
ಕೆಲವೇ ದಿನಗಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಂದಿದ್ದು. ಒಂದಷ್ಟು ಜನ ವಿದ್ಯಾರ್ಥಿಗಳು ಉತ್ತಮ ಅಂಕ ತೆಗೆದುಕೊಂಡು ಹೆಮ್ಮೆ ಪಡುತ್ತಿದ್ದರೆ ಒಂದಷ್ಟು ಜನ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದುಕೊಂಡು ಬೇಸರ ಪಟ್ಟುಕೊಳ್ಳುತ್ತಿದ್ದಾರೆ.
ಅದೇ ತರಹ ಹೆಚ್ಚು ಅಂಕ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಉತ್ತಮ ಕಾಲೇಜಿನಲ್ಲಿ ಸೀಟು ಲಭ್ಯವಾಗಿದ್ದು. ಕಡಿಮೆ ಅಂಕ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಕೆಲವು ಕಾಲೇಜಿನಲ್ಲಿ ಸೀಟು ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಕಡಿಮೆ ಅಂಕ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಓದುವ ಆಸೆ ಇದೆ ಆದರೆ ಉತ್ತಮ ಕಾಲೇಜಿನಲ್ಲಿ ಸೀಟುಗಳು ಸಿಗುತ್ತಿಲ್ಲ ಎನ್ನುವ ಬೇಸರವಿದೆ ಪೋಷಕರು ಕೂಡ ಇದರಿಂದಾಗಿ ಸಾಕಷ್ಟು ನೊಂದಿದ್ದಾರೆ. ಅಂತಹ ನೊಂದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಬಹು ಮುಖ್ಯವಾದ ಮಾಹಿತಿ ಒಂದನ್ನು ಹೇಳಲು ಇಚ್ಛಿಸುತ್ತೇನೆ.
ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಯಾರೂ ಕೂಡ ದಡ್ಡರು ಇರುವುದಿಲ್ಲ ಅವರು ಓದುವ ಸ್ಕೂಲ್, ಕಾಲೇಜ್ ಅಲ್ಲಿನ ಪರಿಸರ ಅಲ್ಲಿನ ಕಲಿಕೆಯ ರೀತಿ ವಾತಾವರಣ ಅನುಭವ ಇಲ್ಲದ ಉಪನ್ಯಾಸಕ ವೃಂದ ಅವರನ್ನು ದಡ್ಡರನ್ನಾಗಿ ಮಾಡುತ್ತದೆ ಫಲಿತಾಂಶ ಕೂಡ ಅದೇ ತರ ಹೊರಬರುತ್ತದೆ.
ಹಾಗಾಗಿ ಉತ್ತಮ ಸ್ಕೂಲ್ ಹಾಗೂ ಉತ್ತಮ ಕಾಲೇಜ್ ಸೇರಿಸುವ ಹೊಣೆ ಅವರ ಪೋಷಕರದ್ದಾಗಿರುತ್ತದೆ. ಆ ನಿಟ್ಟಿನಲ್ಲಿ ಉತ್ತಮ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂತಹ ಕಾಲೇಜುಗಳಲ್ಲಿ ಮಕ್ಕಳನ್ನು ಓದಿಸಬೇಕು ಆಗಾ ಮಾತ್ರ ಉತ್ತಮ ಫಲಿತಾಂಶ ಹೊರಬರುತ್ತದೆ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ .
ಈ ನಿಟ್ಟಿನಲ್ಲಿ ನೋಡಿದಾಗ ಪ್ರತಿಯೊಬ್ಬರಿಗೂ ಅವರ ಮಕ್ಕಳು ಉತ್ತಮ ಕಾಲೇಜಿನಲ್ಲಿ ಓದಬೇಕು ಒಳ್ಳೆ ಅಂಕಗಳನ್ನು ತೆಗೆದುಕೊಂಡು ಮುಂದೆ ಉದ್ಯೋಗಕ್ಕೆ ಹೋಗಬೇಕು ಉತ್ತಮ ಪ್ರಜೆಗಳಾಗಿ ಬಾಳಬೇಕು ಎನ್ನುವ ಆಸೆ ಇರುತ್ತದೆ. ಆದರೆ ಯಾವ ಕಾಲೇಜಿಗೆ ಸೇರಿಸುವುದು ತಮ್ಮ ಮಕ್ಕಳನ್ನು ಎನ್ನುವ ಗೊಂದಲದಲ್ಲಿ ಪೋಷಕರು ಇರುತ್ತಾರೆ ಅದೇ ತರ ವಿದ್ಯಾರ್ಥಿಗಳು ಕೂಡ ಸಾಕಷ್ಟು ಕನ್ಫ್ಯೂಷನ್ ನಲ್ಲಿ ಇರುತ್ತಾರೆ.
