315
ಕರ್ನಾಟಕ ಸರ್ಕಾರದ ಸಚಿವರಾಗಿರುವ ಬಿ ಜೆಡ್ ಝಮೀರ್ ಅಹ್ಮದ್ ಖಾನ್ ರಾಜ್ಯ ಮತ್ತು ಅಕ್ಕಪಕ್ಕದ ರಾಜ್ಯ ಗಳಲ್ಲಿಯೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು ಕಾಂಗ್ರೇಸ್ ಪಕ್ಷಕ್ಕೆ ಎಲ್ಲಾ ರೀತಿಯಲ್ಲಿಯೂ ಸಹಕರಿಸಿ ಹಲವಾರು ಉಪಚುನಾವಣೆ ಗಳಲ್ಲಿ ಪಕ್ಷದ ಅಭ್ಯರ್ಥಿ ಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ.ಇವರು ಕೇವಲ ಕಾಂಗ್ರೆಸ್ ಪಕ್ಷದ ನಾಯಕರಷ್ಟೇ ಅಲ್ಲದೆ ರಾಜ್ಯದ ಅಲ್ಪಸಂಖ್ಯಾತರ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದಾರೆ.
ತಮ್ಮ ಮಗನನ್ನು ರಾಜಕಾರಣದಲ್ಲಿ ಬೆಳೆಸಲು ಒದ್ದಾಡುತ್ತಿರುವ ಎಸ್ ಎಸ್ ಮಲ್ಲಿಕಾರ್ಜುನ್ ರವರು ಮತ್ತು ಇವರ ಕುಟುಂಬ ಅಲ್ಪಸಂಖ್ಯಾತರ ಬೆಂಬಲ ದಿಂದಲೇ ಬೆಳೆದು ಬಂದಿರುವುದನ್ನು ಮರೆತಿದ್ದು, ಕರ್ನಾಟಕದ ಹೆಮ್ಮೆಯ ಮಂತ್ರಿ ಹಾಗೂ ಅಲ್ಪಸಂಖ್ಯಾತರ ಆಶಾಕಿರಣರಾದ ಬಿ ಜೆಡ್ ಝಮೀರ್ ಅಹ್ಮದ್ ಖಾನ್ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಹಗುರವಾಗಿ ಮಾತನಾಡಿರುವುದನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆಯು ತೀವ್ರವಾಗಿ ಖಂಡಿಸುತ್ತದೆ.
ಕಾಂಗ್ರೇಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಿದರೆ ದೇಶದ ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವ ಪರಿಸ್ಥಿತಿ ರಾಜ್ಯದಲ್ಲಿಯೂ ಬರುವ ದಿನಗಳು ದೂರವಿಲ್ಲ ಎಂದು ವೇದಿಕೆಯು ಎಚ್ಚರಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.