
ಯುಗಾದಿಯ ಮರುದಿನ ಹೊಸತೊಡಕುದಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸಿ ಮತ್ತು ಹಿಂದೂ ಜಟ್ಕಾ ಮಾಂಸವನ್ನು ಉಪಯೋಗಿಸಿ
ಇಂದು ರಾಜ್ಯದಲ್ಲಿ ಹಲಾಲ್ ಉತ್ಪನ್ನಗಳ ಮೇಲೆ ನಿಷೇಧ ಹೇರಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಹಲಾಲ್ ಪ್ರಮಾಣಪತ್ರದ ಮೂಲಕ ದೇಶದ ಅರ್ಥವ್ಯವಸ್ಥೆಗೆ ಸಮನಾಂತರವಾಗಿ ಪ್ರತ್ಯೇಕ ಇಸ್ಲಾಮಿಕ್ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವ ಸಂಚುನ್ನು ಇಸ್ಲಾಮಿಕ್ ಸಂಘಟನೆಗಳು ಮಾಡುತ್ತಿವೆ. ಇದು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ದೇಶದಲ್ಲಿ ಆಹಾರದ ಉತ್ಪನ್ನಗಳ ಬಗ್ಗೆ ಪ್ರಮಾಣಪತ್ರಗಳನ್ನು ನೀಡಲು ಎಫ್.ಎಸ್.ಎಸ್.ಎ.ಐ ಮತ್ತು ಎಫ್‌ಡಿಎ.ಯಂತಹ ಅಧಿಕೃತ ಸರಕಾರಿ ಸಂಸ್ಥೆಗಳು ಇರುವಾಗ, ಹಣ ಪಡೆದುಕೊಂಡು ಇಸ್ಲಾಮಿಕ್ ಪದ್ದತಿಯ ಪ್ರಮಾಣಪತ್ರವನ್ನು ನೀಡುವುದು ಜಾತ್ಯತೀತತತ್ವಕ್ಕೆ ವಿರುದ್ಧವಾಗಿದೆ ಮತ್ತು ದೇಶದ ಬಹುಸಂಖ್ಯಾತ ಹಿಂದೂ ಉದ್ಯಮಿಗಳಿಗೆ, ವಂಶಪಾರಂಪರ್ಯವಾಗಿ ಮಾಂಸದ ವ್ಯಾಪಾರ ಮಾಡಿಕೊಂಡು ಬರುವ ಹಿಂದೂ ಕಟುಕ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ ಮತ್ತು ಅವರ ಆರ್ಥಿಕ ಹಿತಾಸಕ್ತಿಯನ್ನು ರಕ್ಷಣೆ ಮಾಡಬೇಕೆನ್ನುವ ಸಂವಿಧಾನದ ಕಲಂ 46 ರ ಉಲ್ಲಂಘನೆಯಾಗಿದೆ. ಇದು ಮುಸಲ್ಮಾನ ಸಮುದಾಯವು ಹಲಾಲ್ ಮೂಲಕ ದೇಶದ ಆರ್ಥಿಕ ವ್ಯವಹಾರದ ಮೇಲೆ ಹಿಡಿತ ಸಾಧಿಸಲು ಮಾಡಿದ ಸಂಚಾಗಿದೆ. ಇಂದು ಹಲಾಲ್ ಪ್ರಮಾಣ ಪತ್ರವನ್ನು ನೀಡುವ ಜಮಿಯತ್ ಉಲೆಮಾವು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಬಂಧಿಸಲ್ಪಟ್ಟ 700 ಆರೋಪಿಗಳಿಗೆ ಕಾನೂನು ಸಹಾಯ ಮಾಡುವ ಮೂಲಕ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದೆ. ಹಾಗಾಗಿ ಹಲಾಲ್ ಪ್ರಮಾಣಪತ್ರವನ್ನು ಕೂಡಲೇ ನಿಷೇಧ ಮಾಡಬೇಕು, ಎಂದು ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟವು ಆಗ್ರಹಿಸುತ್ತಿದೆ.
