162
ಶಿವಮೊಗ್ಗ:: ಪೊಲೀಸ್ ಇಲಾಖೆಯಲ್ಲಿ ಕಳೆದ ವರ್ಷದ ಅತ್ಯುತ್ತಮ ಕರ್ತವ್ಯ ನಿರ್ವಹಣೆಗಾಗಿ ಜಿಲ್ಲೆಯ ಅಡಿಷನಲ್ ಎಸ್ ಪಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಮೇಶ್ ಕುಮಾರ್ ಅವರಿಗೆ ಅತ್ಯುತ್ತಮ ಮೇಲ್ವಿಚಾರಣೆ ಸೇರಿದಂತೆ ಉತ್ತಮ ಕರ್ತವ್ಯವನ್ನು ಮೆಚ್ಚಿ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ.

ರಮೇಶ್ ಕುಮಾರ್ ಭದ್ರಾವತಿ ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ಕ್ರೈಂ ವಿಭಾಗದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ತಮ್ಮ ಹಿರಿಯ ಅಧಿಕಾರಿಗಳ ಜೊತೆ ಸ್ಪಂದಿಸಿ ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಅತ್ಯುತ್ತಮ ಸಹಕಾರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಭದ್ರಾವತಿ ಗ್ರಾಮಾಂತರ ಭಾಗದ ಕೊಳೆಹೊನ್ನೂರು ಪೊಲೀಸ್ ಠಾಣೆಯ ಹೆಚ್ ಸಿ ಅಣ್ಣಪ್ಪ ಹಾಗೂ ಹಳೆ ನಗರ ಪೊಲೀಸ್ ಠಾಣೆಯ ಹೆಚ್ ಸಿ ರಾಘವೇಂದ್ರ ಎನ್ ಅವರಿಗೆ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ.
ಇದೆ ಏಪ್ರಿಲ್ ತಿಂಗಳ ಎರಡನೇ ತಾರೀಕು ರಾಜ್ಯದ ಉಳಿದ ಸಿಬ್ಬಂದಿಗಳ ಜೊತೆಗೆ ಇವರಿಗೂ ಕೂಡ ಮುಖ್ಯಮಂತ್ರಿಗಳು ಈ ಪದಕವನ್ನು ವಿತರಿಸಲಿದ್ದಾರೆ.
ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ಮೇಲ್ಕಂಡ ಮೂವರಿಗೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್ ಬಿ ಯವರು ಶುಭಾಶಯ ಕೋರಿದ್ದಾರೆ.