Home ಮಹಾನಗರ ಪಾಲಿಕೆಶಿವಮೊಗ್ಗ : ಮಹಾನಗರ ಪಾಲಿಕೆ ಕರ್ಮಕಾಂಡ ಭಾಗ-2..! ಅಧಿಕಾರಿಗಳ ಅಂದಾ ದರ್ಬಾರ್..!

ಶಿವಮೊಗ್ಗ : ಮಹಾನಗರ ಪಾಲಿಕೆ ಕರ್ಮಕಾಂಡ ಭಾಗ-2..! ಅಧಿಕಾರಿಗಳ ಅಂದಾ ದರ್ಬಾರ್..!

by EDITOR NEWS WARRIORS

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಬಗೆದಷ್ಟು  ಕರ್ಮಕಾಂಡಗಳು ತೆರೆಯುತ್ತವೆ  ಮೊನ್ನೆ ಸುಮಾರು ಅಂದಾಜು 83 ಲಕ್ಷದ ಕಾಮಗಾರಿಯ ಬಗ್ಗೆ ಪತ್ರಿಕೆ ಬರೆದಿತ್ತು. ಇದೀಗ ಮತ್ತೊಂದು ಕಾಮಗಾರಿ ಕಳಪೆಯಾಗಿದ್ದು ಅದು 1 ಕೋಟಿ 73 ಲಕ್ಷದ 50,000 ಸಾವಿರದ ಕಾಮಗಾರಿ…

 

ಕಾಮಗಾರಿಯ ವಿವರ ಈ ಕೆಳಗಿನಂತಿದೆ. 

 

(Schedule of Work):

೧) ಟ್ರೈಲರ್‌ಮೇಡ್ ಕಸ ನಿರ್ವಹಣಾ ಯಂತ್ರದ ಪೂರೈಕೆ ಮತ್ತು ಅಳವಡಿಕೆ ಕಸ ನಿರ್ವಹಣಾ ಯಂತ್ರದ ಸರಬರಾಜು, ಅಳವಡಿಕೆ, ಕಾರ್ಯಾರಂಭ (Commissioning) ಮತ್ತು ಪರೀಕ್ಷಾ ಚಾಲನೆ (Trial Run) ನಡೆಸುವುದು.

 

೨) ವಾಹನ ತೊಳೆಯುವ ವ್ಯವಸ್ಥೆಯ ಪೂರೈಕೆ ಮತ್ತು ಅಳವಡಿಕೆ:
ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗೆ ವಾಹನ ತೊಳೆಯುವ ಸಂಪೂರ್ಣ ವ್ಯವಸ್ಥೆಯ ಸರಬರಾಜು, ಅಳವಡಿಕೆ, ಕಾರ್ಯಾರಂಭ (Commissioning) ಮತ್ತು ಪರೀಕ್ಷಾ ಚಾಲನೆ (Trial Run) ಕೈಗೊಳ್ಳುವುದು.

ಈ ವ್ಯವಸ್ಥೆಯೊಳಗೆ ಕೆಳಗಿನ ಉಪಕರಣಗಳು/ಸೌಲಭ್ಯಗಳನ್ನು ಒಳಗೊಂಡಿರಬೇಕು:

ಅಡಿಚ್ಯಾಸಿಸ್ ತೊಳೆಯುವ ವ್ಯವಸ್ಥೆ,

ಸಂಪೂರ್ಣ ಬಾಡಿ ತೊಳೆಯುವ ವ್ಯವಸ್ಥೆ,

ಮೇಲ್ಮಟ್ಟದ ನೀರು ಸಿಂಪಡಿಸುವ ಆರ್ಚ್‌ಗಳು,

ಮಳಿನ ನೀರು ಮರುಬಳಕೆ ಘಟಕ (Waste Water Recycling Plant),

ಹೈ ಪ್ರೆಶರ್ ನೀರಿನ ಶುದ್ಧೀಕರಣ ವ್ಯವಸ್ಥೆ (High Pressure Water Filter System). ಇದಿಷ್ಟು ಕಾಮಗಾರಿಯ ವಿವರ ಇವಿಷ್ಟು ಕಾಮಗಾರಿಗಳು ಇಲ್ಲಿ ಲಭ್ಯವಿರಬೇಕು ಅಳವಡಿಸಿರುವ ಮಿಷಿನ್ ಚಾಲನೆಯಲ್ಲಿ ಇರಬೇಕು ಆದರೆ ಸುಮಾರು  1 ಕೋಟಿ 73 ಲಕ್ಷದ 50ಸಾವಿರದ  ಕಾಮಗಾರಿ ಕಳಪೆಯಿಂದ ಕೂಡಿದ್ದು ಇಲ್ಲಿವರೆಗೂ ಆ ಯಂತ್ರ ಚಾಲನೆಯಾಗಿಲ್ಲ ಎನ್ನುವುದು ದುರಂತ. 

