Wednesday, April 30, 2025
Google search engine
Homeರಾಜ್ಯರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಶ್ರವಣಬೆಳಗೊಳದ ಶಾಸಕರಾದ ಸಿ, ಎನ್ ಬಾಲಕೃಷ್ಣ ಅಚ್ಚರಿಯ ಆಯ್ಕೆ..!...

ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಶ್ರವಣಬೆಳಗೊಳದ ಶಾಸಕರಾದ ಸಿ, ಎನ್ ಬಾಲಕೃಷ್ಣ ಅಚ್ಚರಿಯ ಆಯ್ಕೆ..! ಚುನಾವಣೆ ಕಣದಲ್ಲಿದ್ದ ಉಳಿದವರು ಯಾರು? ಯಾರಿಗೆ ಎಷ್ಟು ಮತ..!

ಇಂದು ಕೆಂಪೇಗೌಡ ಮೆಡಿಕಲ್ ಆಸ್ಪತ್ರೆ ಸೆಮಿನಾರ್ ಹಾಲ್ ನಲ್ಲಿ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಸ್ಥಾನಗಳಗೆ ನಡೆದ ಚುನಾವಣೆಯಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃಷ್ಣ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕೆಂಚಪ್ಪಗೌಡ ವಿರುದ್ಧ ಗೆಲುವು ಸಾಧಿಸಿದ ಬಾಲಕೃಷ್ಣ:

ಅಧ್ಯಕ್ಷ ಸ್ಥಾನಕ್ಕೆ ಹಿಂದೆ ಅಧ್ಯಕ್ಷರಾಗಿದ್ದ ಬಿ, ಕೆಂಚಪ್ಪಗೌಡ ಸ್ಪರ್ಧೆ ಮಾಡಿದ್ದರು. ಆದರೆ ಅವರ ವಿರುದ್ಧ ಶಾಸಕ ಸಿ.ಎನ್. ಬಾಲಕೃಷ್ಣ ಅಂತಿಮವಾಗಿ ಗೆಲುವು ಸಾಧಿಸಿದ್ದಾರೆ.

ಯಾರ್ಯಾರಿಗೆ ಎಷ್ಟು ಮತಗಳು:
35 ನಿರ್ದೇಶಕರ ಪೈಕಿ 20 ನಿರ್ದೇಶಕರು ಬಾಲಕೃಷ್ಣ ಪರ ಮತ ಚಲಾಯಿಸಿದ್ದಾರೆ. 14 ಮತಗಳು ಹಿಂದಿನ ಅಧ್ಯಕ್ಷರಾಗಿದ್ದ ಬಿ,ಕೆಂಚಪ್ಪಗೌಡ ಪರವಾಗಿ ಚಲಾವಣೆ ಆಗಿದ್ದಾವೆ. ಆದ್ದರಿಂದ 14 ಮತಗಳ ಅಂತರದಿಂದ ಕೆಂಚಪ್ಪಗೌಡ ಬಾಲಕೃಷ್ಣ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಕುಣಿಗಲ್ ‌‌‌‌‌‌‌‌‌ಮಾಜಿ ಶಾಸಕ ನಾಗರಾಜಯ್ಯ ಅವರ ಪುತ್ರ ಲೋಕೇಶ್ ಅವರು ಅನಾರೋಗ್ಯದ ನಿಮಿತ್ತ ಮತ ಚಲಾಯಿಸಿಲ್ಲ.

ಉಳಿದಂತೆ ತಂಡದ ಆಯ್ಕೆ:

ಉಪಾಧ್ಯಕ್ಷರಾಗಿ ಡಾ.ಕೆ.ವಿ.ರೇಣುಕಾಪ್ರಸಾದ್, ಹನುಮಂತಯ್ಯ, ಖಜಾಂಚಿಯಾಗಿ ಆರ್. ಪ್ರಕಾಶ್ ಮತ್ತು ಸಹಾಯಕ ಕಾರ್ಯದರ್ಶಿಯಾಗಿ ರಾಘವೇಂದ್ರ ಆಯ್ಕೆಯಾಗಿದ್ದಾರೆ‌.

