ತೀರ್ಥಹಳ್ಳಿ :ಮೇಲಿನ ಕುರುವಳ್ಳಿ ಬಂಡೆ ಸರ್ವೆ ನಂಬರ್ 38ರ ಗುತ್ತಿಗೆಯಲ್ಲಿ ವಂಚನೆ..! ಗಣಿ ಇಲಾಖೆಗೆ ಸುಳ್ಳು ದಾಖಲಾತಿ ನೀಡಲಾಗಿದೆಯಾ..?!

0
200

ತೀರ್ಥಹಳ್ಳಿ : ಮೇಲಿನ ಕುರುವಳ್ಳಿ ಬಂಡೆಯಲ್ಲಿ ನಿರಂತರವಾಗಿ ನಿಷೇಧಿತ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಪತ್ರಿಕೆ ನಿರಂತರವಾಗಿ ವರದಿ ಮಾಡುತ್ತಿದೆ. ಕೆಲವು ಅಧಿಕಾರಿಗಳು ಎಂಜಲು ಕಾಸು ತಿಂದು ಗಣಿಗಾರಿಕೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎನ್ನುವ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವವರು ಕೂಡ ಅಧಿಕಾರಿಗಳಿಗೆ ಹಣಕೊಟ್ಟು ನಡೆಸುತಿದ್ದೇವೆ ನಾವು ಯಾರಿಗೂ ಹೆದರಲ್ಲ ಎನ್ನುವ ಮಾತುಗಳನ್ನು ಆಡುತ್ತಾರೆ ಎಂದರೆ ಇವರು ಎಷ್ಟರಮಟ್ಟಿಗೆ ಹಣದಲ್ಲಿ ಬೆಳೆದಿರಬಹುದು ಲೆಕ್ಕ ಹಾಕಿ.

ಅದಿರಲಿ ಅದರ ಬಗ್ಗೆ ಈಗಾಗಲೇ ಕಾನೂನು ಹೋರಾಟ ಶುರುವಾಗಿದೆ ಸದ್ಯದಲ್ಲಿಯೇ ಅಕ್ರಮ ಹಾಗೂ ನಿಷೇಧಿತ ಪ್ರದೇಶದ ಬಂಡೆಯ ಕಲ್ಲು ಗಣಿಗಾರಿಕೆ ನಿಲ್ಲುವ ಎಲ್ಲಾ ಸಾಧ್ಯತೆ ಇದೆ ಹಾಗೂ ಇದನ್ನು ನಡೆಸುತ್ತಿರುವವರು ಹಾಗೂ ಇದಕ್ಕೆ ಕೈಜೋಡಿಸುತ್ತಿರುವವರು ಕೂಡ ಕಂಬಿಯ ಹಿಂದೆ ಹೋಗುವ ಸಾಧ್ಯತೆ ಇದೆ…

ಇದೆಲ್ಲದರ ಮಧ್ಯೆ ಈಗ ಸರ್ವೆ ನಂಬರ್ 38 ರಲ್ಲಿ ಗುತ್ತಿಗೆ ಪ್ರಕ್ರಿಯೆ ನಡೆಯುತ್ತಿದೆ ಈ ಗುತ್ತಿಗೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಎಕನಾಮಿಕಲಿ ವೀಕರ್ ಸೆಕ್ಷನ್ ಅಂದರೆ ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಿಗೆ ಈ ಗುತ್ತಿಗೆ ನೀಡಬೇಕು ಎನ್ನುವ ನಿಯಮವಿದೆ. ಹಾಗೆ ಗುತ್ತಿಗೆ ಪಡೆಯುವವರ ಮೇಲೆ ಯಾವುದೇ ರೀತಿಯ ಮೊಕದ್ದಮೆಗಳು ಇರಬಾರದು ಎನ್ನುವ ನಿಯಮವಿದೆ ಆದರೆ ಇವೆಲ್ಲವನ್ನೂ ಈ 38ರ ಗುತ್ತಿಗೆ ಪ್ರಕ್ರಿಯೆಯಲ್ಲಿ ಗಾಳಿಗೆ ತೂರಿ ಗುತ್ತಿಗೆ ಪ್ರಕ್ರಿಯೆ ನಡೆಯುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ.