 

ಗಮನಿಸಬೇಕಾದ ಅಂಶಗಳು : 

೧)ಪಾಲಿಕೆಗೆ ಮಿಷನರಿ ಸಾಮಾನುಗಳು ದಿನಾಂಕ 19 /4 /2025ರಂದು ಇನ್ವೈಸ್ ಕಾಫಿ ಬಂದಿದೆ,

೨)ಆದರೆ 23/4/2025 ಕ್ಕೆ ಥರ್ಡ್ ಪಾರ್ಟಿ ರಿಪೋರ್ಟ್ ಹುಬ್ಬಳ್ಳಿಯವರ ಕಡೆಯಿಂದ ತೆಗೆದುಕೊಂಡಿದ್ದೀರಿ.

೩)ನಂತರ 25.04.2025ರಂದು ಎ ಡಬಲ್ ಇ AEE ಅವರು ಚೆಕ್ ಮೆಜರ್ರ್ಮೆಂಟ್ ಹಾಕಿದ್ರಾ..  (CHECK MEJARMENT)?! ಇದು ಸಾಧ್ಯನಾ..?! ಇಷ್ಟು ತರಾತುರಿಯಲ್ಲಿ ಕಾಮಗಾರಿ ಪೂರೈಸಿ ಬಿಲ್ ಕೂಡ ಮಾಡಿರುವುದು ಕೇವಲ 5 ದಿನಗಳ ಅಂತರದಲ್ಲಿ ಕಾಮಗಾರಿ ಪ್ರಾರಂಭ, ಥರ್ಡ್ ಪಾರ್ಟಿ ವೀಕ್ಷಣೆ, ಕೂಡಲೇ ಅದಕ್ಕೆ ಬಿಲ್  ಎಷ್ಟು ಚುರುಕಿನ ಕೆಲಸ…. ಮೆಚ್ಚಬೇಕಾದ್ದೆ…

 

ಈ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ನೀಡಬೇಕಾದ ದಾಖಲೆಗಳು : 

 

ಬಿಲ್ ಕಾಪಿ
1)ಎಂಬಿ ಜೆರಾಕ್ಸ್
2)ಕಾಮಗಾರಿ ಟ್ರೈನಿಂಗ್ ಕೊಟ್ಟ ಬಗ್ಗೆ ಜಿಪಿಎಸ್ ಫೋಟೋ.
3)ಕಾಮಗಾರಿಗೆ ಸಂಬಂಧಿಸಿದಂತೆ 124 ವಸ್ತುಗಳ ಸ್ಥಳ ಪರಿಶೀಲನೆ.
4)ಕಾಮಗಾರಿಗೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿಯು ನಡೆಸಿದ ಜಿಪಿಎಸ್ ಫೋಟೋ.
5)ಕಾಮಗಾರಿಗೆ ಸಂಬಂಧಿಸಿದಂತೆ ಎಸ್ಓ ಸೆಕ್ಷನ್ ಆಫೀಸರ್ (SO )ಡಬಲ್ ಇ (AEE)ಡಬಲ್ ಇ (EE) ಎಸ್ ಇ (SE )ಇವರುಗಳು ಕಾಮಗಾರಿ ವೀಕ್ಷಣೆ ಮಾಡಿದ ಜಿಪಿಎಸ್ ಫೋಟೋ. ಇದಿಷ್ಟು ದಾಖಲೆ ನೀಡಿ ‌‌.

ತರಾತುರಿಯಲ್ಲಿ ಕಾಮಗಾರಿ ಮುಗಿಸಿ ಐದು ತಿಂಗಳು ಕಳೆದಿದ್ದರೂ ಒಂದು ಗಾಡಿಗಳನ್ನು ತೊಳೆದಿಲ್ಲ ಸುಮಾರು 150 ಜನ ತ್ಯಾಜ್ಯ ಸಂಗ್ರಹಣಾ ಸಾಗಾಣಿಕೆ ಸಂಬಂಧಿತ ವಾಹನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ವೈಜ್ಞಾನಿಕ ರೀತಿಯಲ್ಲಿ ಶುಚಿಗೊಳಿಸುವುದಕ್ಕೋಸ್ಕರ ಅವಶ್ಯಕತೆ ಇರುವ ಯಂತ್ರೋಪಕರಣ ಇದು ಆದರೆ ನೆಪ ಮಾತ್ರಕ್ಕೆ  ಯಂತ್ರ ಅಳವಡಿಸಿದ್ದು  ಇದರ ಉದ್ಘಾಟನೆ ಕೂಡ ನಡೆದಿಲ್ಲ ಇಲ್ಲಿ  ವಾಟರ್ ರಿಸೈಕಲ್ ಆಗುವುದು ಇರಲಿ  ನಿಂತ ನೀರಿನಲ್ಲಿ ಸೊಳ್ಳೆಗಳು ಓಡಾಡುತ್ತಿದ್ದಾವೆ ವಾಟರ್ ರಿಸೈಕಲ್ ಇನ್ಯಲಾಗುತ್ತೆ ಸ್ವಾಮಿ.

