
ಶಿವಮೊಗ್ಗ: ಪಶ್ಚಿಮ ಸಂಚಾರಿ ಠಾಣೆಯ ಮುಖ್ಯಪೇದೆ ಜಯಪ್ಪ ಉಪ್ಪಾರ್ ನೇಣಿಗೆ ಶರಣಾಗಿದ್ದಾರೆ. ಮೂರು ದಿನಗಳ ಹಿಂದೆ ತನ್ನ ಮಡದಿ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು ನಂತರ ಮೃತರಾಗಿದ್ದರು. ಅದು ತಡವಾಗಿ ಗೊತ್ತಾದಾಗ ಬದುಕುಳಿಯುವ ಸಂಭವ ಕಡಿಮೆ ಇತ್ತು ಇದು ಗೊತ್ತಾದಾಗ ಶಾಕ್ ಆದ ಜಯಪ್ಪ ಒಂದಷ್ಟು ಅಪ್ಸೆಟ್ ಆಗಿದ್ದರು ಇನ್ಸ್ಪೆಕ್ಟರ್ ಕೂಡ ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿದ್ದರು. ಇದೇ ನೋವಿನಿಂದ ನಿನ್ನೆ ಕೆಲಸ ಮುಗಿಸಿಕೊಂಡು ಮನೆಗೆ ಹೋದಾಗ ತನ್ನ ಸಮವಸ್ತ್ರದಲ್ಲಿ ನೇಣಿಗೆ ಶರಣಾಗಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಮೃತ ಜಯಪ್ಪ ಉಪ್ಪಾರ್ ಸ್ನೇಹಜೀವಿ ಆಗಿದ್ದರು ಎನ್ನುತ್ತಾರೆ ಅವರ ಜೊತೆ ಕೆಲಸ ಮಾಡಿದ ಇಲಾಖೆ ಸಿಬ್ಬಂದಿಗಳು.