Home ಶಿವಮೊಗ್ಗಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..!

ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..!

by EDITOR NEWS WARRIORS
0 comments

 


ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚಿನ 10 ವರ್ಷಗಳಲ್ಲಿ ಯಾವುದೇ ಪ್ರಕರಣ ದಾಖಲಾಗದೇ ಇರುವಂತಹ ಹಾಗೂ ಉತ್ತಮ ಗುಣ ನಡತೆ ಹೊಂದಿರುವ ಹಾಗೂ ಮೃತ ಪಟ್ಟಂತಹ ಹಾಗೂ ವಯಸ್ಸಿನ ಆಧಾರದ ಮೇಲೆ ಶಿವಮೊಗ್ಗ – ಎ ಉಪ ವಿಭಾಗದ – 17, ಶಿವಮೊಗ್ಗ – ಬಿ ಉಪ ವಿಭಾಗದ – 60, ಭದ್ರಾವತಿ ಉಪ ವಿಭಾಗದ – 72, ಸಾಗರ ಉಪ ವಿಭಾಗದ – 55, ಶಿಕಾರಿಪುರ ಉಪ ವಿಭಾಗದ – 124 ಹಾಗೂ ತೀರ್ಥಹಳ್ಳಿ ಉಪ ವಿಭಾಗದ – 25 ಜನ ರೌಡಿ ಆಸಾಮಿಗಳು ಸೇರಿ ಒಟ್ಟು 353 ಜನ ರೌಡಿಗಳಿಗೆ ರಿಲೀಫ್ ಸಿಕ್ಕಿದೆ.

ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡುವ ಸಂಬಂಧ ಇಂದು  ಮಧ್ಯಾಹ್ನ  ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ. ಕೆ,  ರವರ ನೇತೃತ್ವದಲ್ಲಿ, ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈಧಾನದಲ್ಲಿ  ಸದರಿ  ರೌಡಿಗಳ ಪರೇಡ್ ಕರೆದಿದ್ದು, ಪರೇಡ್ ನಲ್ಲಿ ಹಾಜರಿದ್ದ ರೌಡಿಶೀಟರ್ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ.

1) ಯಾವುದೋ ಕೆಟ್ಟ ಸಂದರ್ಭ ಹಾಗೂ ನಿಮ್ಮ ನಡೆತೆಯಿಂದ ನಿಮ್ಮಗಳ ವಿರುದ್ಧ ಈ ಹಿಂದೆ ರೌಡಿ ಹಾಳೆಯನ್ನು ತೆರೆದಿದ್ದು,  ಆದರೆ ಇತ್ತೀಚಿನ ದಿನಗಳಲ್ಲಿ ನಿಮ್ಮ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗದೇ ಇರುವುದರಿಂದ  ಹಾಗೂ ಸಮಾಜದಲ್ಲಿ ನಿಮ್ಮ ನಡತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಮಾನದಂಡಗಳ ಆಧಾರದಲ್ಲಿ ನಿಮ್ಮ ವಿರುದ್ಧ ಈ ಹಿಂದೆ ತೆರೆಯಲಾಗಿದ್ದ ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮಾಡುತ್ತಿದ್ದೇವೆ.

2) ಸಮಾಜದಲ್ಲಿ ಎಲ್ಲ ನಾಗರೀಕರ ರೀತಿ ನೀವು ಸಹಾ ಉತ್ತಮ ಜೀವನ* ನಡೆಸಲು ಇದು ಒಂದು ಸದಾವಕಾಶವಾಗಿರುತ್ತದೆ.ಇನ್ನು ಮುಂದೆ ಸಮಾಜದಲ್ಲಿ ಉತ್ತಮ ಪ್ರಜೆಗಳ ರೀತಿ ಜೀವನ ನಡೆಸಿ.

3) ನಿಮ್ಮೆಲ್ಲರ ವಿರುದ್ಧ ಪೊಲೀಸ್ ಇಲಾಖೆಯು ಸೂಕ್ಷ್ಮವಾಗಿ ಗಮನ ಹರಿಸಲಿದ್ದು, ನೀವು ಯಾವುದೇ ಸಣ್ಣ ಪುಟ್ಟ ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಬಂದರೂ ಸಹಾ  ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾದ ರೌಡಿ ಹಾಳೆಯನ್ನು ಪುನಾಃ ತೆರೆಯಲಾಗುತ್ತದೆ ಹಾಗೂ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ.

4) ನಿಮ್ಮ ಕುಟುಂಬ,ಸಮಾಜ ಹಾಗೂ ಪೊಲೀಸ್ ಇಲಾಖೆಯೊಂದಿಗೆ ನಿಷ್ಠೆಯಿಂದಿರಿ, ಜೀವನೋಪಾಯಕ್ಕಾಗಿ ನಿರ್ವಹಿಸುವ ಕರ್ತವ್ಯಗಳನ್ನು ಶಿಸ್ತಿನಿಂದ ಮಾಡಿ, ಸಮಾಜದಲ್ಲಿ ಒಬ್ಬ ಉತ್ತಮ ನಾಗರೀಕನಾಗಿ ರೂಪುಗೊಳ್ಳಿ. ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ಗಳಿಸಲು ನಿಮಗೆ ಒದಗಿ ಬಂದ ಸದಾವಕಾಶ ಸಿಕ್ಕಿದ್ದು, ಇದರ ಉಪಯೋಗ ಪಡೆಯಿರಿ.

5) ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾದ ರೌಡಿ ಹಾಳೆಯು ಯಾವುದೇ  ಕಾರಣಕ್ಕೆ, ಪುನಾಃ ತೆರೆಯುವ  ಸಂದರ್ಭ ಬಂದರೇ ನಿಮ್ಮ ಜೀವನ ಪರ್ಯಂತ ನಿಮ್ಮ ವಿರುದ್ಧ ತೆರೆಯಲಾದ ರೌಡಿ ಹಾಳೆಯು ಪ್ರಚಲಿತದಲ್ಲಿರುತ್ತದೆ ಹಾಗೂ ನೀವು ಪೊಲೀಸ್ ಇಲಾಖೆಯ ನೇರ ಕಣ್ಗಾವಲಿನಲ್ಲಿರುತ್ತೀರಿ ಹಾಗೂ ಕಾನೂನು ರೀತ್ಯಾ ಕ್ರಮ ಎದುರಿಸಬೇಕಾಗುತ್ತದೆ.

ಎಲ್ಲರು ಸನ್ನಡತೆಯಿಂದ ಜೀವನ ನಡೆಸಿ, ನಿಮ್ಮ ಸುತ್ತ ಮುತ್ತಲು ನಡೆಯುವ ಯಾವುದೇ ಘಟನೆಗಳ ಬಗ್ಗೆ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ತಿಳಿಸಿದರು.

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...