂಭವಿಸಿದ್ದು ಹಲವು ಯುವಕರು ಗಾಂಜಾದ ಅಮಲಿಗೆ ಬಿದ್ದು ಹೊರಬರಲಾಗದೆ ನರಳಾಡುತ್ತಿದ್ದಾರೆ ಈ ಮಧ್ಯಬೆಲೆ ಮತ್ತಷ್ಟು ಜನರನ್ನು ಆ ಕೂಪಕ್ಕೆ ತಳ್ಳುವ ಸಾಧ್ಯತೆ ಇದೆ.
ಈಗಲೇ ಸರ್ಕಾರ ಎಚ್ಚೆತ್ತುಕೊಂಡು ಇದಕ್ಕೊಂದು ಪರಿಹಾರ ಹುಡುಕಬೇಕು ಇಲ್ಲವಾದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ… ನೆನಪಿರಲಿ…
ರಘುರಾಜ್ ಹೆಚ್.ಕೆ..9449553305…