
ಶಿವಮೊಗ್ಗ : ಇಂದು ಮುಂಜಾನೆ ಎಸಿ ಸತ್ಯನಾರಾಯಣ ನೇತೃತ್ವದಲ್ಲಿ ಹಾಡೋನಹಳ್ಳಿ ಆಕ್ರಮ ಮರಳು ದಂಧೆಯ ಮೇಲೆ ದಾಳಿ ಮಾಡಿದ್ದು ಈ ದಾಳಿಯ ವೇಳೆ ಸುಮಾರು 10 ಜೆಸಿಬಿ ಲಾರಿ, ಹತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಸ್ಥಳದಲ್ಲಿದ್ದವು.

ಆದರೆ ಸಿಬ್ಬಂದಿಗಳು ಕಡಿಮೆ ಇದ್ದರಿಂದ ದಾಳಿಯ ವೇಳೆ ಕೆಲವು ಜೆಸಿಬಿ , ಟ್ರ್ಯಾಕ್ಟರ್, ಲಾರಿಗಳು ತಪ್ಪಿಸಿಕೊಂಡಿದ್ದು ಹಲವು ವೆಹಿಕಲ್ ಗಳಿಗೆ ನಂಬರ್ ಗಳಿಲ್ಲದಿರುವುದೇ ದುರಂತ.
ಈ ದಾಳಿಯ ವೇಳೆ ಎಸಿ ನೇತೃತ್ವದ ತಂಡ ನಾಲ್ಕು ಜೆಸಿಬಿ, ಎಂಟು ಟ್ಯಾಕ್ಟರ್ ಗಳನ್ನು ಪಶಪಡಿಸಿಕೊಂಡು ಮೂರು ಲಕ್ಷದ ಅರವತ್ತು ಸಾವಿರ ದಂಡವನ್ನು ಸ್ಥಳದಲ್ಲೇ ವಿಧಿಸಿದ್ದಾರೆ.
ಈ ದಾಳಿಯಲ್ಲಿ ಎಸಿ ಸತ್ಯನಾರಾಯಣ, ತಹಸೀಲ್ದಾರ್ ರಾಜೀವ್, ಆರ್ ಐ ಮಹಾರುದ್ರಪ್ಪ, ಒಳಗೊಂಡ ತಂಡ ದಾಳಿ ನಡೆಸಿದ್ದಾರೆ.
ರಘುರಾಜ್ ಹೆಚ್.ಕೆ..9449553305…