Home ರಾಜ್ಯShivamogga breaking:‌ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಶಾಲೆಯ ಆಟದ ಮೈದಾನವನ್ನೇ ಮಾರಾಟ ಮಾಡಿದ ಶಿಕ್ಷಕರು..!

Shivamogga breaking:‌ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಶಾಲೆಯ ಆಟದ ಮೈದಾನವನ್ನೇ ಮಾರಾಟ ಮಾಡಿದ ಶಿಕ್ಷಕರು..!

by EDITOR NEWS WARRIORS
ಶಿವಮೊಗ್ಗ : ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ  ಅನಾಹುತಕಾರಿ ಬೆಳವಣಿಗೆ ಒಂದು ನಡೆದಿದ್ದು ಶಾಲೆಯಲ್ಲಿ ಪಾಠ ಮಾಡುವ  ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸೇರಿಕೊಂಡು ಎಡವಟ್ಟು ಮಾಡಿದ್ದಾರೆ ಮಕ್ಕಳು ಆಟವಾಡುವ ಮೈದಾನವನ್ನೇ ಖಾಸಗಿ ಅವರಿಗೆ ಮಾರಾಟ ಮಾಡಿದ್ದು ಇದೀಗ ವಿವಾದದ ಕೇಂದ್ರವಾಗಿದೆ.

ಏನಿದು ಪ್ರಕರಣ : ಶಿವಮೊಗ್ಗ ನಗರದ ರಾಗಿಗುಡ್ಡ ಶಾಂತಿನಗರದಲ್ಲಿ ಅಶೋಕ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಎನ್ನುವ ಸರ್ಕಾರಿ ಅನುದಾನಿತ ಶಾಲೆಯಿದ್ದು ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಬಾಂಧವರ ಮಕ್ಕಳು ಸೇರಿದಂತೆ ಬಹುತೇಕ ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಈ ಶಾಲೆಯನ್ನು ನಂಬಿಕೊಂಡು ಓದುತ್ತಿದ್ದಾರೆ ಆದರೆ ಇವರಿಗೆ ಓದಿಸಿ ವಿದ್ಯಾಭ್ಯಾಸ ಕಲಿಸಬೇಕಾದ ಶಿಕ್ಷಕರು ಇದೀಗ ತಮ್ಮ ಆಡಳಿತ ಮಂಡಳಿಯ ಜೊತೆ ಸೇರಿಕೊಂಡು ಶಾಲೆಯ ಅಭಿವೃದ್ಧಿ ಹೆಸರು ಹೇಳಿಕೊಂಡು ಮಕ್ಕಳು ಆಟವಾಡುವ ಮೈದಾನವನ್ನೇ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ವಿವಾದ ಮಾಡಿಕೊಂಡಿದ್ದಾರೆ.
ಡಿಡಿಪಿಐ ಹಾಗೂ ಬಿಇಒ ಕೂಡಲೇ ಗಮನಹರಿಸಲಿ..! 
ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಸೇರಿಕೊಂಡು ಮಾಡಿರುವ ಎಡವಟ್ಟು ಕೆಲಸಕ್ಕೆ ಸರಿಯಾದ ಶಿಕ್ಷೆ ಆಗಬೇಕಾಗಿದೆ ಆದ್ದರಿಂದ ಕೂಡಲೇ ಡಿಡಿಪಿಐ ಹಾಗೂ ಬಿಇಒ ಸ್ಥಳಕ್ಕೆ ಭೇಟಿ ನೀಡಿ ಖಾಸಗಿ ಅವರಿಗೆ ಮಾರಾಟ ಆಗಿರುವ ಜಾಗವನ್ನು ಪುನಃ ಶಾಲೆಗೆ ಹಿಂತಿರುಗಿಸಿ ಮಕ್ಕಳಿಗೆ ಸುಸಜ್ಜಿತವಾದ ಆಟದ ಮೈದಾನ ಕಲ್ಪಿಸಿಕೊಡಬೇಕು ಎನ್ನುವುದು ಇಲ್ಲಿ ಓದುತ್ತಿರುವ ಮಕ್ಕಳ ಪೋಷಕರ ಹಾಗೂ ಸ್ಥಳೀಯ ಮುಖಂಡರ ಆಗ್ರಹ ಹಾಗೂ ಮನವಿ.
ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಈ ರೀತಿಯ ಎಡವಟ್ಟು ಮಾಡಿದರೆ ಬೇರೆ ಜಿಲ್ಲೆಗಳ ಕಥೆ ಹೇಗೆ..?!
ರಘುರಾಜ್ ಹೆಚ್‌ ಕೆ..9449553305…

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!