Wednesday, May 14, 2025
Google search engine
Homeರಾಜ್ಯ"ಹಿಜಾಬ್ ಗಿಂತ ಕೀತಬ್ ಮುಖ್ಯ" …"ಶಾಲ್ ಗಿಂತ ಶಾಲೆ ಮುಖ್ಯ"..!!! ತೀರ್ಪು ಏನೇ ಬರಲಿ...

“ಹಿಜಾಬ್ ಗಿಂತ ಕೀತಬ್ ಮುಖ್ಯ” …”ಶಾಲ್ ಗಿಂತ ಶಾಲೆ ಮುಖ್ಯ”..!!! ತೀರ್ಪು ಏನೇ ಬರಲಿ ಧ್ಯೇಯ ಒಂದೇ ಆಗಿರಲಿ..!!!

ಹಿಜಾಬ್ ಗಿಂತ ಕೀತಬ್ ಮುಖ್ಯ …ಶಾಲ್ ಗಿಂತ ಶಾಲೆ ಮುಖ್ಯ..!!!

ರಾಜ್ಯಾದ್ಯಂತ ಹಿಜಾಬ್ ಮತ್ತು ಕೇಸರಿ ಶಾಲು ಎಂಬ ಕಾರಣಕ್ಕಾಗಿ ಕೆಲವು ದಿನಗಳ ಹಿಂದೆ ದೇಶವೇ ನಮ್ಮ ರಾಜ್ಯದ ಕಡೆಗೆ ಕುತೂಹಲದಿಂದ ನೋಡುವಂತಾಗಿತ್ತು..
ಇದು ಯಾವ ಪುರುಷಾರ್ಥ ಸಾಧನೆಗಾಗಿ..? ಅನ್ನಿಸದೇ ಇರದು ಇದರಿಂದ ಓದುವ ಮಕ್ಕಳು ಕಲಿತಿದ್ದು , ಕಳೆದುಕೊಂಡಿದ್ದು , ಗಳಿಸಿದ್ದು ಏನು..? ಎಂದು ಯೋಚಿಸುವ ಸಂಧರ್ಭವಂತೂ ಸೃಷ್ಠಿಯಾಗಿದೆ ..
ಇಲ್ಲಿ ವಿದ್ಯಾರ್ಥಿಗಳಿಗೆ ಬಟ್ಟೆಗಳಿಗಿಂತ ವಿಧ್ಯೆಯಿಂದ ಬದುಕು ಕಟ್ಟಿಕೊಳ್ಳುವುದು ಮುಖ್ಯವಾಗಬೇಕಾಗಿದೆ.. ಇದು ವಿದ್ಯಾಭ್ಯಾಸದ ಮೇಲೆ ವಿವೇಕದ ಮೇಲೆ ಎಲ್ಲಾ ವಿದ್ಯಾನಿಲಯಗಳ ಮೇಲೆ ಅಧ್ಯಾಪನದ ಮೇಲೆ ಅಧ್ಯಾಪಕ ವೃತ್ತಿಯ ಮೇಲೆ ಧರ್ಮಗಳ ಮೇಲೆ ನಡೀತಿರೋ ದಾಳಿ ಅನ್ನಿಸದೆ ಇರದು..!

ಇನ್ನು ವಿದ್ಯಾರ್ಥಿಗಳೇ ಅವರುಗಳ ದಾಳವಾಗಿರೋದು ಶೋಚನೀಯ ಅವರೇ ಸೇನಾಪಡೆಗಳು , ಬಲಿಪಶುಗಳು ಎರಡೂ ಆಗಿರುವುದು ನೋವಿನ ಸಂಗತಿಯಾಗಿದೆ..!
