Thursday, May 1, 2025
Google search engine
Homeರಾಜ್ಯಅತಿವೃಷ್ಟಿಯಿಂದ ಹಾನಿಗೊಳಗಾದ ಎಲ್ಲಾ ಮನೆಗಳಿಗೆ ಪರಿಹಾರ ನೀಡುವಂತೆ ಗ್ರಾ.ಪಂ ಒಕ್ಕೂಟದ ಅಧ್ಯಕ್ಷ್ಯ ಅನಿಲ್ ಒತ್ತಾಯ ..!

ಅತಿವೃಷ್ಟಿಯಿಂದ ಹಾನಿಗೊಳಗಾದ ಎಲ್ಲಾ ಮನೆಗಳಿಗೆ ಪರಿಹಾರ ನೀಡುವಂತೆ ಗ್ರಾ.ಪಂ ಒಕ್ಕೂಟದ ಅಧ್ಯಕ್ಷ್ಯ ಅನಿಲ್ ಒತ್ತಾಯ ..!

ತಿರ್ಥಹಳ್ಳಿ:ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಹಕ್ಕು ಪತ್ರ ಕಡ್ಡಾಯ ಎಂಬ ನಿಯಮವನ್ನು ಸರ್ಕಾರ ಮಾಡುವ ಮೂಲಕ ಮಳೆ ಹಾನಿಗೊಳಗಾದ ಎಲ್ಲಾ ಮನೆಗಳ ಕುಟಂಬಕ್ಕೆೆ ಪರಿಹಾರ ಸಿಗದಂತಾಗಿದ್ದು ಮನೆಕಳೆದುಕೊಂಡ ಕುಟುಂಬ ನಿರಾಶ್ರಿತರಾಗಿದ್ದಾರಲ್ಲದೆ ಸೂರಿಲ್ಲದೆ ಪರದಾಡುವಂತಾಗಿದೆ.

ಮಳೆ ಹಾನಿಗೊಳಗಾದ ಎಲ್ಲಾ ಮನೆಗಳಿಗೆ ಸರ್ಕಾರ ಪರಿಹಾರ ನೀಡುವಂತೆ ತಾಲೂಕು ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ್ಯ ಅನಿಲ್ ಟಿ.ಜೆ ಒತ್ತಾಯಿಸಿದ್ದಾಾರೆ.2021-22ನೇಸಾಲಿನಲ್ಲಿ ಅಂದಿನ ಬಿಜೆಪಿ ಸರ್ಕಾರ ಮಳೆಹಾನಿಯಿಂದ ಹಾನಿಗೊಳಗಾದ ಎಲ್ಲಾ ಮನೆಗಳ ಮರು ನಿರ್ಮಾಣಕ್ಕೆ 5 ಲಕ್ಷ ಪರಿಹಾರ ನೀಡಿತ್ತು.ಆದರೀಗ ಹಕ್ಕು ಪತ್ರ ಹೊಂದಿದ ಮನೆಗಳಿಗೆ ಮಾತ್ರ ಪರಿಹಾರ ನೀಡುವುದಾಗಿ ನಿಯಮ ಮಾಡಿದ್ದು ಡಿಮ್ಯಾಾಂಡ್‌ ಹೊಂದಿದ ಮನೆಗಳಿಗೆ ಪರಿಹಾರ ನೀಡಲಾಗುತ್ತಿಲ್ಲ.ಇದರಿಂದ ಡಿಮ್ಯಾಾಂಡ್ ಹೊಂದಿ ಮಳೆಯಿಂದ ಮನೆ ಹಾನಿಗೊಂಡ ಕುಟುಂಬದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಈ ಕಾರಣದಿಂದ ಆತಂಕಕ್ಕೊಳಗಾಗಿರುವ ಬಡ ಕುಟುಂಬಗಳು ಬದುಕು ಕಟ್ಟಿಕೊಳ್ಳಲು ಕಣ್ಣೀರು ಹಾಕುತ್ತಾ ಸರ್ಕಾರಕ್ಕೆೆ ಹಿಡಿಶಾಪ ಹಾಕುವಂತಾಗಿದೆ.

