ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಮೃತರಾದ ಶಿವಮೊಗ್ಗದ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಅವರ ಸ್ನೇಹಿತರಿಗೆ ಕುಟುಂಬದವರಿಗೆ ಒಡನಾಡಿಗಳಿಗೆ ದುಃಖವನ್ನು ತರಿಸಿದ್ದರು ಕೂಡ ಎಲ್ಲೋ ಒಂದು ಕಡೆ ಮಂಜುನಾಥ್ ಅಮರರಾಗಿಬಿಟ್ಟರು.
ಸಾರ್ಥಕತೆಯ ಸಾವು ಕಂಡ ಮಂಜುನಾಥ್..!
ತಮ್ಮ ಕುಟುಂಬದ ಜೊತೆಗೆ ಭಾರತದ ಸ್ವರ್ಗ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದಾಗ ಪಾಕಿಸ್ತಾನ ಬೆಂಬಲಿತ ಉಗ್ರರು ನಡೆಸಿದ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವನ್ನಪ್ಪಿದ್ದಾರೆ. ಇಂದು ಅವರನ್ನು ಇಡೀ ಶಿವಮೊಗ್ಗದ ಜನತೆ ಮೆರವಣಿಗೆಯ ಮೂಲಕ ಕರೆ ತಂದು ಬ್ರಾಹ್ಮಣ ವಿಧಿ ವಿಧಾನಗಳನ್ನು ಪೂರೈಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಕೂಡ ನೆರವೇರಿದೆ. ಈ ಸಮಯದಲ್ಲಿ ಶಿವಮೊಗ್ಗದ ನಾಗರಿಕರು, ಸಂಘಟನೆಗಳು, ಹಿಂದೂ ಮುಸ್ಲಿಂ ಜೈನ ಕ್ರಿಶ್ಚಿಯನ್ ಎನ್ನದೆ ಸರ್ವರು ಪಾಲ್ಗೊಂಡು ಅಂತಿಮ ವಿಧಿ ವಿಧಾನಗಳಿಗೆ ಸಾಕ್ಷಿಯಾದರು ಸಕಲ ಸರ್ಕಾರಿ ಗೌರವಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ , ಶಾಸಕ ಚನ್ನಬಸಪ್ಪ, ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ, ಮಾಜಿ ಡಿಸಿಎಂ ಈಶ್ವರಪ್ಪ, ಜನತಾದಳದ ಮುಖಂಡರು ಮಾಜಿ ಶಾಸಕರಾದ ಪ್ರಸನ್ನ ಕುಮಾರ್ ಶಿವಮೊಗ್ಗದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಸೇರಿದಂತೆ ಹಲವು ಗಣ್ಯರು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಉಪಸ್ಥಿತರಿದ್ದು ಗೌರವ ವಂದನೆಗಳನ್ನು ಸಲ್ಲಿಸಿದರು.
ಸಾಮಾನ್ಯ ಮನುಷ್ಯ ಮಂಜುನಾಥ್ ಸಹಜವಾಗಿ ಸಾವಾಗಿದ್ದರೆ ಈ ತರಹದ ಗೌರವಗಳು ಸಿಗುತ್ತಿರಲಿಲ್ಲ..?!
ಪ್ರತಿಯೊಬ್ಬ ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು ಅದು ಪ್ರಕೃತಿ ಸಹಜ ನಿಯಮ ಅದರಲ್ಲಿ ನಾವು ಏನು ಸಾಧಿಸಿದ್ದೇವೆ ಎನ್ನುವುದು ಮುಖ್ಯ ದ್ವೇಷ ,ಅಸೂಯೆ, ಅಹಂಕಾರ, ಅಹಂ ಹಣದದಾಹ , ವ್ಯಾಮೋಹ, ಅಧಿಕಾರದ ದಾಹ ಎಲ್ಲವೂ ಕ್ಷಣಿಕ ಜೀವನದಲ್ಲಿ ಪರರಿಗಾಗಿ ಅವರ ಒಳಿತಿಗಾಗಿ ಒಂದಷ್ಟು ಸಮಯವನ್ನು ಯಾವುದೇ ನಿರೀಕ್ಷೆಗಳು ಇಲ್ಲದೆ ಮುಡುಪಾಗಿಟ್ಟು ಸಾರ್ಥಕ ಜೀವನ ಸಾಗಿಸುವುದು ಮುಖ್ಯ ಕೊನೆಗೆ ಉಳಿಯುವುದು ಅದೊಂದೇ ಇದನ್ನು ಅರಿತುಕೊಂಡು ಜೀವನ ಸಾಗಿಸಿದರೆ ಒಳಿತು ಮಂಜುನಾಥ್ ಸಾವನ್ನೇ ತೆಗೆದುಕೊಳ್ಳಿ ಸಾಮಾನ್ಯ ರಿಯಲ್ ಎಸ್ಟೇಟ್ ಉದ್ಯಮಿ ಒಬ್ಬ ಸತ್ತಿದ್ದರೆ ಈ ತರಹದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರುತ್ತಿತ್ತಾ..?! ಖಂಡಿತ ಇರಲಿಲ್ಲ…. ಆದರೆ ಮಂಜುನಾಥ್ ಸಾವು ವೀರ ಯೋಧನ ಒಬ್ಬನ ಸಾವಾಗಿ ಇಂದು ಇತಿಹಾಸದ ಪುಟದಲ್ಲಿ ದಾಖಲಾಗಿದೆ…. ಹಾಗಾಗಿ ಎಲ್ಲೋ ಒಂದು ಕಡೆ ಮಂಜುನಾಥ್ ಕುಟುಂಬಕ್ಕೆ ಮಂಜುನಾಥ್ ಸಾವಿನ ದುಃಖವನ್ನು ತಡೆದುಕೊಳ್ಳುವ ಶಕ್ತಿ ಭಗವಂತ ನೀಡುವುದರ ಜೊತೆಗೆ… ಒಬ್ಬ ವೀರ ಯೋಧನ ಸಾವಿನ ರೀತಿ ಅಂತ್ಯಕ್ರಿಯೆ ನಡೆದಿರುವುದು ಅವರಲ್ಲಿ ಎಲ್ಲೋ ಒಂದು ಕಡೆ ಸಂತಸವನ್ನು ತರಿಸಿದೆ ಎಂದರೆ ತಪ್ಪಾಗಲಾರದು…. ಎಲ್ಲರಿಗೂ ಇಂತಹ ಸಾವು ಸಿಗಲಿಕ್ಕಿಲ್ಲ… ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತಂತಹ ಎಷ್ಟೋ ಜನರ ಸಾವುಗಳು ಮುಂದಿನ ಭಾರತದ ಜನರ ಬದುಕಿಗೆ ಉತ್ತರ ಸಿಗಲಿದೆ…. ಆ ದಿಕ್ಕಿನಲ್ಲಿ ಸರ್ಕಾರಗಳು ಭಾರತದ ಸೈನಿಕರು ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಲಿದ್ದಾರೆ…
ರಘುರಾಜ್ ಹೆಚ್.ಕೆ…9449553305…