ಯಾವುದೇ ಧರ್ಮದವರಾಗಲಿ ವಿದ್ಯೆ ಇಲ್ಲವಾದರೆ ಜೀವನ ಬರಡಾಗುತ್ತದೆ ವಿದ್ಯೆ ಕಲಿಯುವಾಗ ಯಾವುದೇ ಅಡಚಣೆಗಳು ಆಗದಂತೆ ವಾತಾವರಣವನ್ನು ಎಲ್ಲಾ ಧರ್ಮದವರು ಸೇರಿ ನಿರ್ಮಿಸಬೇಕಾಗಿದೆ.. ಅಲ್ಲದೆ ನ್ಯಾಯಾಲಯದಿಂದ ಯಾವುದೇ ಆದೇಶ ಬಂದರು ಎಲ್ಲರೂ ಅದನ್ನು ಸ್ವೀಕರಿಸಲೇ ಬೇಕಾದ ಅನಿವಾರ್ಯತೆಯಂತೂ ಉಂಟಾಗಿದೆ..
ಶಾಂತಿಗಿಂತ ಈ ಪ್ರಪಂಚದಲ್ಲಿ ಯಾವುದೂ ದೊಡ್ಡದಲ್ಲ ವಿವಿಧತೆಯಲ್ಲಿ ಏಕತೆಯನ್ನು ಕಾಣಲೇ ಬೇಕಾಗಿರುವುದು ನಮ್ಮ ಸೌಹಾರ್ದತೆ ಕೂಡ…
ಹಿಜಾಬ್ ಅನ್ನುವ ಸಮಸ್ಯೆ ರಾಜಕೀಯ ವಾಗದಂತೆ ಬಗೆಹರಿಸಿ ಕೊಳ್ಳಬೇಕಾಗಿದೆ ..
ಹಿಜಾಬ್ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ
ಪೋಷಕರು ಶಿಕ್ಷಕರು ಹಾಗೂ ಮಕ್ಕಳು ಶಿಕ್ಷಣ ಸಂಸ್ಥೆಗಳು ಅಲ್ಲಿನ ಸಿಬ್ಬಂದಿಗಳು ಅರ್ಥಮಾಡಿಕೊಳ್ಳ ಬೇಕಾಗಿದೆ…
ಹಿಜಾಬ್ ಎನ್ನುವ ವಸ್ತ್ರಗಳು ಕೋಮು ಸಾಮರಸ್ಯವನ್ನು ಕದಡದೆ ಶಿಕ್ಷಣವೇ ಮುಖ್ಯವಾಗಿದ್ದು ಎಂದು ಅರಿತುಕೊಳ್ಳಬೇಕಾಗಿದೆ..
ಧರ್ಮದ ಹೆಸರಿನಲ್ಲಿ ವಿದ್ಯೆಯನ್ನು ಹಾಳುಮಾಡಿಕೊಳ್ಳುವುದು ಸರಿಯಲ್ಲ.
ಧರ್ಮವನ್ನು ಶಿಕ್ಷಣದಿಂದ ಹೊರಗೆ ಇಡಬೇಕು
ಸರ್ವಧರ್ಮ ಸಾಮರಸ್ಯವನ್ನು ಸ್ಥಾಪಿಸುವುದು ಎಲ್ಲ ಧರ್ಮದವರ ಆದ್ಯ ಕರ್ತವ್ಯ ವಾಗಬೇಕಾಗಿದೆ..
ಈಗಾಗಲೇ ಕೋವಿಡ್ ನಿಂದ ಬಹುತೇಕ ಕಂಗೆಟ್ಟಿರುವ ಶೈಕ್ಷಣಿಕ ವ್ಯವಸ್ಥೆ ಮತ್ತೊಮ್ಮೆ ಹಿಜಾಬ್ ವಿವಾದದಿಂದ ಹಾಳಾಗುವುದು ಸರಿಯಲ್ಲ..
ಯಾವುದೇ ಧರ್ಮದಲ್ಲೂ ಯಾವುದಕ್ಕೂ ಬಲವಂತ ಎಂಬುದು ಇರುವುದಿಲ್ಲ ಬದಲಾಗಿ ಮಕ್ಕಳಿಗೆ ಒಳ್ಳೆಯ ದಾರಿಯನ್ನೇ ತೋರಿಸುತ್ತದೆ..
ಡಾ.ಬಿ. ಆರ್. ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದಲ್ಲಿ ಎಲ್ಲಾ ವಿಚಾರಗಳಿಗೂ ಒಂದು ಸೂಕ್ತ ಪರಿಹಾರಗಳಿವೆ..
