
ಸೊರಬ : ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಚಂದ್ರಗುತ್ತಿ ಗ್ರಾಮದಲ್ಲಿ ನಿನ್ನೆಯಿಂದ ಅಂದರೆ ದಿನಾಂಕ 25 /2/23ರಿಂದ ಪ್ರಾರಂಭವಾಗಿರುವ ಜಾತ್ರೆ 2/3/ 2023ರ ವರೆಗೆ 5 ದಿನಗಳ ಕಾಲ ಚಾಲ್ತಿಯಲ್ಲಿರುತ್ತದೆ. ಆದರೆ ಶ್ರೀ ರೇಣುಕಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಹೊಳೆಯಲ್ಲಿ ಧಾರ್ಮಿಕ ಸ್ನಾನ ಮಾಡುವುದು, ಚೌಲ ಮಾಡಿಸುವುದು, ಕಿವಿ ಚುಚ್ಚುವುದು, ಬೆತ್ತಲೆ ಸೇವೆ ಮಾಡುವುದನ್ನು ಜಿಲ್ಲಾಧಿಕಾರಿಗಳಾದ ಡಾ. ಆರ್ ಸೆಲ್ವಮಣಿ ಅವರು ನಿಷೇಧಿಸಿ ಆದೇಶ ನೀಡಿದ್ದಾರೆ. ಆದರೆ ಬೇರೆ ಧಾರ್ಮಿಕ ವಿಧಿ ವಿಧಾನಗಳಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲವೆಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ರಘುರಾಜ್ ಹೆಚ್.ಕೆ..9449553305…