
ಗೌರವಾನ್ವಿತ ಮಾನ್ಯ ಜಿಲ್ಲಾಧಿಕಾರಿಗಳೇ…
ತಾವಿಂದು ತೀರ್ಥಹಳ್ಳಿಗೆ ಭೇಟಿ ನೀಡುತ್ತಿದ್ದೀರಿ .10 ನಿಮಿಷ ಸಮಯ ಮಾಡಿಕೊಂಡು ಕುರುವಳ್ಳಿ ಬಂಡೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ. ಮೇಲಿನ ಕುರುವಳ್ಳಿ ಗ್ರಾಮದ ಸರ್ವೆ ನಂಬರ್ 75 ಮತ್ತು 38 ಹಾಗೂ ಬುಕ್ಕಪುರ ವ್ಯಾಪ್ತಿ ಒಳಪಡುವ 64 ರಲ್ಲಿ ಸ್ಪೋಟಕವನ್ನು ಸಿಡಿಸಲು ನೂರಾರು ಕೂಳಿ ಹೊಂಡಗಳನ್ನು ಹೊಡೆಯುತ್ತಿದ್ದಾರೆ.
ಬೆಳಗ್ಗಿನ ಜಾವ ಏಕಕಾಲದಲ್ಲಿ ಸ್ಪೋಟಕವನ್ನು ಸಿಡಿಸಿ ಕಲ್ಲುಗಣಿಗಾರಿಕೆ ಮಾಡುತ್ತಿದ್ದಾರೆ . ಬಂಡೆ ಪ್ರದೇಶದಲ್ಲಿ ಎಲ್ಲಿ ನೋಡಿದರಲ್ಲಿ ಸ್ಪೋಟಕ ಸಿಡಿಸಲು ಕೈ ಕುಳಿ ಹೊಂಡ ಹೊಡೆದು ಹೊಂಡಗಳನ್ನು ಮಾಡಿಟ್ಟಿದ್ದಾರೆ .ಅದಕ್ಕೆ ರಾತ್ರಿ ಮತ್ತು ಬೆಳಗಿನ ಜಾವ ಜಿಲೇಟ್ ಮತ್ತು ಇತರ ಸ್ಪೋಟಕ ವಸ್ತು ತುಂಬಿ ಸಿಡಿಸಲಾಗುತ್ತದೆ. ನೂರಾರು ಜನರು ವಾಸ ಮಾಡುವ ಮನೆಗಳು ಇರುವ ಪ್ರದೇಶ ರಾಷ್ಟ್ರೀಯ ಹೆದ್ದಾರಿ ,ಶಾಲೆ ವಿದ್ಯಾರ್ಥಿಗಳ ವಸತಿ ನಿಲಯ ಇರುವಂತಹ ಪ್ರದೇಶದಲ್ಲಿ ಪಟ್ಟಣ ಪಂಚಾಯಿತಿಯ ವಿಶೇಷ ಆಶ್ರಯ ಬಡಾವಣೆ ಇರುವ ಈ ಪ್ರದೇಶದಲ್ಲಿ ಜನರು ಪ್ರತಿನಿತ್ಯ ಬೆದರಿಕೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅನೇಕ ಮನೆಗಳು ಬಿರುಕು ಬಂದಿದೆ ಪ್ರತಿನಿತ್ಯ ಕನಿಷ್ಠ 50 ಲಾರಿಗಳು 20–30 ಟನ್ನು ಕಲ್ಲನ್ನು ಹೇರಿಕೊಂಡು ಆಕ್ರಮ ಸಾಗಾಟ ಮಾಡುತ್ತಾರೆ. ಇದಕ್ಕೆ ನಕಲಿ ಬಿಲ್ಲುಗಳನ್ನು ಉಪಯೋಗಿಸುತ್ತಾರೆ.
ಅಧಿಕಾರಿಗಳು ತಮಗೆ ಕೊಡುವ ವರದಿಗೂ ಇಲ್ಲಿ ನಡೆಯುತ್ತಿರುವ ವ್ಯವಸ್ಥೆಗೂ ಆಜಾಗಜಾಂತರ ವ್ಯತ್ಯಾಸವಿದೆ. ಏನೇ ಇರಲಿ ತೀರ್ಥಹಳ್ಳಿಯಲ್ಲಿ ಸ್ಪೋಟಕ ಸಿಡಿಸುವುದರಿಂದ ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆಯ ಹುಣಸೋಡು ಜನರ ಪ್ರಾಣ ಹಾನಿಯಾಗಿ ಪ್ರಕರಣ ನಡೆಯಬಹುದು. ತಾವು ಒಮ್ಮೆ ನೋಡಲೇಬೇಕಾದಂತ ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ವಿಚಾರ ನೂರಾರು ಸ್ಪೋಟಕಗಳು ಬಾಕ್ಸ್ ಕಟ್ಟಲೇ ಇಲ್ಲಿ ಬರುತ್ತಿವೆ ಎಂದರೆ ಇದನ್ನು ರಕ್ಷಣೆ ಮಾಡುತ್ತಿರುವವರು ಯಾರು. ಸರ್ಕಾರದ ಖಜಾನೆಗೆ ಪ್ರತಿನಿತ್ಯ ಲಕ್ಷ ಲಕ್ಷ ರೂಪಾಯಿಗಳು ನಷ್ಟವಾಗುತ್ತಿದೆ.
ಇಂದು ತಾವು ತೀರ್ಥಹಳ್ಳಿ ಗೆ ಭೇಟಿ ನೀಡುತ್ತಿದ್ದೀರಿ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟ್ಟಣದ ಒಳಗಿರುವ ಈ ಸ್ಥಿತಿಯನ್ನು ಒಮ್ಮೆ ಕಣ್ಣಾರೆ ನೋಡಿ ಕಳೆದ ಬಾರಿ ಮಳೆಗಾಲದಲ್ಲಿ ಇಲ್ಲಿ ಗುಡ್ಡ ಭೂಕುಸಿತವಾಗಿತ್ತು ಈ ಬಾರಿ ಮಳೆಗಾಲದಲ್ಲಿ ಖಂಡಿತ ಬಹುದೊಡ್ಡ ಗುಡ್ಡ ಮತ್ತು ಭೂಕುಸಿತವಾಗಿ ರಾಷ್ಟ್ರೀಯ ಹೆದ್ದಾರಿ ಗೆ ಹಾನಿ ಆಗುವಂತಿದೆ ದಕ್ಷರು, ಪ್ರಾಮಾಣಿಕರು, ಪರಿಸರ ಸ್ನೇಹಗಳಾದ ನಿಮ್ಮಲ್ಲಿ ತೀರ್ಥಹಳ್ಳಿಯ ಪ್ರಜ್ಞಾವಂತ ನಾಗರಿಕರ ಹಾಗೂ ಸ್ಥಳೀಯ ನಿವಾಸಿಗಳ ಮನವಿ ದೊಡ್ಡ ಅನಾಹುತ ಒಂದು ಆಗುವ ಮೊದಲು ಒಮ್ಮೆ ಭೇಟಿ ನೀಡಿ ನಿಲ್ಲಿಸಿ …
ರಘುರಾಜ್ ಹೆಚ್.ಕೆ…,9449553305….