ಪತ್ರಿಕೆ ಇದರ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು ಒಂದು ವೇಳೆ ಇದು ನಿಜವಾದಲ್ಲಿ ಸರ್ವೆ ನಂಬರ್ 38ರ ಗುತ್ತಿಗೆ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ…

ಮುಂದೆ….. ಆಧುನಿಕ ಧರ್ಮರಾಯನ ಕಥೆ ಧಾರವಾಹಿಯ ರೂಪದಲ್ಲಿ ಬರಲಿದೆ ನಿರೀಕ್ಷಿಸಿ….

ಮುಂದಿನ ದಿನಗಳಲ್ಲಿ ನಿರೀಕ್ಷಿಸಿ …. “”ಆಧುನಿಕ ಧರ್ಮರಾಯನ ಕರ್ಮಕಾಂಡ”” ಈ ಚಪಲ ಚೆನ್ನಿಗರಾಯನ ಕಾಮದಾಹ,ಹಣದಾಹ, ಭೂಸ್ವಾಹ, ಎಲ್ಲವನ್ನು ಪತ್ರಿಕೆ ತೆರೆದಿಡಲಿದೆ… ನಿರೀಕ್ಷಿಸಿ… ಕಳ್ಳರು ಪೊಲೀಸರ ಮೇಲೆ ಕಳ್ಳತನದ ಆರೋಪ ಹೊರಿಸುವಂತೆ, ಈ ಅಕ್ರಮ ಮಾಡುವ ಖದೀಮ ಈತನ ಅಕ್ರಮವನ್ನು ಬರೆಯುವವರ ಮೇಲೆ ಕೇಸ್ ದಾಖಲಿಸಿದರೆ ಅಂದರೆ ಮಾನ ಇಲ್ಲದವನು ಮಾನಹಾನಿ ಮೊಕದ್ದಮೆ ಹಾಕಿದರೆ ಘನ ನ್ಯಾಯಾಲಯದ ನ್ಯಾಯಾಧೀಶರು ಸರಿಯಾದ ತೀರ್ಮಾನವನ್ನೇ ನೀಡುತ್ತಾರೆ. ಏಕೆಂದರೆ ಅವರಿಗೂ ಗೊತ್ತು ಇತನ ಅಕ್ರಮಗಳ ಬಗ್ಗೆ …ಇನ್ನು ಮುಂದೆ ಏನಿದ್ದರೂ ಈತನ ಕಾಮದಾಹ ,ಭೂಸ್ವಾಹ ಹಣದಾಹದ ,ಬಗ್ಗೆ ಸಂಪೂರ್ಣವಾಗಿ ಪ್ರತಿ ವಾರಕ್ಕೆ ಒಂದು ಪುಟದಂತೆ ಬರೆದು ಸಾರ್ವಜನಿಕರಿಗೆ ಸ್ಥಳೀಯರಿಗೆ ಈತನ ಇನ್ನೊಂದು ಮುಖವನ್ನು ಪತ್ರಿಕೆ ತೆರೆದಿಡಲಿದೆ… ಇದಕ್ಕೆ ಸ್ಥಳೀಯರು ಹಾಗೂ ಈತನ ಜೊತೆ ಕಾರ್ಯನಿರ್ವಹಿಸುವ ಸಾಕಷ್ಟು ಜನ ಪತ್ರಿಕೆಗೆ ಫೋಟೋ, ವಿಡಿಯೋ, ಆಡಿಯೋ ಗಳನ್ನು ನೀಡಿದ್ದಾರೆ… ಎಲ್ಲವನ್ನು ಪತ್ರಿಕೆ ತೆರೆದಿಡಲಿದೆ ನಿರೀಕ್ಷಿಸಿ….

ರಘುರಾಜ್ ಹೆಚ್.ಕೆ..9449553305…