ಅಚ್ಚರಿಯ ಗೆಲುವು ಕಂಡ ಬಾಲಕೃಷ್ಣ:

ಕೆಂಚಪ್ಪಗೌಡ ನೇತೃತ್ವದ ಸಿಂಡಿಕೇಟ್‌ನ 10 ಸದಸ್ಯರು ಗೆದ್ದಿದ್ದಾರೆ. ಆದರೆ ಸಿ.ಎನ್‌. ಬಾಲಕೃಷ್ಣ ಅವರು ಯಾವುದೇ ಸಿಂಡಿಕೇಟ್‌ ರಚನೆ ಮಾಡಿಕೊಂಡಿರಲಿಲ್ಲ. ಆದರೂ, ಗೆಲುವು ಸಾಧಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ವಿವಿಧ ಮುಖಂಡರ ನೇತೃತ್ವದಲ್ಲಿ ರಚನೆಯಾಗಿದ್ದ ಯಾವುದೇ ಸಿಂಡಿಕೇಟ್‌ ಬಹುಮತ ಪಡೆಯಲು ಬೇಕಾದ 18 ಸದಸ್ಯರನ್ನು ಗೆದ್ದಿರಲಿಲ್ಲ. ಕಳೆದ ಡಿ.12ರಂದು ನಡೆದ ಚುನಾವಣೆಯಲ್ಲಿ ಸಂಘದ 35 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಸಂಘದ ಎರಡು ಉಪಾಧ್ಯಕ್ಷ ಸ್ಥಾನ, ತಲಾ ಒಂದು ಪ್ರಧಾನ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಕ್ಕೆ ಚುನಾವಣೆ ನಡೆದಿತ್ತು.

ಡಿಸೆಂಬರ್ 12ರಂದು ಚುನಾವಣೆಯಲ್ಲಿ ಆಯ್ಕೆಯಾಗಿದ್ದ 35 ಕಾರ್ಯಕಾರಿ ಸಮಿತಿ ಸದಸ್ಯರ ನಡುವೆ ಪದಾಧಿಕಾರಿಗಳ ಚುನಾವಣೆ ನಡೆದಿತ್ತು. ಪದಾಧಿಕಾರಿಗಳ ಚುನಾವಣೆಯಲ್ಲಿ ಆಯ್ಕೆಯಾಗಲು ಕನಿಷ್ಟ 18 ಕಾರ್ಯಕಾರಿ ಸದಸ್ಯರ ಮತ ಬೇಕಾಗಿತ್ತು.
ನಿರ್ದೇಶಕರ ಚುನಾವಣೆಯಲ್ಲಿ ಆಯ್ಕೆಯಾದವರು:

ಜಿಲ್ಲಾವಾರು ಹೆಸರು ಪಡೆದುಕೊಂಡ ಮತಗಳು ಈ ಕೆಳಕಂಡಂತಿದೆ:

