ಶಿವಮೊಗ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡು ಹಲವು ವರ್ಷಗಳಿಂದ ಇಲಾಖೆಯಲ್ಲಿ ಬಿಡು ಬಿಟ್ಟಿದ್ದ ಸಿಬ್ಬಂದಿಗಳನ್ನು ಹಾಗೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ವರ್ಗಾವಣೆಯಲ್ಲಿ ಕೌನ್ಸಿಲಿಂಗ್ ಪದ್ಧತಿಯನ್ನು ಸಮಗ್ರವಾಗಿ ಜಾರಿಗೆ ಆಗುವಂತೆ ನೋಡಿಕೊಂಡು ಹಲವು ಅಧಿಕಾರಿಗಳ ಸಿಬ್ಬಂದಿಗಳ ತಲೆ ನೋವಿಗೆ ಕಾರಣವಾಗಿದ್ದ ಪ್ರಿನ್ಸಿಪಾಲ್ ಸೆಕ್ರೆಟರಿ ಹರ್ಷ ಗುಪ್ತಾ ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಎತ್ತಂಗಡಿ ಆಗಿದ್ದಾರೆ.
26 ವರ್ಷದ ಸೇವೆಯಲ್ಲಿ 30 ಸಲ ಎತ್ತಂಗಡಿ..!
26 ವರ್ಷದ ಸೇವಾವಧಿಯಲ್ಲಿ 30 ಸಲ ಏಕಾಏಕಿ ಎತ್ತಂಗಡಿ ಆಗಿ ದಾಖಲೆ ಮಾಡಿರುವ ಐಎಎಸ್ ಅಧಿಕಾರಿ ಹರ್ಷ ಗುಪ್ತಾ ಅವರನ್ನು ಆರೋಗ್ಯ ಇಲಾಖೆಯಿಂದಲೂ ವರ್ಗಾವಣೆ ಮಾಡಿದ್ದು ಸದ್ಯಕ್ಕೆ ಅವರಿಗೆ ಬೇರೊಂದು ಇಲಾಖೆಗೆ ಸ್ಥಳ ನಿಯುಕ್ತಿ ಮಾಡಿಲ್ಲ ಎನ್ನುವುದೇ ವಿಶೇಷ.
ವಿಚಿತ್ರ ವಿಲಕ್ಷಣ ನಡವಳಿಕೆಯ ಐಎಎಸ್ ಅಧಿಕಾರಿ..!
ಕೆಲವೊಂದು ಅಧಿಕಾರಿಗಳೇ ಹಾಗೆ ಒಂತರಾ ವಿಚಿತ್ರ ಒಂತರಾ ವಿಲಕ್ಷಣ ಮನೋಭಾವನೆ ಯವರು ತಾವು ಅಂದುಕೊಂಡ ಕೆಲಸಗಳನ್ನು ಯಾವುದೇ ಅಡ್ಡಿ ಆತಂಕಗಳು ಬಂದರೂ ಕೂಡ ಬಿಡದೆ ಮಾಡುವಂತವರು ಇಂತವರ ಸಾಲಿನಲ್ಲಿ ನಿಲ್ಲುವ ಹಲವು ಅಧಿಕಾರಿಗಳಲ್ಲಿ ಹರ್ಷಗುಪ್ತಾ ಕೂಡ ಒಬ್ಬರು ತಮ್ಮದೇ ಇಲಾಖೆಯ ಸಿಬ್ಬಂದಿಗಳನ್ನು ಅಧಿಕಾರಿಗಳನ್ನು ರಾಜಕಾರಣಿಗಳನ್ನು ನಿಷ್ಠುರ ಮಾಡಿಕೊಂಡು ಹಲವು ಮಹತ್ವದ ಸುಧಾರಣೆಗಳನ್ನು ತಂದರು ಇದೆ ಅವರಿಗೆ ಮುಳುವಾಯಿತು ಎನ್ನಬಹುದು.
ನಿಶಾಚರಿ ಅಧಿಕಾರಿ..!
ರಾತ್ರಿ ಸುಮಾರು ಎರಡು ಗಂಟೆವರೆಗೂ ಕಾರ್ಯನಿರ್ವಹಿಸುವ ವ್ಯಕ್ತಿಯಾಗಿದ್ದ ಹರ್ಷಗುಪ್ತಾ ಯಾರದೇ ಮೆಸೇಜ್ ಅಥವಾ ಕರೆ ಬಂದರೂ ಕೂಡ ಅವರಿಗೆ ಸ್ಪಂದಿಸಿ ಆ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದ್ದ ವ್ಯಕ್ತಿ.
ಬೆಂಗಳೂರಿನ ಅಧಿಕಾರಿಗಳು ಸಿಬ್ಬಂದಿಗಳೇ ಇವರ ಟಾರ್ಗೆಟ್ ಆಗಿದ್ದರು..!
ರಾಜ್ಯದ ರಾಜಧಾನಿ ಬೆಂಗಳೂರನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಬಹಳ ವರ್ಷಗಳಿಂದ ಬೀಡು ಬಿಟ್ಟು ತಮ್ಮದೇ ಆದ ಶಿಫಾರಸ್ಸುಗಳನ್ನು ಬಳಸಿಕೊಂಡು ಇದ್ದ ಹಲವು ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಬೇರೆಡೆ ವರ್ಗಾವಣೆ ಮಾಡುವ ಉದ್ದೇಶದಿಂದ ಮಹತ್ವದ ತೀರ್ಮಾನಗಳನ್ನು ಹರ್ಷ ಗುಪ್ತಾ ತೆಗೆದುಕೊಂಡರು. ಆದರೆ ಅದು ಇಡೀ ಕರ್ನಾಟಕದ ಸಿಬ್ಬಂದಿಗಳಿಗೂ ಅಧಿಕಾರಿಗಳಿಗೂ ಅನ್ವಯಿಸಿದ್ದು ಇದು ಹಲವರಿಗೆ ಸಮಸ್ಯೆಗಳನ್ನು ತಂದೊಡ್ಡಿತ್ತು ಕೆಲವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಇನ್ನೂ ಕೆಲವರು ಮಕ್ಕಳ ವಿದ್ಯಾಭ್ಯಾಸ ಓದು ಇತ್ಯಾದಿ ಕಡೆ ಗಮನಹರಿಸಿ ಒಂದೆಡೆ ವಾಸಿಸುತ್ತಿದ್ದರು ಅವರನ್ನು ಕೂಡ ಇವರ ಆದೇಶ ಡಿಸ್ಟರ್ಬ್ ಮಾಡಿಬಿಟ್ಟಿತ್ತು ಇದರಿಂದ ಒಂದು ರೀತಿ ಇಡೀ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹರ್ಷ ಗುಪ್ತಾ ವಿಲನ್ ರೀತಿ ಕಾಣಿಸಿಕೊಂಡಿದ್ದರು.
ನೆಮ್ಮದಿಯ ನಿಟ್ಟುಸಿರು ಬಿಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು..!
ಹರ್ಷ ಗುಪ್ತಾ ವರ್ಗಾವಣೆಯಿಂದ ಒಂದಷ್ಟು ಜನ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಚಿವರ ಆಪ್ತರು ರಾಜಕಾರಣಿಗಳು ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.