 

ಈ ಕಾಮಗಾರಿಗೆ ಸಂಬಂಧಿಸಿದಂತೆ ಒಬ್ಬರಿಗೂ ಟ್ರೈನಿಂಗ್ ನೀಡಿಲ್ಲ ಇಲ್ಲಿವರೆಗೂ ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಟ್ರೈನಿಂಗ್ ನೀಡಲು ಬಂದ ಬಳ್ಳಾರಿ ಮೂಲದ ಒಬ್ಬ ವ್ಯಕ್ತಿಯ ವಿಡಿಯೋ ಪತ್ರಿಕೆಗಳಿಗೆ ಲಭ್ಯವಿದೆ ಆತ ಹೇಳುವ ಪ್ರಕಾರ ಆತ ಟ್ರೈನಿಂಗ್ ನೀಡಲು ಬಂದಿದ್ದೆ ಮೊನ್ನೆ ಇಲ್ಲಿವರೆಗೂ ಕಾಡು ಬೆಳೆದುಕೊಂಡಿತ್ತು ಅಲ್ಲಿ ಇತ್ತೀಚಿಗೆ ಪತ್ರಿಕೆ ಕೇಳಲು ಶುರು ಮಾಡಿದ ಮೇಲೆ ಸ್ವಲ್ಪ ಸ್ವಚ್ಛವಾಗಿದೆ. ಆದರೆ ಅಲ್ಲಿ ಬಳಸಿದ ವಸ್ತುಗಳು ಅದಕ್ಕಿರುವ ಬೆಲೆ, ತೆಗೆದುಕೊಂಡಿದ್ದು ಎಲ್ಲಿ, ಅದನ್ನು ಪರಿಶೀಲನೆ ಮಾಡಿ ಇವ್ರು ಬಿಲ್ ಹಾಕಿದ್ದಾರಾ..?! ಅದು ಅಷ್ಟು ತರಾತುರಿಯಲ್ಲಿ ಮುಂಚಿತವಾಗಿ ಬಿಲ್ ನೀಡಲು  ಕಾರಣವೇನು.‌‌?! ಇವೆಲ್ಲವೂ ಹೊರ ಬರಬೇಕು ಇನ್ನೂ ಕರ್ಮಕಾಂಡದ ಸುದ್ದಿಗಳು ಬಾಕಿ ಇವೆ…. ಮುಂದಿನ ಭಾಗಗಳಲ್ಲಿ ನಿರೀಕ್ಷಿಸಿ….

 

ಮರೆತಿದ್ದೆ ಈ ಭರತನಿಗೆ ನಾಲ್ಕು ಜವಾಬ್ದಾರಿ ಅಂತೆ EE ಎರಡು SE  ಒಂದು ಹಾಗೆ ಸ್ಮಾರ್ಟ್ ಸಿಟಿಯ ಚೀಪ್ ಇಂಜಿನಿಯರ್ CE  ಜೊತೆಗೆ ಇನ್ನೊಂದು ಎಕ್ಸ್ಟ್ರಾ ಜವಾಬ್ದಾರಿ ಆಯುಕ್ತರೇ ಈತನಿಗೆ ಇಷ್ಟೆಲ್ಲಾ ಅವಶ್ಯಕತೆ ಇದೆಯಾ…?! ಎಲ್ಲಾ ಕಡೆ ನನಗೆ ಬೇಕು ಎನ್ನುತ್ತಾನೆ…?! ಒಂದು ಕೆಲಸ ಸರಿಯಾಗಿ ಮಾಡುವುದಿಲ್ಲ ಎಲ್ಲಾ ಕಡೆ ಕರ್ತವಲೋಪ… ತರಾತುರಿಯಲ್ಲಿ ಸೈನ್ ಮಾಡಿ ಕಳಿಸುತ್ತಾನೆ… ಇವನಂತವರನ್ನು ಇಟ್ಟುಕೊಂಡರೆ ಮಹಾನಗರ ಪಾಲಿಕೆಯ ಕಥೆ ಇಷ್ಟೇ ಇಂಥವರಿಂದ ಉಳಿದವರಿಗೂ ಕೆಟ್ಟ ಹೆಸರು ಮೊದಲು ಇವನನ್ನು ಚೇಂಜ್ ಮಾಡಿ…. ನೆಲದ ಮೇಲೆ ಒಂದಷ್ಟು ಕರ್ಮ ಮಾಡಿದ್ದರೆ ನೆಲದ ಒಳಗೆ ಒಂದಷ್ಟು ಹಗರಣ ಮಾಡಿದ್ದಾನೆ ಎಲ್ಲವನ್ನು ಪತ್ರಿಕೆ ಹೊರಗೆ ತರಲಿದೆ….

 

ರಘುರಾಜ್ ಹೆಚ್‌ ಕೆ…9449553305…

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!