ಅಂತಹ ಗೊಂದಲದ ವಾತಾವರಣದಲ್ಲಿರುವ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇಲ್ಲೊಂದು ಬಹುಮುಖ್ಯವಾದ ಮಾಹಿತಿ ಇದೆ ಓದಿ,
ಮೊನ್ನೆ ಅಂದರೆ ಸೋಮವಾರ ಮಹಾನಗರ ಪಾಲಿಕೆಗೆ ಕೆಲಸದ ನಿಮಿತ್ತ ಹೋಗಿದ್ದಾಗ ಅಲ್ಲೇ ಪಕ್ಕದಲ್ಲಿರುವ ನಾನು ಹಿಂದೆ ಪಿಯುಸಿ ಓದಿದ್ದ ಬಸವೇಶ್ವರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ್ದೆ ಸರಿಸುಮಾರು ಎರಡು ದಶಕಗಳಿಗೂ ಹಿಂದೆ ಓದಿದ ಕಾಲೇಜಿಗೆ ಭೇಟಿ ನೀಡುವ ಸಂಭ್ರಮದಲ್ಲಿದ್ದ ನನಗೆ ಈಗ ಕಾಲೇಜ್ ಹೇಗಿದೆ, ಅಲ್ಲಿನ ವಾತಾವರಣ ಹೇಗಿದೆ, ಅಲ್ಲಿನ ಉಪನ್ಯಾಸಕ ವೃಂದ ಹೇಗಿದೆ, ಅಲ್ಲಿನ ಕಲಿಕೆ ರೀತಿ ಹೇಗಿದೆ, ಎಂದು ತಿಳಿದುಕೊಳ್ಳುವ ಕುತೂಹಲ ಪತ್ರಕರ್ತನಾಗಿ ಸಹಜವಾಗಿ ಇತ್ತು, ಆ ದಿಕ್ಕಿನಲ್ಲಿ ಮೊದಲು ಕಾಲೇಜಿನ ಪ್ರಿನ್ಸಿಪಾಲ್ ಮಾತನಾಡಿಸುವ ಮೊದಲು ಒಂದಷ್ಟು ಜನ ವಿದ್ಯಾರ್ಥಿಗಳನ್ನು ಮಾತನಾಡಿಸಿದೆ ಆಗ ಅವರು ಹೇಳಿದ ಮಾತು ಕೇಳಿ ನನಗೆ ಈ ಹಿಂದೆ ಕಾಲೇಜಿನಲ್ಲಿ ಓದಿರುವುದು ತುಂಬಾ ಸಂತೋಷವಾಯಿತು.
ಏಕೆಂದರೆ, ಅಲ್ಲಿ ಈಗ ಓದುತ್ತಿರುವ ವಿದ್ಯಾರ್ಥಿಗಳು, ಈಗಷ್ಟೇ ಪಿಯುಸಿ ಮುಗಿಸಿ ಹೊರಬಂದ ವಿದ್ಯಾರ್ಥಿಗಳು, ಈಗ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾಗಿ ಕಾಲೇಜಿಗೆ ಸೇರಲು ಬಂದಿರುವ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ, ಅವರುಗಳು ಹೇಳಿದ್ದು ಹೀಗೆ, ಸಾರ್ ನಾವು ಈ ಕಾಲೇಜಿಗೆ ಸೇರುವ ಮುಂಚೆ ಕೇವಲ 45 ಪರ್ಸೆಂಟ್ ಅಂಕಗಳನ್ನು ತೆಗೆದುಕೊಂಡಿದ್ದೆವು ಆದರೆ ಇಲ್ಲಿ ಸೇರಿದ ನಂತರ ಈಗ ನಮ್ಮ ಪರ್ಸೆಂಟೇಜ್ 85, 80, 82, 84 ಇತರ ಬಂದಿದೆ. ಇದಕ್ಕೆ ಕಾರಣ ಬಸವೇಶ್ವರ ಕಾಲೇಜಿನ ಕಲಿಕೆಯ ವಾತಾವರಣ ಇಲ್ಲಿನ ಉತ್ತಮ ಅನುಭವಿಯುಳ್ಳ ಉಪನ್ಯಾಸಕ ವೃಂದ ಉತ್ತಮವಾದ ಕಲಿಕೆ ವಾತಾವರಣ ಇಲ್ಲಿದೆ ಉತ್ತಮವಾಗಿ ನಮಗೆ ಕಲಿಸಿಕೊಡುತ್ತಾರೆ ಸರ್ ನಾವೆಲ್ಲ ಬಡ ಮತ್ತು ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳು ನಾವು ಇಂದು ಇಷ್ಟು ಅಂಕಗಳನ್ನು ತೆಗೆದುಕೊಂಡು ಹೊರ ಬರುತ್ತಿದ್ದೇವೆ ಎಂದರೆ ಈ ಕಾಲೇಜಿನಲ್ಲಿ ನಮಗೆ ನೀಡಿರುವ ಪ್ರೋತ್ಸಾಹವೇ ಕಾರಣ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ನಂತರ ಈಗ ಕಾಲೇಜಿಗೆ ಸೇರಲು ಬಯಸಿ ಬಂದಿರುವ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ, ಸರ್ ನಮ್ಮ ಪರ್ಸೆಂಟೇಜ್ ಕಡಿಮೆ ಇದೆ ಎಂದು ಯಾವ ಕಾಲೇಜಿನಲ್ಲೂ ಸೇರಿಸಿಕೊಳ್ಳುತ್ತಿಲ್ಲ ಸರ್ , ಕೆಲವು ಕಾಲೇಜುಗಳಲ್ಲಂತೂ ದುಬಾರಿ ಡೊನೇಷನ್ ಸಾರ್ ಅದನ್ನು ಕಟ್ಟಲು ನಮ್ಮ ತಂದೆ ತಾಯಿಗಳಿಗೆ ಆಗುವುದಿಲ್ಲ ಹಾಗಾಗಿ ಎಲ್ಲಾ ಕಡೆ ವಿಚಾರಿಸಿದಾಗ ಬಸವೇಶ್ವರ ಕಾಲೇಜಿನ ಬಗ್ಗೆ ಹೇಳಿದರು ಸರ್ ಇಲ್ಲಿ ಕಡಿಮೆ ಅಂಕ ತೆಗೆದುಕೊಂಡರು ಕಾಲೇಜಿಗೆ ಸೇರಿಸಿಕೊಳ್ಳುತ್ತಾರೆ ಡೊನೇಷನ್ ಕೂಡ ಹೆಚ್ಚಾಗಿಲ್ಲ ಚೆನ್ನಾಗಿ ಕಲಿಸಿಕೊಡುತ್ತಾರೆ ಎಂದು ಹಾಗಾಗಿ ಈ ಕಾಲೇಜಿಗೆ ಬಂದು ಸೇರುತ್ತಿದ್ದೇವೆ ಎಂದು ಹೇಳಿದರು.
ನಂತರ ಇವರ ಮಾತುಗಳನ್ನೆಲ್ಲ ಕೇಳಿ ಸಾಕಷ್ಟು ಖುಷಿಯಾಯಿತು ಸದ್ದಿಲ್ಲದೆ ಸುದ್ದಿಯಲ್ಲಿರುವ ಬಸವೇಶ್ವರ ಪದವಿಪೂರ್ವ ಕಾಲೇಜ್ ಯಾವುದೇ ಹೈಟೆಕ್ ಕಾಲೇಜ್ ಗಳಿಗೂ ಕಮ್ಮಿ ಇಲ್ಲದ ರೀತಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂಬುವುದು ಅರ್ಥವಾಯಿತು. ಹಾಗೂ ಡೊನೇಷನ್ ಹಾವಳಿ ಇಲ್ಲದೇ ಉತ್ತಮ ಉಪನ್ಯಾಸಕರಿಂದ ಕೂಡಿದ್ದು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ.
