
ತೀರ್ಥಹಳ್ಳಿ : ನಗರದಲ್ಲಿ ನಿನ್ನೆಯಿಂದ ಬಹಳ ದಿನಗಳ ಹಲವರ ಕನಸಾಗಿದ್ದ, ಅವಶ್ಯಕತೆಗಳಲ್ಲಿ ಒಂದಾದ ಬಂದೂಕು ತರಬೇತಿ ಶಿಬಿರ ಪ್ರಾರಂಭವಾಗಿದ್ದು. ಯಶಸ್ವಿಯಾಗಿ ನಡೆಯುತ್ತಿದೆ.
ಬಂದೂಕು ತರಬೇತಿ ಶಿಬಿರ ಉದ್ದೇಶಿಸಿ ಡಿಆರ್ ಡಿವೈಎಸ್ಪಿ ಕೃಷ್ಣಮೂರ್ತಿ ಅವರ ಮಾತುಗಳು :
ಡಿಆರ್ ಡಿವೈಎಸ್ಪಿ ಕೃಷ್ಣಮೂರ್ತಿ ಅವರು ಮಾತನಾಡುತ್ತಾ ಎಲ್ಲಾ ಶಿಬಿರಾರ್ಥಿಗಳು ಶಿಸ್ತು ಮತ್ತು ಸಂಯಮದಿಂದ ಪ್ರತಿದಿನ ಸತತವಾಗಿ ಭಾಗವಹಿಸಬೇಕು ಕಾರ್ಯಕ್ರಮವು ಅತ್ಯುತ್ತಮವಾಗಿ ಆಯೋಜಿಸಲ್ಪಟ್ಟಿದೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು. ಶಿಬಿರದ ಆಯೋಜಕರು ಬಹಳ ಸಮಯದಿಂದ ನಮ್ಮಲ್ಲಿ ಮಲೆನಾಡಿನ ರೈತರು ಹಾಗೂ ಹಳ್ಳಿಗರ ಈ ಅಭಿಪ್ರಾಯವನ್ನು ನಮ್ಮಲ್ಲಿ ವ್ಯಕ್ತಪಡಿಸುತ್ತಿದ್ದರು ಬಂದೂಕಿನ ಪರವಾನಗಿ ಬದಲಾವಣೆ ಮಾಡಲಾಗುತ್ತಿಲ್ಲ ಹಾಗೂ ಬಂದೂಕಿನ ಹೊಸ ಪರವಾನಗಿ ಮಾಡಿಸಲು ಆಗುತ್ತಿಲ್ಲ ಎಂದು ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದರು, ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಕಾರ್ಯಕ್ರಮದ ಆಯೋಜಕರ ಕಡೆಯಿಂದ ಪ್ರತಿದಿನ ಉಪಹಾರ ಕಾಫಿ-ಟೀ ನೀರು ಮುಂತಾದವುಗಳನ್ನು ಬಹಳ ವ್ಯವಸ್ಥಿತವಾಗಿ ವ್ಯವಸ್ಥೆ ಮಾಡಲಾಗಿದೆ ಎಲ್ಲಾ ವ್ಯವಸ್ಥೆಗಳು ಪಾರದರ್ಶಕವಾಗಿದ್ದು ಎಲ್ಲಾ ಲೆಕ್ಕಾಚಾರಗಳು ಪ್ರತಿಯೊಬ್ಬರಿಗೂ ತಿಳಿಯುವಂತೆಯೇ ನಡೆಯುವಂಥದ್ದು ಎಂದು ಹೇಳಿದರು.
ಶಿಬಿರದ ಆಯೋಜನೆಯ ಹೊಣೆಹೊತ್ತ ರಕ್ಷಿತ್ ಮೇಗರವಳ್ಳಿ ಅವರ ಮಾತುಗಳು:
ಶಿಬಿರದ ಆಯೋಜನೆಯ ಹೊಣೆ ಹೊತ್ತಿರುವ ರಕ್ಷಿತ್ ಮೇಗರವಳ್ಳಿ ಮಾತನಾಡಿ ಬಹಳ ವರ್ಷಗಳ ನಂತರ ತೀರ್ಥಹಳ್ಳಿ ರೈತಾಪಿ ವರ್ಗದ ಜನರ ಬಹುದಿನಗಳ ಕನಸಾಗಿದ್ದ ಬಂದೂಕು ತರಬೇತಿ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಶಿಬಿರಾರ್ಥಿಗಳು ಈ ಮಹತ್ತರವಾದ ಉದ್ದೇಶ ಹೊಂದಿರುವ ತರಬೇತಿ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು.
