
ತುಮಕೂರು:ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು. ರಾಜ್ಯಾಧ್ಯಕ್ಷನ ವಿರುದ್ಧ ಪತ್ರಕರ್ತರೆಲ್ಲಾ ಧರಣಿ ಕುಳಿತಿದ್ದು ಷಡಾಕ್ಷರಿ ಕ್ಷಮಾಪಣೆಯ ನಂತರ ಧರಣಿ ಅಂತ್ಯವಾಗಿದೆ.
ಏನಿದು ಘಟನೆ:
ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಕ್ರೀಡಾಕೂಟವೊಂದು ಆಯೋಜಿಸಲಾಗಿತ್ತು.
ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಸಂಘದವತಿಯಿಂದ ಕ್ರೀಡಾಕೂಟವನ್ನ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಕ್ರೀಡಾಕೂಟದ ಸಮವಸ್ತ್ರವನ್ನ ಕ್ರೀಡಾಪಟುಗಳಿಗೆ ಹಂಚಲಾಗಿತ್ತು. ಕ್ರೀಡಾಪಟುಗಳು ಸಮವಸ್ತ್ರದ ಸುತ್ತಳತೆ ಹೆಚ್ಚುಕಮ್ಮಿಯಾಗಿದ್ದನ್ನ ರಾಜ್ಯಾಧ್ಯಕ್ಷರ ಮುಂದೆ ಆಕ್ಷೇಪಿಸಿದ್ದರು.
ಈ ಆಕ್ಷೇಪಣೆಯನ್ನ ಚಿತ್ರೀಕರಿಸಲು ಮುಂದಾದ ಸುದ್ದಿವಾಹಿನಿಯ ಕ್ಯಾಮೆರಾಮನ್ ನ ಮೊಬೈಲ್ ಕಸಿದುಕೊಂಡು ನೆಲಕ್ಕೆ ಬೀಳಿಸಿದ ರಾಜ್ಯಾಧ್ಯಕ್ಷರು ಕ್ತಾಮರಾಮನ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಅಲ್ಲಿನ ಪತ್ರಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದು. ಗಾಯಗೊಂಡ ಕ್ಯಾಮೆರಾಮನ್ ಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳಪೆ ಗುಣಮಟ್ಟದ ಟೀ ಶರ್ಟ್ ವಿತರಣೆ ಮಾಡಿ ಗೋಲ್ ಮಾಲ್ ಮಾಡಿರುವುದಾಗಿ ಕ್ರೀಡಾಪಟುಗಳು ಆರೋಪ ಮಾಡಿದ್ದಾರೆ. ಕ್ರೀಡಾಕೂಟಕ್ಕೆ ಆರು ತಿಂಗಳ ಹಿಂದೆಯೇ ಸಂಘ ರಿಜಿಸ್ಟ್ರೇಷನ್ ಮಾಡಿಸಿಕೊಂಡಿತ್ತು.
ಆದ್ರೆ ಸರಿಯಾದ ಸೈಜ್ ಗಳ ಟೀ ಶರ್ಟ್ ಕೊಡುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ರೊಚ್ಚಿಗೆದ್ದ ಕ್ರೀಡಾಪಟುಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಇದನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮದವರ ಮೇಲೆ ರಾಜ್ಯಧ್ಯಕ್ಷ ಷಡಕ್ಷರಿ ಹಲ್ಲೆ ನಡೆಸಿದ್ದು ನಂತರ ತಪ್ಪಿನ ಅರಿವಾದ ಷಡಾಕ್ಷರಿ ಬಹಿರಂಗವಾಗಿ ಕ್ಷಮಾಪಣೆ ಹೇಳಿದ್ದಾರೆ.
ರಘುರಾಜ್ ಹೆಚ್. ಕೆ.9449553305.