
ಬೆಳ್ತಂಗಡಿ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಡಿಗ್ರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿದ್ದರು.
ಡಾ.ಬಿ.ಯಶೋವರ್ಮ”ರವರು ಸೋಮವಾರ ಬೆಳಗ್ಗಿನ ಜಾವ 4:30 ರ ಸುಮಾರಿಗೆ ಅನಾರೋಗ್ಯದಿಂದ ಸಿಂಗಪುರ್ ನಲ್ಲಿ ನಿಧನರಾಗಿದ್ದು ಅವರ ಮೃತದೇಹದ ಸಾಗಿಸುವ ಬಗ್ಗೆ ಕಾನೂನು ಪ್ರಕ್ರಿಯೆ ಸೋಮವಾರ ಮಧ್ಯಾಹ್ನ ಮುಗಿಸಿದ್ದು ಸೋಮವಾರ ರಾತ್ರಿ 12 ಗಂಟೆಗೆ ಸಿಂಗಪುರದಿಂದ
ಇಂಡಿಗೋ ವಿಮಾನದಲ್ಲಿ ಮೃತದೇಹ ಹೊರಟು ನಾಳೆ ಮಂಗಳವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅಗಮಿಸಲಿದೆ.
ನಾಳೆ ಮಂಗಳವಾರ ಬೆಳಗ್ಗೆ ವಿಮಾನ ನಿಲ್ದಾಣದ ಕಾನೂನು ಪ್ರಕ್ರಿಯೆ ಮುಗಿಸಿಕೊಂಡ ಬಳಿಕ ಸುಮಾರು 8 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಅಂಬುಲೆನ್ಸ್ ನಲ್ಲಿ ರಸ್ತೆಯ ಮೂಲಕ ಚಾರ್ಮಾಡಿಗೆ ಅಗಮಿಸಿ ಮತ್ತೂರು ದೇವಸ್ಥಾನದ ಪಕ್ಕದ ಅಂಗಣದಿಂದ ಸುಮಾರು 1 ಗಂಟೆಗೆ ರಿಂದ ಮೆರವಣೆಗೆ ಮೂಲಕ ಉಜಿರೆ ಸರ್ಕಲ್ ಗೆ ಅಗಮಿಸಿ ಅಲ್ಲಿಂದ ಎಲ್ಲರೂ ತೆರೆದ ವಾಹನದಲ್ಲಿ ಹಿಂದೆ ನಡೆದುಕೊಂಡು ಹೋಗಿ ಉಜಿರೆ S.D.M ಕಾಲೇಜ್ ಒಳಾಂಗಣದಲ್ಲಿ ಮಧ್ಯಾಹ್ನ ಸುಮಾರು 2 ಗಂಟೆಗೆ ಮೃತದೇಹ ಇಟ್ಟು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ನಂತರ ಸಂಜೆ ನೀರಚಿಲುಮೆ ಮನೆಯಲ್ಲಿ ಅಂತ್ಯಸಂಸ್ಕಾರ ಕಾರ್ಯ ನೇರವೆರಲಿದೆ.
ಡಾ.ಬಿ.ಯಶೋವರ್ಮವರು ಸಿಂಗಪೂರ್ ದೇಶಕ್ಕೆ ಕಳೆದ ಒಂದುವರೇ ತಿಂಗಳ ಹಿಂದೆ ಚಿಕಿತ್ಸೆಗಾಗಿ ಹೋಗಿದ್ದರು ಆದ್ರೆ ಕಳೆದ 15 ದಿನದಿಂದ ಚಿಕಿತ್ಸೆ ಆರಂಭವಾಗಿತ್ತು ಭಾನುವಾರ ಅನಾರೋಗ್ಯ ಜಾಸ್ತಿಯಾಗಿ ಹದಗೆಟ್ಟಿದ್ದು ಸಿಂಗಪೂರ್ ದೇಶದ 1 ಗಂಟೆಗೆ ಅಂದರೆ ಭಾರತ ದೇಶದ ಸೋಮವಾರ ಬೆಳಗ್ಗಿನ ಜಾವ 4:30 ರ ಸುಮಾರಿಗೆ ನಿಧನಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಚಿಕಿತ್ಸೆ ವೇಳೆ ಡಾ.ಬಿ.ಯಶೋವರ್ಮರ ಜೊತೆಯಲ್ಲಿದ್ದರು.
ಸೋಮವಾರ S.D.M ಶಿಕ್ಷಣ ಸಂಸ್ಥೆಗೆ ರಜೆ ನೀಡಲಾಗಿತ್ತು ನಾಳೆ ಮಂಗಳವಾರ ಕೂಡ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನೂ ನಾಳೆ 12 ಗಂಟೆಯಿಂದ ಉಜಿರೆ ಅಂಗಡಿ ಮುಂಗಟ್ಟು ಬಂದ್ ಮಾಡಲಾಗುವುದು ಎಂದು ವರ್ತಕರ ಸಂಘದಿಂದ ತಿರ್ಮಾನಿಸಲಾಗಿರುವ ಮಾಹಿತಿ ದೊರೆತಿದೆ.
ಇಂದು ಸಂಜೆ 4 ಗಂಟೆಗೆ ಉಜಿರೆ ಎಸ್.ಡಿ.ಎಮ್ ಕಾಲೇಜಿನಲ್ಲಿ
ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಧರ್ಮಸ್ಥಳ ಶಿಕ್ಷಣ ಸಂಸ್ಥೆ ಟ್ರಸ್ಟ್ ಜೊತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಉದ್ಯಮಿಗಳ ಸೇರಿ ನಡೆಸಿದ ಅಂತಿಮದರ್ಶನದ ವ್ಯವಸ್ಥೆ ಬಗ್ಗೆ ಸಭೆ ನಡೆಸಲಾಯಿತು.
S.D.M ಶಿಕ್ಷಣ ಸಂಸ್ಥೆ, S.K.R.D.P ಉಜಿರೆ ವರ್ತಕರ ಸಂಘ, ರಿಕ್ಷಾ ಚಾಲಕರ ಸಂಘ , ಪೊಲೀಸ್ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳು ಮೆರವಣಿಗೆಗೆ ಹಾಗೂ ಅಂತಿಮ ದರ್ಶನಕ್ಕೆ ಸಹಕಾರ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…