*ನಿಲ್ಲದ ಜನಿವಾರ ಕಿಚ್ಚು..ಸಾಗರದಲ್ಲೂ ಜನಿವಾರ ಕಟ್.. ಸಾಗರ ತಾಲ್ಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ…!**ಸಾಗರದಲ್ಲೂ ಈ ಪ್ರಕರಣ ನಡೆದಿದೆ ಎಂದು ಬ್ರಾಹ್ಮಣ ಮಹಾಸಭಾ ಆರೋಪ …!**ಸಾಗರ:ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಅಂಗಿ ಬಿಚ್ಚಿಸಿ ಜನಿವಾರವನ್ನು ಕತ್ತರಿಸಿರುವ ಪ್ರಕರಣ ನಡೆದಿದೆ.**ಇದರಿಂದ ಪಾರ್ಥ ಎಸ್.ಎಂಬ ವಿಧ್ಯಾರ್ಥಿಯು ಸಮಸ್ಯೆಗೆ ಒಳಗಾಗಿದ್ದು ವಿದ್ಯಾರ್ಥಿಯ ತಂದೆ ಸಾಗರ ತಾಲೂಕಿನ ಹಳೇ ಇಕ್ಕೇರಿ ಗ್ರಾಮದ ಕೃಷಿಕ ಎಚ್.ಎಸ್. ಶ್ರೀನಿವಾಸ್ ಸಾಗರ ಪಟ್ಟಣದ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.**ಶನಿವಾರ ಮೆರವಣಿಗೆ ಮೂಲಕ ಆಗಮಿಸಿ ಸಾಗರ ಪೇಟೆ ಪೋಲಿಸ್ ಠಾಣೆ ಎದುರು ಸಾಗರ ತಾಲುಕು ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯದ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿ ಅಪಮಾನ ಮಾಡಿರುವುದನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.**ಈ ಸಂದರ್ಭದಲ್ಲಿ ಸಮಸ್ಯೆಗೆ ಒಳಗಾದ ವಿದ್ಯಾರ್ಥಿಯ ತಂದೆ ಶ್ರೀನಿವಾಸ್ ತಮ್ಮ ಅಳಲನ್ನು ತೋಡಿಕೊಂಡರು. ಇದರಿಂದ ಪ್ರತಿಭಟನಾಕಾರರು ತೀವ್ರ ಘಾಸೆಗೆ ಒಳಗಾಗಿ ಸಾಗರ ಪೊಲೀಸ್ ಠಾಣೆಗೆ ಮೆರವಣಿಗೆ ಮೂಲಕ ತೆರಳಿ ಅಧಿಕಾರಿಗಳಿಗೆ,ಮತ್ತು ಸರ್ಕಾರದ ವ್ಯವಸ್ಥೆಗೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.**ಜನಿವಾರ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿ ಎಸ್ ಪಾರ್ಥ ಪರೀಕ್ಷಾ ಕೊಠಡಿಯ ಬಳಿಯಲ್ಲಿಯೇ ತನ್ನ ಜನಿವಾರವನ್ನು ಕತ್ತರಿಸಿದ ವಿವರವನ್ನು ನೀಡುತ್ತಿದ್ದಂತೆ, ಸಂಬಂಧಪಟ್ಟ ಅಧಿಕಾರಿಯ ಮೇಲೆ ಶಿಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟುಹಿಡಿದರು, ಡಿವೈಎಸ್ ಪಿ ಗೋಪಾಲಕೃಷ್ಣ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಸೋಮವಾರ ಸಂಜೆಯ ಒಳಗಾಗಿ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಯು ಹೆಚ್ ರಾಮಪ್ಪ.ಎಲ್ ಟಿ.ತಿಮ್ಮಪ್ಪ.ಬಿ.ಆರ್.ಜಯಂತ್ ಇನ್ನಿತರರು ಮಾತನಾಡಿದರು.**ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರವೀಶ್,ಮ.ಸ ನಂಜುಂಡಸ್ವಾಮಿ,ಎಲ್.ಟಿ.ತಿಮ್ಮಪ್ಪ, ಬಿ.ಆರ್.ಜಯಂತ್, ಯು.ಎಚ್.ರಾಮಪ್ಪ ಕಾರ್ಯದರ್ಶಿ ಸುದರ್ಶನ್, ಪ್ರಸನ್ನ ಕೆರೆಕ್ಕೆ,ವೆಂಕಟೇಶ್ ಕಟ್ಟಿ, ನಗರಸಭಾ ಸದಸ್ಯ ಕೆ.ಆರ್.ಗಣೇಶ್ ಪ್ರಸಾದ್, ವ.ಶಂ.ರಾಮಚಂದ್ರ ಭಟ್, ಚೂಡಮಣಿ ರಾಮಚಂದ್ರ ಕೆ.ಸಿ.ದೆವಪ್ಪ, ವಿನಾಯಕ್ ಜೋಯ್ಸ್.ರಾಮಚಂದ್ರ ಖಂಡಿಕಾ.ಸೂರ್ಯನಾರಾಯಣ.ವೈ.ಮೋಹನ್, ಐ.ವಿ.ಹೆಗಡೆ, ಶೇಷಗಿರಿ ಹೆಗಡೆ.ನಾರಾಯಣ ಮೂರ್ತಿ ಚಿನ್ಮಯ್ ಹಾಗೂ ಇತರರಿದ್ದರು.