ಅಂತೆಯೇ ಈ ತರಬೇತಿ ಶಿಬಿರ ಆಯೋಜನೆಗೆ ಬಹಳಷ್ಟು ಕೂಗು ಇತ್ತು, ಸಣ್ಣ ಮತ್ತು ಮಧ್ಯಮ ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ದರು ಇದರಿಂದಾಗಿ ಅವರ ಬವಣೆ ನೀಗಲಿದೆ ಹೀಗಾಗಿ ಯಾರೂ ಸಹ
ಅಪ ಪ್ರಾಚಾರಕ್ಕೆ ಕಿವಿಗೊಡದಿರಲು ರಕ್ಷಿತ್ ಕರೆನೀಡಿದರು.

ಎಲ್ಲ ಶಿಬಿರಾರ್ಥಿಗಳಿಗೆ ಸಮವಸ್ತ್ರ ಊಟ, ತಿಂಡಿ ನೀರು,ಮತ್ತು ಪೊಲೀಸ್ ಇಲಾಖೆಯ ಸಂಪರ್ಕ,ಸಮರ್ಪಕ ದಾಖಲಾತಿ,ನೀತಿ ಸಂಹಿತೆಗಳ ಹಿನ್ನಲೆಯಲ್ಲಿ ಕಾರ್ಯಕ್ರಮ ಆಯೋಜನೆ ಸುಲಭದ ಮಾತಾಗಿರಲಿಲ್ಲ,ಹಾಗಾಗಿ ಈ ಒಂದು ಸದುದ್ದೇಶದ ಈಡೇರಿಕೆಗಾಗಿ ಶುಲ್ಕ ನಿಗದಿ ಮಾಡಲಾಗಿದೆ ಹಾಗೂ ಇದರ ಬಗ್ಗೆ ಶಿಬಿರಾರ್ಥಿಗಳಾದ ನಿಮ್ಮೆಲ್ಲರಿಗೂ ಸಮರ್ಪಕ ಮಾಹಿತಿ ನೀಡಲಾಗಿದೆ ಮತ್ತು ನಿಮ್ಮೆಲ್ಲರ ಒಪ್ಪಿಗೆ ಬೆಂಬಲದಿಂದಲೇ ಶಿಬಿರ ಏರ್ಪಡಿಸಲಾಗಿದೆ.
ಶಿಬಿರದ ಸಂಪೂರ್ಣ ಖರ್ಚು-ವೆಚ್ಚದ ವಿವರವನ್ನು ನೀಡಲಾಗುವುದು:
ಶಿಬಿರದಲ್ಲಿ ಭಾಗಿಯಾಗಿ ಮತ್ತು ಇದರ ಪೂರ್ಣ ಖರ್ಚು ವೆಚ್ಚದ ಪಟ್ಟಿಯನ್ನು ಪಾರದರ್ಶಕವಾಗಿ ನಡೆಸುತ್ತೇವೆ ಮತ್ತು ಈ ಬಗ್ಗೆ ಯಾವುದೇ ರೀತಿಯ ಗೊಂದಲಗಳು ಬೇಡ ಸಂಪೂರ್ಣ ಲೆಕ್ಕವನ್ನು ಪಾರದರ್ಶವಾಗಿ ನಿಮ್ಮೆಲ್ಲರ ಮುಂದಿಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಯೋಜಕರುಗಳಾದ
ಪ್ರಶಾಂತ್ ಕುಕ್ಕೆ
ನವೀನ್ ಯತಿರಾಜ್
ಉಪಸ್ಥಿತರಿದ್ದರು.
ಶಿಬಿರಾರ್ಥಿ ಗಳ ಪರವಾಗಿ ಮಾತನಾಡಿ ತಮ್ಮ ಅನಿಸಿಕೆ ಹಂಚಿಕೊಂಡ
ವಕೀಲರ ಸಂಘದ ಅಧ್ಯಕ್ಷರಾದ ಸರಳ ಲೋಕೇಶ: ಮಾತನಾಡಿ ಕಾರ್ಯಕ್ರಮದ ಆಯೋಜಕರು ಕಳೆದ ಎರಡು ಮೂರು ತಿಂಗಳಿನಿಂದ ಈ ಕಾರ್ಯಕ್ರಮವನ್ನು ಆಯೋಜಿಸಲು ಬಹಳಷ್ಟು ಶ್ರಮ ಪಟ್ಟಿದ್ದಾರೆ ಎಂದು ಹೇಳಿದರು ಆಯೋಜಕರು ಹಾಗೂ ಪೊಲೀಸ್ ಸಿಬ್ಬಂದಿ ನಮ್ಮ 600 ಜನ ಶಿಬಿರಾರ್ಥಿಗಳಿಗೆ ವ್ಯವಸ್ಥಿತವಾಗಿ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ ಎಲ್ಲರಿಗೂ ಅಭಿನಂದನೆಗಳು ಈ ತರಹದ ಶಿಬಿರವನ್ನು ಒಟ್ಟಾಗಿ ಮಾಡಿದ್ದಕ್ಕೆ ಆಯೋಜಕರಿಗೆ ಧನ್ಯವಾದಗಳನ್ನು ತಿಳಿಸಿದರು.
