ಶಿವಮೊಗ್ಗ : ಸಿದ್ಧರಾಮಯ್ಯ ಪಂಚೆಯನ್ನು ಉಟ್ಟು ಅದರೊಳಗೆ ಆರ್ ಎಸ್ ಎಸ್ ಚಡ್ಡಿ ಇಟ್ಟಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಶಾಸಕ ಬಿ.ಕೆ ಹರಿಪ್ರಸಾದ್ ರವರು ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ನಂತರ ಪ್ರತಿಕ್ರಿಯೆ ನೀಡಿದ ಕೆ.ಎಸ್ ಈಶ್ವರಪ್ಪ ಕಾಂಗ್ರೆಸ್ ಮುಖಂಡರು ಏನಾದರೂ ಬಡಿದಾಡಿಕೊಳ್ಳಿ ನಮಗೆ ಸಂಬಂಧ ಇಲ್ಲ ಆದರೆ ಆರ್.ಎಸ್.ಎಸ್ ಚಡ್ಡಿ ಯಾಕೆ ಮಧ್ಯೆ ತರುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ದೇಶದಲ್ಲಿ ಎಲ್ಲರೂ ಚಡ್ಡಿ ಹಾಕಿ ಕೊಳ್ಳುತ್ತಾರೆ ಆದರೆ ಆರ್ ಎಸ್ ಎಸ್ ಚಡ್ಡಿ ಹಾಕಿದರೆ ರಾಷ್ಟ್ರ ಪ್ರೇಮ ಜಾಗೃತವಾಗುತ್ತದೆ ಅದು ಬರಿ ಚಡ್ಡಿಯಲ್ಲ ಅದಕ್ಕೊಂದು ಪಾವಿತ್ರ್ಯತೆ ಇದೆ.
ಸಿದ್ಧರಾಮಯ್ಯಗೆ ದೇಶ ಭಕ್ತಿ ಗೊತ್ತಿಲ್ಲ ಸಮಾಜವಾದಿ ಅಂತ ಬುರುಡೆ ಹೊಡ್ಕೊಂಡು ಬಂದ್ರು ಇಂತಹವರು ಆರ್ ಎಸ್ ಎಸ್ ಚಡ್ಡಿ ಯಾಕೆ ಹಾಕ್ತಾರೆ..? ಹಾಗೇನಾದ್ರು ಹಾಕಿದಾಗ ನೋಡೋಣ ಅಲ್ಲಿಯವರೆಗೋ ಸಿದ್ದರಾಮಯ್ಯ ಆಗಲಿ ಬಿ.ಕೆ ಹರಿಪ್ರಸಾದ್ ಆಗಲಿ ಆರ್ ಎಸ್ ಎಸ್ ಚಡ್ಡಿ ಬಗ್ಗೆ ಮಾತನಾಡೋದು ಬೇಡ ಎಂದರು.
ವರದಿ – ವಿನಯ್ ಕುಮಾರ್ ಹೆಚ್.ಎಮ್