ತೀರ್ಥಹಳ್ಳಿ ತಹಸೀಲ್ದಾರ್ ಮತ್ತು ದಂಡಾಧಿಕಾರಿಗಳ ಉಪಸ್ಥಿತಿಯಲ್ಲಿ ಶಿವಮೊಗ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮ ಗಣಿ ಪ್ರದೇಶಕ್ಕೆ ಹೊಡೆದ ಟ್ರಂಚ್ ಮುಚ್ಚಿ ಲಕ್ಷಾಂತರ ರೂಪಾಯಿಗಳ ಅಕ್ರಮ ಕಲ್ಲು ಸಾಗಿಸಿದ ರಿವರ್ಸ್ ಸುಬ್ರಹ್ಮಣ್ಯ ..!!!!
ತೀರ್ಥಹಳ್ಳಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡುವ ಗಣಿ ದಣಿಗಳ ಕಾನೂನು ಉಲ್ಲಂಘನೆ ಕಾರ್ಮಿಕರ ಹೆಸರಿನಲ್ಲಿ ಅನಾಚಾರಗಳು ದುಂಡಾವರ್ತನೆ ಅಧಿಕಾರಿಗಳಿಗೆ ಬೆದರಿಸುವ ವರ್ತನೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿರುವುದೇ .ಇಂಥವರು ರಕ್ಷಿಸಲು ಇಲ್ಲಿ ಜನಪ್ರತಿನಿಧಿಗಳು ಮತ್ತು ರಾಜಕೀಯ ಧುರೀಣರು ತುದಿಗಾಲಲ್ಲಿ ನಿಂತು ಕೊಂಡಿರುತ್ತಾರೆ .
ನೋಡಿ ಮೊನ್ನೆ ದಿನ ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಬುಕ್ಲಾ ಪುರ ಗ್ರಾಮದ ಸರ್ವೆ ನಂಬರ್ 64ರಲ್ಲಿ ರಿವರ್ಸ್ ಸುಬ್ರಹ್ಮಣ್ಯ ಎಂಬ ವ್ಯಕ್ತಿ ಸುಮಾರು 3ಎಕರೆ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿಗಳ ಕಲ್ಲನ್ನು ಅಕ್ರಮ ಎತ್ತುವಳಿ ಮಾಡುತ್ತಿದ್ದಾರೆ .
.ಈತನು ಪೊಲೀಸರ ಹೆಸರಿನಲ್ಲಿ ಮತ್ತು ಅಧಿಕಾರಿಗಳ ಹೆಸರಿನಲ್ಲಿ ಎತ್ತುವಳಿ
ಮಾಡುತ್ತಾನೆ .…
ನಿನ್ನೆ ದಿನ ಬೆಳಿಗ್ಗೆ 5ಗಂಟೆಗೆ ತಾಲ್ಲೂಕು ದಂಡಾಧಿಕಾರಿಗಳ ಉಪಸ್ಥಿತಿಯಲ್ಲಿ ಗಣಿ ಅಧಿಕಾರಿಗಳು ಅಕ್ರಮ ಬಂಡೆಗೆಲಾರಿಗಳು ಹೋಗದಂತೆ ತೆಗೆದ ಟ್ರಂಚ್ ಮುಚ್ಚಿಸಿದ್ದಾನೆ. .ಬುಕ್ಲಾಪುರ ಸರ್ವೆ ನಂ 64 ಮತ್ತು ಮೇಲಿನ ಕುರುವಳ್ಳಿ ಗ್ರಾಮದ ಸರ್ವೆ ನಂಬರ್ 38 ಅಕ್ರಮವಾಗಿ ತೆಗೆದು ರಾಶಿ ಹಾಕಿದ ಲಕ್ಷಾಂತರರೂಪಾಯಿಗಳ ಕಲ್ಲುಗಳನ್ನು ಹತ್ತಾರು ಲಾರಿಗಳಲ್ಲಿ ಸಾಗಾಟ ಮಾಡಿರುತ್ತಾನೆ .ಈತನ ಆಜುಬಾಜು ಅಕ್ರಮ ಕಲ್ಲು ಮಾಡುವವರು ಸೇರಿಕೊಂಡಿದ್ದು .ಇದೊಂದು ಕ್ರಿಮಿನಲ್ ಪ್ರಕರಣವಾಗಿದ್ದು. ತೀರ್ಥಹಳ್ಳಿ ತಾಲ್ಲೂಕು ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಹಿರಿಯ ಭೂ ವಿಜ್ಞಾನಿ ಯಾವ ಕ್ರಮ ಜರುಗಿಸುತ್ತಾರೆ ಕಾದು ನೋಡುವ . ಮೇಲಿನಕುರುವಳ್ಳಿ ಗ್ರಾಮದ ಸರ್ವೇ ನಂಬರ್ 75 ರಲ್ಲಿ ಅಕ್ರಮವಾಗಿ ತೇಗದ ದಾಸ್ತಾನಿಟ್ಟಿರುವ ಲಕ್ಷಾಂತರ ರೂಪಾಯಿಗಳ ಕಲ್ಲು ಇಂದು ರಾತ್ರಿ ಖಾಲಿಯಾಗುವ ಸಾಧ್ಯತೆ ಇದೆ …. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ತಮ್ಮ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಮೇಲಿನ ಕುರುವಳ್ಳಿ ಬಂಡೆಯ ಸರ್ವೇ ನಂಬರ್ 75 ರಲ್ಲಿ ಸ್ಪೋಟಕಗಳು ಬಳಕೆಯಾಗದಂತೆ ಕಲ್ಲು ಸಾಗಾಣಿಕೆಯಾಗದಂತೆ ಹಾಗೂ ಈಗಾಗಲೇ ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡಿರುವ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು… ಎನ್ನುವುದು ನೊಂದ ಸ್ಥಳೀಯರ ಆಗ್ರಹ ಹಾಗೂ ಮನವಿ…
ರಘುರಾಜ್ ಹೆಚ್.ಕೆ…9449553305…