ಹಿಂದೂಗಳು ಯುಗಾದಿಯ ಮರುದಿನ ನಡೆಯುವ ಹೊಸತೊಡಕುದಲ್ಲಿ ಹಲಾಲ್ ಮಾಂಸದ ಬದಲು ಜಟ್ಕಾ ಮಾಂಸವನ್ನು ಬಳಸಬೇಕು. ಹಲಾಲ್ ಮಾಂಸದ ಮೂಲಕ ಆಗಲೇ ಅವರು ಅಲ್ಲಾಹ್‌ನಿಗೆ ಅರ್ಪಣೆ ಮಾಡಿದ್ದನ್ನು, ಅಂದರೆ ಎಂಜಲು ಮಾಡಿದ ಮಾಂಸವನ್ನು ಪುನಃ ಹಿಂದೂ ದೇವರಿಗೆ ಅರ್ಪಿಸುವುದು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ. ಹಾಗಾಗಿ ಸರ್ಕಾರವು ಹಿಂದೂಗಳ ಧಾರ್ಮಿಕ ಹಕ್ಕನ್ನು ಗಮನದಲ್ಲಿರಿಸಿ ರಾಜ್ಯದ ಎಲ್ಲ ಕಡೆ ಜಟ್ಕಾ ಮಾಂಸವನ್ನು ಸಿಗುವ ಹಾಗೆ ವ್ಯವಸ್ಥೆಯನ್ನು ಮಾಡಬೇಕು ಎಂದು ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟವು ಆಗ್ರಹಿಸುತ್ತಿದೆ. ಅಲ್ಲದೇ ಹಿಂದೂ ಬಾಂಧವರು ಭಾರತೀಯ ಸಂಸ್ಕೃತಿಯ ಪ್ರಕಾರ ಹೊಸ ವರ್ಷವನ್ನು ಚೈತ್ರ ಶುಕ್ಲ ಪಾಡ್ಯದಂದು ಅಂದರೆ ಯುಗಾದಿಯಂದು ಆಚರಿಸಬೇಕು, ಎಂದೂ ಕರೆ ನೀಡುತ್ತಿದ್ದೇವೆ.
- ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ, ಸಂಪರ್ಕ – 7204082609
- ಶ್ರೀ. ಪ್ರಶಾಂತ ಸಂಬರಗಿ, ಉದ್ಯಮಿಗಳು
- ಶ್ರೀ. ಅಮರ, ಕಾರ್ಯದರ್ಶಿ, ಶ್ರೀರಾಮ ಸೇನೆ, ಕರ್ನಾಟಕ
- ಶ್ರೀ ಮುನಿ ಗೌಡ, ಸಂಸ್ಥಾಪಕರು, ಹಿಂದವಿ ಜಟ್ಕಾ ಮೀಟ್, ಬೆಂಗಳೂರು.
- ಶ್ರೀ. ಗೋಪಾಲಕೃಷ್ಣ, ಪ್ರಾಂತ್ಯ ಪ್ರಮುಖರು, ಬೆಂಗಳೂರು ಉತ್ತರ ಭಾಗ, ಹಿಂದೂ ಜಾಗರಣ ವೇದಿಕೆ
- ಶ್ರೀ. ಸುರೇಶ ಜೈನ್, ಅಧ್ಯಕ್ಷರು, ಅಖಿಲ ಭಾರತ ಹಿಂದೂ ಮಹಾಸಭಾ
- ಶ್ರೀ. ಎಸ್. ಭಾಸ್ಕರನ್, ಅಧ್ಯಕ್ಷರು, ವಿಶ್ವ ಸನಾತನ ಪರಿಷತ್, ಬೆಂಗಳೂರು.
- ಸೌ. ಶುಭಾ ಬಿ ನಾಯ್ಕ, ವಕೀಲರು, ಬೆಂಗಳೂರು ಉಚ್ಚ ನ್ಯಾಯಾಲಯ.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…