
ಶಿವಮೊಗ್ಗ: ನಗರದ ಜಯನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ರೌಡಿಶೀಟರ್ ಭವಿತ್ ಕಾಲಿಗೆ ಪೊಲೀಸರು ಗುಂಡೆಟ್ಟು ಹಾರಿಸಿದ್ದು ವಿನೋಬಾ ನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆರೋಪಿ ಬವಿತ್ ಏಳು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು ಈತನೊಬ್ಬ ರೌಡಿಶೀಟರ್ ಆಗಿದ್ದು ನಿರಂತರವಾಗಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿದ್ದು ನಿನ್ನೆ ರಾತ್ರಿ ಅಮಾಯಕರನ್ನು ತಡೆಗಟ್ಟಿ ಹಲ್ಲೆಗೆ ಯತ್ನಿಸಿದ್ದಾನೆ ಈತನ ಜೊತೆ ಇನ್ನಿಬ್ಬರು ಸಹಚರರು ಸೇರಿಕೊಂಡಿದ್ದಾರೆ.
ಇಂದು ಈತನ ಹುಡುಕಾಟದಲ್ಲಿದ್ದ ಪೊಲೀಸರಿಗೆ ವಿನೋಬಾ ನಗರ ವ್ಯಾಪ್ತಿಯಲ್ಲಿ ಈತ ಸೆರೆ ಸಿಕ್ಕಿದ್ದು ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ .
ಜಯನಗರ ಪಿಎಸ್ಐ ಸುನಿಲ್ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದು ಸುನಿಲ್ ತಮ್ಮ ಆತ್ಮ ರಕ್ಷಣೆಗಾಗಿ ಆರೋಪಿ ಬವಿತ್ ಮೇಲೆ ತಮ್ಮ ಸರ್ವಿಸ್ ರಿವಾಲ್ವರ್ ನಿಂದ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಗಾಯಗೊಂಡ ಸಿಬ್ಬಂದಿಗಳಾದ ಪಿಎಸ್ಐ ಸುನಿಲ್ ರನ್ನು ಆಸ್ಪತ್ರೆಗೆ ಸೇರಿಸಿದ್ದು ಪೊಲೀಸರು ಭವಿತ್ ಜೊತೆಗೆ ಇದ್ದ ಇನ್ನಿಬ್ಬರ ಹುಡುಕಾಟದಲ್ಲಿದ್ದಾರೆ.
.