ಮಲೆನಾಡು ಪ್ರದೇಶದಲ್ಲಿ ಶೇಕಡ 80ಕ್ಕೂ ಹೆಚ್ಚು ಕುಟುಂಬಗಳ ಮನೆಗಳು ಹಕ್ಕು ಪತ್ರವನ್ನು ಹೊಂದಿಲ್ಲ,ಅನಾದಿಕಾಲದಿಂದಲು ಅರಣ್ಯಪ್ರದೇಶ, ಸೊಪ್ಪಿನ ಬೆಟ್ಟ ಹಾಗು ಕಂದಾಯ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಕುಟುಂಬಗಳು ಗ್ರಾಮಪಂಚಾಯತಿಗಳಿಗೆ ಕಂದಾಯ ಕಟ್ಟಿ ಕೊಂಡು ವಾಸಿಸುತ್ತಿವೆ,ಅವರುಗಳಿಗೆ ಹಕ್ಕು ಪತ್ರ ನೀಡಲು ಕಾನೂನಿನ ತೊಡಕಿನಿಂದಾಗಿ ಸರ್ಕಾರಗಳಿಗೆ ಸಾಧ್ಯವಾಗಿಲ್ಲ.ಅಂತಹ ಅನೇಕ ಕುಟುಂಬಗಳು ಸರ್ಕಾರದ ಇಂತಹ ಜಾಣಕುರುಡು ನಿಯಮದಿಂದಾಗಿ ಪರಿಹಾರದಿಂದ ವಂಚಿತರಾಗುತ್ತಿದ್ದಾರೆ.

ಅತಿವೃಷ್ಠಿಯಿಂದ ಹಾನಿಗೊಳಗಾಗುವ ಮನೆಗಳ ಪರಿಹಾರ ದೊರಕಬೇಕಾಗಿರುವುದು ಮಲೆನಾಡಿನ ಪ್ರದೇಶದ ಕುಟುಂಬಗಳಿಗೆ. ಕಾರಣ ಈ ಪ್ರದೇಶಗಳಲ್ಲೇ ಹೆಚ್ಚು ಮಳೆ ಆಗುವುದು ಅಂತೆಯೇ ಅರಣ್ಯಪ್ರದೇಶ ಹೆಚ್ಚಿರುವುದರಿಂದ ಹಕ್ಕು ಪತ್ರ ಪಡೆಯಲು ಸಾಧ್ಯವಿಲ್ಲ.ಇದನ್ನು ಮನಗೊಂಡ ಬಿಜೆಪಿ ಸರ್ಕಾರ ಮಳೆ ಹಾನಿಗೊಳಗಾದ ಎಲ್ಲಾ ಮನೆಗಳಿಗೂ ಹಾನಿಗೊಳಗಾದ ಪ್ರಮಾಣಾನಾನುಸಾರ ಪರಿಹಾರ ನೀಡಲು ಮುಂದಾಗಿ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ಪರಿಹಾರ ನೀಡಲಾಗುತಿತ್ತು.

ಇದರಿಂದ ಅನೇಕ ಮಲೆನಾಡಿನ ಬಡ ಕುಟುಂಬಗಳ ಬದುಕಿಗೆ ಪರಿಹಾರ ಆಸರೆ ಆಗಿತ್ತು. ಇದೀಗ ಹಕ್ಕು ಪತ್ರ ಕಡ್ಡಾಯ ಮಾಡುವ ಮೂಲಕ ಪಟ್ಟಣದಲ್ಲಿ ವಾಸಿಸುವ ಶ್ರೀಮಂತ ಕುಟುಂಬಗಳಿಗೆ ಅನುಕೂಲವಾಗುವಂತಾಗಿದ್ದು ಗ್ರಾಾಮೀಣ ಪ್ರದೇಶದ ಕುಟುಂಬಗಳು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ.

ಬಡವರ ಶ್ರೇಯೋಭಿಲಾಷೆಯೇ ನಮ್ಮ ಆದ್ಯ ಕರ್ತವ್ಯ ಎಂದು ಹೇಳುವ ಕಾಂಗ್ರೇಸ್ ಸರ್ಕಾರ ಮಳೆಹಾನಿಗೊಳಗಾದ ಮನೆಗಳ ಪರಿಹಾರಕ್ಕೆೆ ಹಕ್ಕು ಪತ್ರ ಕಡ್ಡಾಯ ಮಾಡುವ ಮೂಲಕ ಬಡವರ ಕಣ್ಣೀರು ವರಿಸುವ ಕೆಲಸಕ್ಕೆೆ ಕೈಹಾಕಿದೆ ಎಂದು ಆಸಮದಾನ ವ್ಯಕ್ತಪಡಿಸಿರುವ ಒಕ್ಕೂಟದ ಅಧ್ಯಕ್ಷ ಅನಿಲ್ ಸರ್ಕಾರ ಈ ಸಂಭಂದ ಮರು ಪರಿಶೀಲನೆ ನಡೆಸಿ ಮಳೆಹಾನಿಗೊಳಗಾದ ಎಲ್ಲಾ ಮನೆಗಳಿಗೂ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...