ನಂತರ ಕಾಲೇಜಿನ ಪ್ರಾಂಶುಪಾಲರಾದ ಕೆ,ಎಚ್ ರಾಜು ಅವರನ್ನು ಮಾತನಾಡಿಸಿದೆ, ಹಳೆ ವಿದ್ಯಾರ್ಥಿ ಎಂದು ತಿಳಿದು ಪ್ರೀತಿಯಿಂದ ಮಾತನಾಡಿಸಿದ ಪ್ರಾಂಶುಪಾಲರು ಕಾಲೇಜಿನ ಬಗ್ಗೆ ಸಂಪೂರ್ಣ ವಿವರ ನೀಡಿದರು ಹಾಗೂ ನಮ್ಮ ಕಾಲೇಜಿನ ಅಭಿವೃದ್ಧಿಗೆ ಆಡಳಿತ ಮಂಡಳಿಯ ಸಹಕಾರವನ್ನು ನೆನೆದರು ನಮ್ಮಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಉತ್ತಮ ಅನುಭವಿ ಉಪನ್ಯಾಸಕ ವೃಂದ ಹೊಂದಿದ್ದೇವೆ.ಹಾಗಾಗಿ ಉತ್ತಮ ರೀತಿಯಲ್ಲಿ ರಿಸಲ್ಟ್ ಬರುತ್ತಿದೆ ಕಳೆದ 4 ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ ಶೇ 100% ಕ್ಕೆ 100ರಷ್ಟು ಫಲಿತಾಂಶ ನಮ್ಮ ಕಾಲೇಜಿನಲ್ಲಿ ಬರುತ್ತಿದೆ.ಅದು ನಮಗೆ ಖುಷಿಯಾದ ಸಂಗತಿ ಇದಕ್ಕೆ ತಕ್ಕ ಹಾಗೆ ಆಡಳಿತ ಮಂಡಳಿ ಕೂಡ ನಮಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ ಎಂದು ಪ್ರಾಂಶುಪಾಲರು ಹೇಳಿದರು.
ಒಟ್ಟಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಓದಬಯಸುವ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಕಾಲೇಜು, ಬಸವೇಶ್ವರ ಪದವಿಪೂರ್ವ ಕಾಲೇಜ್ ಎಂದರೆ ತಪ್ಪಾಗುವುದಿಲ್ಲ ..
ಕಡಿಮೆ ಡೊನೇಶನ್ ನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಬಸವೇಶ್ವರ ಪದವಿ ಪೂರ್ವ ಕಾಲೇಜಿಗೆ ತಮ್ಮ ಮಕ್ಕಳನ್ನು ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ಸೇರಿಸಿ ಅವರ ಮುಂದಿನ ಭವಿಷ್ಯ ಉಜ್ವಲವಾಗುವಂತೆ ನೋಡಿಕೊಳ್ಳಿ…
ಕಡಿಮೆ ಪರ್ಸೆಂಟೇಜ್ ತೆಗೆದುಕೊಂಡಿರುವ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸಿಕೊಂಡು ಹೆಚ್ಚಿನ ಪರ್ಸೆಂಟೇಜ್ ಮಾಡಿಸಿ ಔಟ್ಪುಟ್ ಮಾಡಿಸುವ ಕಾಲೇಜ್ ಬಸವೇಶ್ವರ ಪದವಿ ಪೂರ್ವ ಕಾಲೇಜ್ ಇದು ಹೆಮ್ಮೆಯ ಸಂಗತಿ…
ಈಗಾಗಲೇ 90% ತೆಗೆದುಕೊಂಡಿರುವ ವಿದ್ಯಾರ್ಥಿಗಳನ್ನೇ ಅಡ್ಮಿಶನ್ ಮಾಡಿಸಿಕೊಂಡು 100% ತೆಗೆದುಕೊಳ್ಳುವುದು ಅದೇನು ದೊಡ್ಡ ಸಾಧನೆ ಅಲ್ಲ…
ನನ್ನ ಪ್ರಕಾರ ದಡ್ಡರನ್ನು ಜಾಣರನ್ನಾಗಿ ಮಾಡುವುದು ಸಾಧನೆ ಜಾಣರನ್ನು ಇನ್ನಷ್ಟು ಜನರನ್ನಾಗಿ ಮಾಡುವುದು ಅದೇನು ಅಷ್ಟು ದೊಡ್ಡ ಸಾಧನೆ ಅಲ್ಲ…
ಈ ದಿಕ್ಕಿನಲ್ಲಿ ಪೋಷಕರೇ ಹಾಗೂ ವಿದ್ಯಾರ್ಥಿಗಳೇ ನಿಮ್ಮ ಆಯ್ಕೆ ಬಸವೇಶ್ವರ ಪದವಿಪೂರ್ವ ಕಾಲೇಜ್ ಆಗಿರಲಿ ನಿಮ್ಮ ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ….
ರಘುರಾಜ್ ಹೆಚ್.ಕೆ…9449553305…