ಶಿವಮೊಗ್ಗ ಕುಂಸಿ ರೈಲ್ವೆ ನಿಲ್ದಾಣದ ಮಧ್ಯೆ ಸುಮಾರು 25 ವರ್ಷ ವಯಸ್ಸಿನ ಮಹಿಳೆ ರೈಲ್ವೆ ಹಳಿಗಳ ಮಧ್ಯೆ ಶವವಾಗಿ ಪತ್ತೆಯಾಗಿದ್ದು ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಏನಿದು ಘಟನೆ : ತಾಳಗುಪ್ಪ ಮೈಸೂರ್ ಹೋಗುವ 16205 ನಂಬರಿನ ರೈಲ್ವೆ ಗಾಡಿಗೆ ಸುಮಾರು 4. 45ರ ಸಮಯದಲ್ಲಿ ಮಹಿಳೆ ಒಬ್ಬಳು ಏಕಾಏಕಿ ಹಳಿಗಳಿಗೆ ಅಡ್ಡಲಾಗಿ ಬಂದಾಗ ಈ ದುರ್ಘಟನೆ ಸಂಭವಿಸಿದೆ . ನೀಲಿ ಜೀನ್ಸ್ ಪ್ಯಾಂಟ್, ಕೆಂಪು ಟಿ-ಶರ್ಟ್ ಧರಿಸಿದ್ದ ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು. ಆತ್ಮಹತ್ಯೆಗೆ ಕಾರಣ ಏನು..?! ಈಕೆ ಯಾರು..? ಎನ್ನುವುದು ರೈಲ್ವೆ ಪೊಲೀಸರ ತನಿಖೆಯಿಂದ ಹೊರ ಬರಬೇಕಾಗಿದೆ.