718
ಶಿವಮೊಗ್ಗ : ತ್ಯಾವರೆ ಕೊಪ್ಪದ ಸಿಂಹಧಾಮದಲ್ಲಿ ಒಂದು ಅವಘಡ ಸಂಭವಿಸಿದ್ದು ಸಿಂಹದಾಮದಲ್ಲಿ ಒಟ್ಟು ಎರಡು ನೀರಾನೆಗಳಿದ್ದು ಅದರಲ್ಲಿ ಒಂದು ನೀರಾನೆ ಎಂಟು ತಿಂಗಳ ಗರ್ಭಿಣಿ ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕುವ ಸಾಧ್ಯತೆ ಇತ್ತು ಆದರೆ ನಿನ್ನೆ ತಡರಾತ್ರಿ 11:45ರ ಸುಮಾರಿಗೆ ಯುವ ಪಶುವೈದ್ಯೆ ಡಾಕ್ಟರ್ ಸಮೀಕ್ಷಾ ರೆಡ್ಡಿ ಚಿಕಿತ್ಸೆಗೆಂದು ತೆರಳಿದ್ದಾಗ ನೀರಾನೆ ದಿಡೀರನೆ ಡಾಕ್ಟರ್ ಸಮೀಕ್ಷಾ ರೆಡ್ಡಿ ಮೇಲೆ ದಾಳಿ ಮಾಡಿದೆ ಡಾಕ್ಟರ್ ಸಮೀಕ್ಷಾ ರೆಡ್ಡಿ ತೀವ್ರ ಸ್ವರೂಪದ ದಾಳಿಯಿಂದ ಚೇತರಿಸಿಕೊಳ್ಳಲು ಆಗದೆ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
