
ಸಿದ್ದಾಪುರ : ಕಳೆದ ನಾಲ್ಕು ತಿಂಗಳುಗಳಿಂದ ಮನೆಬಿಟ್ಟು ಹೋಗಿದ್ದ ಮಗನಿಗಾಗಿ ಹಂಬಲಿಸುತ್ತಿದ್ದ ವ್ರದ್ಧ ತಂದೆಗೆ ಮಗನನ್ನು ತಲುಪಿಸಿದ ಸಂತೋಷದ ಕ್ಷಣಕ್ಕೆ ಸಿದ್ದಾಪುರ ಪೋಲಿಸ್ ಠಾಣೆ ಸಾಕ್ಷಿಯಾಯಿತು.
ಜುಲೈ 5 ರಂದು ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯ ಪೋಲಿಸರು ಆಶ್ರಮಕ್ಕೆ ಕಳುಹಿಸಿ ಕೊಟ್ಟಿದ್ದ ಗಣೇಶ್ ಎನ್ನುವ ಯುವಕನನ್ನು ಅವರ ಕುಟುಂಬವನ್ನು ಹುಡುಕಿ ಸಿದ್ದಾಪುರ ಪೋಲಿಸರ ಸಮಕ್ಷಮದಲ್ಲಿ ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ಕಳುಹಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅದರಂತೆ ಗ್ರಾಮದ ರಸ್ತೆಯ ಮೇಲೆ ಕೆಲವು ತಿಗಳುಗಳಿಂದ ಅನಾಥಸ್ಥಿತಿಯಲ್ಲಿದ್ದ ಗಣೇಶ ಎನ್ನುವ ಅಸಹಾಯಕ ಯುವಕನೊಬ್ಬನನ್ನು ಸ್ಥಳಿಯ ಸಾರ್ವಜನಿಕರು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತಂದು ಪೋಲಿಸರ ಮೂಲಕ ನಾಗರಾಜ ನಾಯ್ಕರು ನಡೆಸುತ್ತಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ ಸೇರಿಸಿಕೊಳ್ಳುವಂತೆ ವಿನಂತಿಸಿಕೊಂಡಿದ್ದರು. ನಾಗರಾಜ ನಾಯ್ಕರು ಆಶ್ರಮದಲ್ಲಿ ಇಟ್ಟುಕೊಳ್ಳಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ನಾಗರಾಜ ನಾಯ್ಕರ ಜೊತೆ ಈ ಯುವಕನನ್ನು ಜುಲೈ 5ರಂದು ಕಳುಹಿಸಿಕೊಟ್ಟಿದ್ದರು . ಆಶ್ರಮದಲ್ಲಿ ಈತನಿಗೆ ಆಶ್ರಯ ನೀಡಿಲಾಗಿತ್ತು.
ಈತನು ತನ್ನ ವಿಳಾಸವನ್ನು ತಪ್ಪು ತಪ್ಪಾಗಿ ಹೇಳುತ್ತಿದ್ದದ್ದರಿಂದ ಆತನ ಕುಟುಂಬವನ್ನು ಹುಡುಕಲು ವಿಳಂಬವಾಯಿತು. ನಂತರ ಅವರಿವರಲ್ಲಿ ವಿಚಾರಿಸಲಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನವನು ಎಂದು ತಿಳಿದು ಬಂತು. ಸಿದ್ದಾಪುರಕ್ಕೆ ವಿದ್ಯುತ್ ಒಲೆಯನ್ನು ಮಾರಲು ಬಂದಿದ್ದ ವ್ಯಕ್ತಿಯ ಮೂಲಕ ಗಣೇಶನ ಕುಟುಂಬವನ್ನು ನಾಗರಾಜ ನಾಯ್ಕರು ಸಂಪರ್ಕಿಸಿದ್ದರು.
ದಿನಾಂಕ 13 – 8 – 2022 ರ ಸಂಜೆ ಸಿದ್ದಾಪುರಕ್ಕೆ ಆಗಮಿಸಿದ್ದ ಗಣೇಶನ ತಂದೆ ತಿಮ್ಮಪ್ಪ ಹಾಗೂ ತಮ್ಮ ಆಂಜನೇಯನ ಜೊತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ, ಪೋಲಿಸರ ಸಮಕ್ಷಮದಲ್ಲಿ ಗಣೇಶನನ್ನು ಆತನ ಊರಿಗೆ ಕಳುಹಿಸಿಕೊಡಲಾಯಿತು. ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕರ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ಕಳೆದ ನಾಲ್ಕು ತಿಂಗಳಿನಿಂದ ಮಗನಿಗಾಗಿ ಹುಡುಕುತ್ತಿದ್ದೆವು. ಮಗ ಸಿಗದೆ ಕಂಗಾಲಾಗಿದ್ದೆವು. ಮಗ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ. ಇಷ್ಟು ದಿನ ತನ್ನ ಮಗನನ್ನು ಆರೈಕೆ ಮಾಡಿ ತಮ್ಮ ಕುಟುಂಬಕ್ಕೆ ತಲುಪಿಸಿದ್ದಕ್ಕೆ ತಿಮ್ಮಪ್ಪ ರವರು ನಾಗರಾಜ ನಾಯ್ಕರಿಗೆ ಧನ್ಯವಾದಗಳನ್ನು ತಿಳಿಸಿದರು.
ಗಣೇಶನ ರಕ್ಷಣೆಯಲ್ಲಿ ಸಹಕರಿಸಿದ ಸಾಗರ ತಾಲೂಕಿನ ಅದರಂತೆ ಗ್ರಾಮಸ್ಥರು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸಿದ್ದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ಸೇವಾ ಸಮಿತಿಯ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾದ ಮಮತಾ ನಾಯ್ಕರವರಿಗೆ ನಾಗರಾಜ ನಾಯ್ಕರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ರಘುರಾಜ್ ಹೆಚ್. ಕೆ…9449553305…