ಭಾರತ ದೇಶವು ಸರ್ವಧರ್ಮಗಳ ಸಮನ್ವಯ ದೇಶ ಇಂಥ ದೇಶದಲ್ಲಿ ಹುಟ್ಟಿರುವುದೇ ಪುಣ್ಯ ಹಾಗಿರುವಾಗ ಜಾತಿ ಕಲಹ ಧರ್ಮದ ಕಲಹಗಳು ಉಂಟಾಗಬಾರದು..
ಸಂವಿಧಾನದ ಮೂಲಭೂತ ಹಕ್ಕು ಶಿಕ್ಷಣಕ್ಕೆ ಇರುವುದರಿಂದ ಯಾವುದೇ ರೀತಿಯ ತೊಂದರೆ ಆಗಬಾರದು..
ಒಂದೇ ಶಾಲೆ , ಕಾಲೇಜಿನಲ್ಲಿ ಕೂತು ಪಾಠ ಕೇಳುವ ವಿದ್ಯಾರ್ಥಿಗಳು ಒಂದೇ ಎನ್ನುವ ಭಾವನೆಗಳು ಇರಬೇಕು..
ಹಿಜಾಬ್ ನಿಂದ ವಿದ್ಯಾರ್ಥಿಗಳು ಮುಖಕ್ಕೆ ಮುಖ ಕೊಟ್ಟು ಮಾತನಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ವಾಗುವುದು ಸಮಂಜಸವಲ್ಲ..
ಆದ್ದರಿಂದ ನಮ್ಮ- ನಮ್ಮಗಳ ಧಾರ್ಮಿಕ ನಂಬಿಕೆಗಳನ್ನು ಮನೆಯಲ್ಲಿಟ್ಟು ಕಾಲೇಜಿಗೆ , ಶಾಲೆಗೆ ಬರುವಾಗ ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಬಂದರೆ ಅಲ್ಲಿ ಯಾವುದೇ ಧರ್ಮದ ಭೇದವು ಇಲ್ಲದೆ ಸಮಾನತೆ , ಶಾಂತಿ ಖುಷಿ ಇರುತ್ತದೆ..

ಪ್ರೀತಿಯ ವಿದ್ಯಾರ್ಥಿಗಳೇ ನಿಮ್ಮ ತಲೆಯಲ್ಲಿ ಒಂದಿಷ್ಟು ಗೊಂದಲಗಳನ್ನು ಯಾರೇ ಸೃಷ್ಟಿಸಿರಲಿ ಇಲ್ಲಿ ನಿಮ್ಮಗಳ ಭವಿಷ್ಯದ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಗಲಾಟೆಗಳಿಂದ ಬಡ ಸಾಮಾನ್ಯ ದರ್ಜೆಯ ಮಕ್ಕಳುಗಳನ್ನು ಬಲಿಪಶುಗಳಾಗಿಸುತ್ತಿದ್ದಾರೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು..
ಯಾವುದೇ ರಾಜಕಾರಣಿಗಳ ಮಕ್ಕಳುಗಳು ಈ ಗಲಭೆಯಲ್ಲಿ ಇರುವುದಿಲ್ಲ.. ರಾಜಕೀಯ ಬೇಳೆ ಬೇಯುತ್ತದೆ , ಮಾಧ್ಯಮಗಳು ಅಬ್ಬರಿಸುತ್ತವೇ ಅವರ್ಯಾರು ನಿಮ್ಮ ಬಗ್ಗೆ ಕಾಳಜಿ ಇಲ್ಲದವರು..
ಹಿಜಾಬ್- ಕೇಸರಿ ಶಾಲುಗಳು ನಿಮ್ಮ ನಿಮ್ಮ ಧರ್ಮಗಳ ಸಂಕೇತಗಳು ಮಾತ್ರ ಆಗಿರಬೇಕು ಈ
ಬಟ್ಟೆಗಳೇ ನಿಮ್ಮನ್ನು ಒಬ್ಬರಿಂದ ಇನ್ನೊಬ್ಬರನ್ನು ದೂರಮಾಡುವ ಹಗ್ಗ ವಾಗಬಾರದು..