ಸಹ್ಯಾದ್ರಿ ಶಾಲೆಯ ಪ್ರಾಂಶುಪಾಲರು ಗುರುರಾಜ್ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಾ:
ಆನಂತರ ಸಹ್ಯಾದ್ರಿ ಶಾಲೆಯ ಪ್ರಾಂಶುಪಾಲರಾದ ಗುರುರಾಜ್ ಮಾತನಾಡಿ ನಾನು ಬಹಳ ಸಮಯದಿಂದ ಕಾಯುತ್ತಿದ್ದೆ ಈ ತರಹದ ಶಿಬಿರ ಕಳೆದ ಮೂರು ನಾಲ್ಕು ವರ್ಷಗಳಿಂದ ನಡೆಯುತ್ತಿರಲಿಲ್ಲ ನಾವೆಲ್ಲ ಮನಸ್ಪೂರ್ವಕವಾಗಿ ಪಾಲ್ಗೊಂಡಿದ್ದೇವೆ 600 ಜನ ಶಿಬಿರಾರ್ಥಿಗಳ ಪರವಾಗಿ ಕಾರ್ಯಕ್ರಮದ ಆಯೋಜಕರು ಹಾಗೂ ಆರಕ್ಷಕ ಪಡೆಗೆ ಧನ್ಯವಾದಗಳನ್ನು ತಿಳಿಸಿದರು.
ಉಪನ್ಯಾಸಕರಾದ ಶರತ್ ಮಾತನಾಡಿ:
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿಯ ಉಪನ್ಯಾಸಕರಾದ ಶರತ್ ಮಾತನಾಡಿ ಆಯೋಜಕರಿಗೆ ಧನ್ಯವಾದಗಳನ್ನು ತಿಳಿಸುತ್ತಾ ಅಚ್ಚುಕಟ್ಟಾದ ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶಿಬಿರದ ಸದ್ಭಳಕೆಯನ್ನು ಶಿಬಿರಾರ್ಥಿಗಳು ಪ್ರಯೋಜನ ಪಡೆದುಕೊಂಡು 10 ದಿನಗಳ ಇಲಾಖೆಗೆ ಹಾಗೂ ಆಯೋಜಕರೊಡನೆ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು.
ಈ ಶಿಬಿರದಲ್ಲಿ 15ಕ್ಕೂ ಹೆಚ್ಚು ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು ಹಾಗೂ ತಾಲೂಕಿನ,ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ಮತ್ತು ಅನೇಕರು ಈ ಶಿಬಿರಕ್ಕೆ ಭಾಗವಹಿಸಿದ್ದು, ಕಾರ್ಯಕ್ರಮದ ಆಯೋಜಕರು ಕಳೆದ ಹಲವಾರು ತಿಂಗಳಿನಿಂದ ಈ ಶಿಬಿರಕ್ಕಾಗಿ ಪೂರ್ವತಯಾರಿ ಮಾಡಿಕೊಂಡಿದ್ದು ಶಿಬಿರದ ಯಶಸ್ಸಿಗಾಗಿ ಶ್ರಮಿಸುತ್ತಿದ್ದು ಸರ್ವರ ಸಹಕಾರ ಬಯಸಿದ್ದಾರೆ.
ಪತ್ರಿಕೆ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳನ್ನು ಪ್ರಶ್ನಿಸಿದಾಗ ಶಿಬಿರದಲ್ಲಿ ಉತ್ತಮವಾಗಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೇವೆ. ನಮಗೆ ಇಲ್ಲಿನ ಶುಲ್ಕದ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರು. ಅದರ ಪ್ರಕಾರವೇ ಶುಲ್ಕ ಪಾವತಿಸಿ ನಾವು ಭಾಗವಹಿಸುತ್ತಿದ್ದೇವೆ. ಎನ್ನುವ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305….