  • ಮೈಸೂರು
    ಕೆ.ವಿ.ಶ್ರೀಧರ್​- 12267 ಮತ
    ಸಿ.ಜಿ.ಗಂಗಾಧರ್- 10174 ಮತ
    ಎಂ.ಬಿ.ಮಂಜೇಗೌಡ- 8790 ಮತ
  • ಮಂಡ್ಯ
    ಅಶೋಕ್​ ಎಸ್​.ಡಿ.ಜಯರಾಮ್​- 55721 ಮತ
    ಎನ್​.ಬಾಲಕೃಷ್ಣ- 38622 ಮತ
    ಚಂದ್ರಶೇಖರ್​- 36628 ಮತ
    ರಾಘವೇಂದ್ರ- 33986 ಮತ
  • ಹಾಸನ
    ಸಿ.ಎನ್​.ಬಾಲಕೃಷ್ಣ- 32311 ಮತ
    ಎಸ್​.ಎಸ್​.ರುದ್ರೇಗೌಡ- 30555 ಮತ
    ಬಿ.ಪಿ.ಮಂಜೇಗೌಡ- 20388 ಮತ
  • ತುಮಕೂರು
    ಹನುಮಂತರಾಯಪ್ಪ- 14901 ಮತ
    ಲೋಕೇಶ್​ ಡಿ.ನಾಗರಾಜಯ್ಯ- 11027 ಮತ
  • ಚಿತ್ರದುರ್ಗ
    ಜೆ.ರಾಜು- 4074 ಮತ
  • ಕೋಲಾರ ಮತ್ತು ಚಿಕ್ಕಬಳ್ಳಾಪುರ
    ಡಾ.ಡಿ.ಕೆ.ರಮೇಶ್​- 40435 ಮತ
    ಟಿ.ಕೋನಪ್ಪರೆಡ್ಡಿ- 32451 ಮತ
    ಎಲುವಳ್ಳಿ ಎನ್​.ರಮೇಶ್​- 24676 ಮತ
  • ದಕ್ಷಿಣ ಕನ್ನಡ ಮತ್ತು ಉಡುಪಿ
    ಡಾ.ಕೆ.ವಿ.ರೇಣುಕಾಪ್ರಸಾದ್​-3309
  • ಕೊಡಗು
    ಎಚ್​.ಎನ್​.ರವೀಂದ್ರ- 9157
  • ಶಿವಮೊಗ್ಗ ಮತ್ತು ಉತ್ತರ ಕನ್ನಡ
    ಎಸ್​.ಕೆ.ಧರ್ಮೇಶ್​​- 5808 ಮತ
  • ಚಿಕ್ಕಮಗಳೂರು
    ಎ.ಪೂರ್ಣೇಶ್​- 20144 ಮತ
  • ಬೆಂಗಳೂರು ಕ್ಷೇತ್ರ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ)
    ಡಾ. ಅಂಜನಪ್ಪ- 68938
    ಅಶೋಕ್ ತಮ್ಮಾಜಿ- 61893
    ಕೆಂಚಪ್ಪಗೌಡ- 58066
    ಆರ್ ಪ್ರಕಾಶ್- 56694
    ಎಚ್.ಸಿ ಜಯಮುತ್ತು- 56254
    ಹಾಪ್ ಕಾಮ್ಸ್ ದೇವರಾಜು- 55903

ಎಲ್.ಶ್ರೀನಿವಾಸ್- 49217
ಸಿ.ಎಂ ಮಾರೇಗೌಡ- 48492
ರಾಜಶೇಖರಗೌಡ- 46180
ಕೆ.ಎಸ್. ಸುರೇಶ್- 45601
ಉಮಾಪತಿ- 44709
ಚಕ್ಕೆರೆ ವೆಂಕಟರಾಮೇಗೌಡ- 43022
ಹನುಮಂತಯ್ಯ- 41687
ತೌಟನಹಳ್ಳಿ ಪುಟ್ಟಸ್ವಾಮಿ- 41165
ಡಾ. ನಾರಾಯಣಸ್ವಾಮಿ- 40728..

ನಿರ್ದೇಶಕರಾಗಿ ಆಯ್ಕೆಯಾಗಿದ್ದರು ಈ ಮೇಲಿನ ಮೂವತ್ತೈದು ಜನ ನಿರ್ದೇಶಕರು ನೀಡಿದ ಮತಗಳ ಆಧಾರದ ಮೇಲೆ ಶ್ರವಣಬೆಳಗೊಳ ಶಾಸಕರಾದ ಸಿಎನ್ ಬಾಲಕೃಷ್ಣ ಅವರು 20 ಮತಗಳನ್ನು ಪಡೆದುಕೊಂಡು ಜಯಶಾಲಿಯಾಗಿದ್ದಾರೆ.

ಸುದ್ದಿ ಮತ್ತು ಜಾಹೀರಾತು ನೀಡಲು:94449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...