ಕರ್ನಾಟಕದ ಕಾರ್ಮಿಕ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದವರು ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ. ಸದಾಶಿವ ಅವರು ನಿಧನರಾಗಿದ್ದು .
ಶಿವಮೊಗ್ಗ ಮೂಲದ ಸದಾಶಿವ ಅವರು ಬಾಲ್ಯದಿಂದಲೇ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿ, ಕರ್ನಾಟಕದಲ್ಲಿ ಬಿಎಂಎಸ್ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾರ್ಮಿಕ ಚಳವಳಿ ಮೌಲ್ಯಾಧಾರಿತ ನಾಯಕತ್ವವನ್ನು ಹೊಂದಿದ್ದ ವ್ಯಕ್ತಿ ಬಿಎಂಎಸ್ ನ ಹಿರಿಯ ಕಾರ್ಯಕರ್ತರು ಪ್ರಚಾರಕ ಪೂರ್ಣಾವಧಿ ಕಾರ್ಯಕರ್ತರಾದ ಡಿಕೆ ಸದಾಶಿವ ರವರು ಇಂದು ಬೆಳಗಿನ ಜಾವ ಸ್ವರ್ಗಸ್ತರಾಗಿರುತ್ತಾರೆ. ಪ್ರಾರ್ಥಿವ ಶರೀರವನ್ನು ಶಿವಮೊಗ್ಗಕ್ಕೆ 12 ಗಂಟೆಗೆ ತರಲಾಗುವುದು ಅವರ ಮುಂದಿನ ಕ್ರಿಯಾಕರ್ಮಗಳನ್ನು 2:30 ಸಮಯದ ನಂತರ ನಡೆಸಲಾಗುವುದು…
ಇವರ ಅಗಲಿಕೆಗೆ ಬಿಜೆಪಿಯ ನಾಯಕರು ಹಾಗೂ ಶಾಸಕರು ಆಗಿರುವ ಚನ್ನಬಸಪ್ಪನವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.