ಸ್ಯಾಂಡಲ್ ವುಡ್ ನಲ್ಲಿ ಕಳೆದ ವಾರ ನಟ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೆ.1ರಂದು ಬಿಡುಗಡೆಯಾಗಿತ್ತು.

ರಕ್ಷಿತ್ ಶೆಟ್ಟಿಯವರಿಗೆ ಅವರದೇ ಆದ ಫ್ಯಾನ್ಸ್ ಬೇಸ್ ಇದೆ. ಇವರ ಚಿತ್ರ ಬಿಡುಗಡೆಯಾಗುತ್ತೆ ಎಂದರೆ ಸಿನಿ ದುನಿಯಾದಲ್ಲಿ ಒಂದಷ್ಟು ಸದ್ದಾಗುವುದಂತು ನಿಜ.
ಚಿತ್ರ ತೆರೆ ಕಂಡ ನಂತರ ದಿನ ಕಳೆದಂತೆ ಚಿತ್ರ ಮಂದಿರದ ಆಚೆ ಇರುವ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತನ್ನ ಕಡೆಗೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.
ಸಪ್ತ ಸಾಗರದಾಚೆಗೆ ಸಿಗುತ್ತಿರುವ ಪ್ರೇಕ್ಷಕರ ಬೆಂಬಲಕ್ಕೆ ಫಿದಾ ಆದ ನಟ ರಕ್ಷಿತ್ ಶೆಟ್ಟಿ ಧನ್ಯವಾದ ಹೇಳಲು ರಾಜ್ಯದ ಚಿತ್ರ ಮಂದಿರಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ.
ಇಂದು ಶಿವಮೊಗ್ಗದ ವೀರಭದ್ರೇಶ್ವರ ಚಿತ್ರ ಮಂದಿರಕ್ಕೆ ರಕ್ಷಿತ್ ಶೆಟ್ಟಿ ಭೇಟಿ ನೀಡುತ್ತಾರೆ ಎಂಬ ಮಾಹಿತಿ ಪಡೆದ ರಕ್ಷಿತ್ ಯುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಚಿತ್ರಮಂದಿರ ಕಡೆಗೆ ಹೆಜ್ಜೆ ಹಾಕಿದರು.





ಅಭಿಮಾನಿಗಳು ಗಂಟೆಗಟ್ಟಲೆ ಕಾದರೂ ರಕ್ಷಿತ್ ಶೆಟ್ಟಿಯವರನ್ನು ಕಾಣುವ ಉತ್ಸಾಹ ಅಭಿಮಾನಿಗಳ ಮುಖದಲ್ಲಿ ಹಾಗೇ ಇತ್ತು.
ಮಧ್ಯಾಹ್ನ ಎರಡರ ಆಸುಪಾಸಿನಲ್ಲಿ ನಟ ರಕ್ಷಿತ್ ಶೆಟ್ಟಿ ಅಭಿಮಾನಿಗಳನ್ನು ನೋಡಲು ವೀರಭದ್ರೇಶ್ವರ ಚಿತ್ರಮಂದಿರಕ್ಕೆ ಆಗಮಿಸಿದರು.
ನಟನ ಕಾರು ಚಿತ್ರಮಂದಿರ ಬಳಿ ಬರುತ್ತಿದ್ದ ಹಾಗೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.


ಅಭಿಮಾನಿಗಳು ರಕ್ಷಿತ್ ಶೆಟ್ಟಿಯವರನ್ನು ಹಾರ ಹಾಕಿ ಸ್ವಾಗತಿಸಿ ಚಿತ್ರಮಂದಿರದ ಒಳಗೆ ಬರಮಾಡಿಕೊಂಡರ.
ರಕ್ಷಿತ್ ಜೊತೆ ನಾಯಕಿ ರುಕ್ಮಿಣಿ ವಸಂತ್ ಆಗಮನದಿಂದ ನೆರೆದಿದ್ದ ಅಭಿಮಾನಿಗಳು ಫುಲ್ ಜೋಶ್ ನಿಂದ ಸಿಳ್ಳೆ ಚಪ್ಪಾಳೆ ಹೊಡೆದು ನಟಿಯನ್ನು ಸ್ವಾಗತಿಸಿದರು.

ಚಿತ್ರ ಮಂದಿರದಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ ರಕ್ಷಿತ್ ಶೆಟ್ಟಿ ಹಾಗು ರುಕ್ಮಿಣಿ ವಸಂತ್ ರವರು ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ ಕೊಟ್ಟಂತಹ ಬೆಂಬಲಕ್ಕೆ ಥ್ಯಾಂಕ್ಸ್ ಹೇಳಿದರು.
ಯುವ ಅಭಿಮಾನಿಯೊಬ್ಬರು ಸಿನಿಮಾ ಪೋಸ್ಟರ್ ನ ಯಥಾವತ್ ಚಿತ್ರ ಬಿಡಿಸಿಕೊಂಡು ಬಂದಿದ್ದರು.

ಅಭಿಮಾನಿಗಳ ಜೊತೆ ಅಭಿಮಾನಿಗಳ ಮುಂದೆ ನಟ ನಟಿಯರಿಬ್ಬರೂ ಸೆಲ್ಫಿ ಕ್ಲಕ್ಕಿಸಿಕೊಂಡು ಸಂಭ್ರಮಿಸಿದರು.


ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ನಾವೂ ಸಹ ಹಾರೈಸುತ್ತೇವೆ.
ವರದಿ – ವಿನಯ್ ಕುಮಾರ್ ಹೆಚ್.ಎಮ್