ಈ ಬಟ್ಟೆಗಳು ಯಾವುದು ನಿಮಗೆ ಜೀವನವನ್ನು ಕಟ್ಟಿಕೊಡುವುದಿಲ್ಲ..
ವಿದ್ಯೆ ನಿಮ್ಮಗಳ ಜ್ಞಾನ ಹಾಗೂ ರೊಟ್ಟಿಯ ಚೂರುಗಳು ಆಗಬೇಕು..
ವಿದ್ಯಾರ್ಥಿಗಳೇ ನಿಮ್ಮ ಹೆತ್ತ ತಂದೆ ತಾಯಿಯರ ಬಗ್ಗೆ ಒಂದಷ್ಟು ಯೋಚಿಸಿ ಬಟ್ಟೆಗಳಿಗಾಗಿ ನಿಮ್ಮಗಳ ಭವಿಷ್ಯಕ್ಕೆ ನಿಮ್ಮದೇ ಆದ ಗೋರಿಗಳನ್ನು ತೋಡಿಕೊಂಡು ಪೆಟ್ಟಿಗೇ ಇಟ್ಟು ಮೊಳೆಹೊಡೆದು ಕೊಳ್ಳಬೇಡಿ..
ನಿಮ್ಮ ಆಯ್ಕೆ ಉದ್ಯೋಗ , ಸರ್ಕಾರಿ ನೌಕರಿ , ವಿದೇಶಕ್ಕೆ ಹೋಗುವ ಹಂಬಲಗಳು ಗುರಿಗಳು ಇರಲಿ..
ಓದುವ ಸಮಯದಲ್ಲಿ ಒಂದು ಕಪ್ಪುಚುಕ್ಕಿ ಬಿದ್ದರು ಪೂರ ಜೀವನವೇ ಹಾಳಾಗುವುದು ಅದರೊಂದಿಗೆ ಭವಿಷ್ಯದ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ ಆಗ ಯಾವ ರಾಜಕೀಯ ವ್ಯಕ್ತಿಗಳು ಮುಖಂಡರುಗಳು ನಿಮ್ಮ ಸಹಾಯಕ್ಕೆ ಬರುವುದಿಲ್ಲ..
ಕೋರ್ಟಿನ ತೀರ್ಪು ಏನೇ ಆದ್ರೂ ಬರಲಿ ಅದನ್ನು ಒಪ್ಪಿಕೊಂಡು ಈ ವಿವಾದಕ್ಕೆ ಶಾಶ್ವತವಾದ ಪರಿಹಾರವನ್ನು ಕೊಟ್ಟುಬಿಡಿ.. ಒಮ್ಮೆ ದ್ವೇಷ ಬೆಳೆದ ಮನಸ್ಸುಗಳು ಮತ್ತೆ ಒಂದಾಗುವುದು ಕಷ್ಟ ಇಲ್ಲಿ ಯಾರು ಗೆದ್ದರು ಗೆದ್ದ ಗೆಲುವು ಬಹಳಕಾಲ ಉಳಿಯುವುದಿಲ್ಲ..
ಹಿಜಾಬ್ ಗಿಂತ ಕಿತಾಬ್ ಮುಖ್ಯವೆಂದು .. ಶಾಲು ಬೇಡ ಶಾಲೆ ಬೇಕು ಎನ್ನುವ ಧ್ಯೇಯ ನಿಮ್ಮದಾಗಿರಲಿ ಸದಾ…

ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Latest news
ಪೊಲೀಸ್ ಸಬ್ ಇನ್ಸ್ಪೆಕ್ಟರ್ ತರಬೇತಿಗಾಗಿ ಅರ್ಜಿ ಆಹ್ವಾನ..! ತೀರ್ಥಹಳ್ಳಿ: ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಕುಮಾರಿ ದೀಕ್ಷಾಗೆ ಮಾಮ್ಕೋಸ್ ವತಿಯಿಂದ ಪ್ರೋ... ಗಾಲಿ ಜನಾರ್ದನ ರೆಡ್ಡಿ ಕ್ಷೇತ್ರ‌ ಗಂಗಾವತಿ ಗೆ ಬೈ ಎಲೆಕ್ಷನ್..! ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ..! Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?! ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..!