
ನಾಳೆ ವಯೋ ನಿವೃತ್ತಿ ಹೊಂದಲಿರುವ ಮೇಗರವಳ್ಳಿ ಬಾಲಕಿಯರ ವಸತಿ ನಿಲಯದ, ನಿಲಯಪಾಲಕರಾದ ಜಯಪ್ಪ ಅವರಿಗೆ,ಮೇಗರವಳ್ಳಿಯ ಲಲಿತಮ್ಮ ಚಾರಿಟಬಲ್ ಟ್ರಸ್ಟ್, ಮತ್ತು ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ವತಿಯಿಂದ ಸನ್ಮಾನ ಮಾಡಿ, ನಿವೃತ್ತಿ ಜೀವನಕ್ಕೆ ಶುಭ ಹಾರೈಸಿಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾದ ಪಟೇಲ್ ವೆಂಕಟೇಶ್ ಹೆಗಡೆ,ಮಾತಾನಾಡಿ, ಜಯಪ್ಪ ಅವರ ಸೇವಾ ನಿಷ್ಠೆ, ಸೇವಾ ಬದ್ದತೆ ಮತ್ತು ಜವಾಬ್ದಾರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು,
ಈ ಸಮಯದಲ್ಲಿ ಅಡುಗೆ ಸಿಬ್ಬಂದಿಯವರು,ಹಿತೈಷಿಗಳು ಮಕ್ಕಳು, ಪೋಷಕರು, ಸದರಿಯವರಿಗೆ ಸನ್ಮಾನಿಸಿದರು, ಮಕ್ಕಳು ಅನಿಸಿಕೆ, ಅಭಿಪ್ರಾಯ ತಿಳಿಸಿದರು,
ಈ ಸಮಯದಲ್ಲಿ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ, ಶಿಕ್ಷಕರಾದ ವೀರೇಶ್ ಟಿ, ಶೌಕತ್ ಆಲಿ, ಲಲಿತಮ್ಮ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕರಾದ ವಿಜೇತ್ ಶೆಟ್ಟಿ ಮೇಗರವಳ್ಳಿ, ಮಂಜುನಾಥ್ ಕಾಮತ್ ಪ್ರದೀಪ್, ನಂಜೇಶ್ ಹಾಜರಿದ್ದರು..
ರಘುರಾಜ್ ಹೆಚ್.ಕೆ…9449553305….