ಶಿವಮೊಗ್ಗ :ನಗರದ ಗೋವಿಂದಾಪುರ ಆಶ್ರಯ ವಸತಿ ಯೋಜನೆಯಲ್ಲಿ ನಿರ್ಮಾಣವಾದ ಮನೆಗಳಲ್ಲಿ 625 ಮನೆಗಳ ಹಂಚಿಕೆಗೆ ಇದೇ ತಿಂಗಳ 25ರಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ನಗರಕ್ಕೆ ಆಗಮಿಸಲಿದ್ದು ನಂತರ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡಿ ಮನೆ ಹಂಚಿಕೆ ಮಾಡಲಿದ್ದಾರೆ ಎನ್ನುವ ಮಾಹಿತಿ ತಿಳಿದಿದೆ. ಗೋವಿಂದಪುರದಲ್ಲಿ ಮನೆಗಳಿಗೆ ತಾತ್ಕಾಲಿಕವಾಗಿ ನೀರು ಹಾಗೂ ವಿದ್ಯುತ್ ಸೌಲಭ್ಯ ನಗರ ಸಾರಿಗೆ ಬಸ್, ಸರ್ಕಾರಿ ಶಾಲೆ, ಆಸ್ಪತ್ರೆ ಸೇರಿ ಅಗತ್ಯ ಮೂಲ ಸೌಕರ್ಯ ಕಲ್ಪಿಸ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಹೇಳಿದ್ದಾರೆ.
ಹಿಂದೆ 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿಯೂ ಕೂಡ ಬೊಮ್ಮನಕಟ್ಟೆಯಲ್ಲಿ ಆಶ್ರಯ ಮನೆಗಳನ್ನು ನೀಡಲಾಗಿತ್ತು ಜಿ ಪ್ಲಸ್ ಟು ಮಾದರಿಯಲ್ಲಿ ನಿರ್ಮಾಣವಾದ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ.
ಮನೆಗಳ ಹಂಚಿಕೆಯಲ್ಲಿ ಗೋಲ್ ಮಾಲ್ ಸುಳಿವು..?!
ಆದರೆ ಬಡವರಿಗೋಸ್ಕರ ನಿರ್ಮಾಣವಾದ ಮನೆಗಳ ಹಂಚಿಕೆಯಲ್ಲಿ ಹಣದ ವಾಸನೆ ಹಬ್ಬುತ್ತಿದ್ದು ಫಲಾನುಭವಿಗಳ ಹತ್ತಿರ ತಲಾ50,000 ಸಾವಿರ ರೂ,ಗಳಂತೆ ಹಣ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಹೆಸರು ಹೇಳಲು ಇಚ್ಛಿಸಿದ ಕೆಲವರು ಪತ್ರಿಕೆ ಬಳಿ ಅಳಲು ತೋಡಿಕೊಂಡಿದ್ದಾರೆ.
ಇದು ಎಷ್ಟರ ಮಟ್ಟಿಗೆ ನಡೆದಿದೆ ಎಂದರೆ ಕೆಳಗಿನ ಮನೆಗಳು ಸಾಮಾನ್ಯವಾಗಿ ಅಂಗವಿಕಲರಿಗೆ ಮೀಸಲಾಗಿರುತ್ತವೆ ಅದರಲ್ಲೂ ಕೂಡ ಹಣವನ್ನು ತೆಗೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗೆ ಮುಂದುವರಿದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಂದ ನೆಪ ಮಾತ್ರಕ್ಕೆ ಒಂದಷ್ಟು ಜನರ ಚೀಟಿಗಳನ್ನು ತೆಗೆದು ಅವರಿಗೆ ಮನೆ ಹಂಚಿಕೆ ಮಾಡಿ ಉಳಿದ ಮನೆಗಳನ್ನು ತಮಗೆ ಬೇಕಾದವರಿಗೆ ಹಣ ನೀಡಿದವರಿಗೆ ಕೊಡುತ್ತಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿದೆ.
ಈ ಅನುಮಾನ ಬಗೆಹರಿಯಬೇಕು ಎಂದರೆ ನಿಜವಾದ ಫಲಾನುಭವಿಗಳಿಗೆ ಮನೆ ಸಿಗಬೇಕು ಹಾಗಾಗಬೇಕಾದರೆ ಎಷ್ಟು ಜನ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ..?! ಯಾರಿಗೆ ಯಾವ ಆಧಾರದ ಮೇಲೆ ಮನೆ ಅಲರ್ಟ್ ಆಗಿದೆ ..?!ಅಲರ್ಟ್ ಆದ ಯಾರಿಗೆ ಮನೆ ಸಿಗುತ್ತಿದೆ..?! ನೆಪ ಮಾತ್ರಕ್ಕೆ ಸಚಿವರು ಚೀಟಿಯ ಮೂಲಕ ಹಾರಿಸುವ ಜನರನ್ನು ಬಿಟ್ಟು ಎಲ್ಲರಿಗೂ ಇದೇ ತರ ಮನೆ ಹಂಚಿಕೆಯಾಗುತ್ತಿದೆಯಾ..?! ಎನ್ನುವುದರ ಮೇಲೆ ಈ ಹಗರಣ ಎಲ್ಲಿಯವರೆಗೆ ತಲುಪಿದೆ ಎನ್ನುವುದು ಗೊತ್ತಾಗುತ್ತದೆ…
ಒಂದು ಮಾಹಿತಿಯ ಪ್ರಕಾರ ಸುಮಾರು3 ಕೋಟಿಯ ಹಗರಣ ಇದರಲ್ಲಿ ಕಾಣಸಿಗುತ್ತದೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ…. ಪತ್ರಿಕೆ ಕೂಡ ಮಾಹಿತಿ ಸಂಗ್ರಹಿಸುತ್ತಿದ್ದು ಒಂದು ವೇಳೆ ಹಗರಣ ನಡೆದಿದ್ದರೆ ಸಾರ್ವಜನಿಕರ ಮುಂದೆ ವಿಸ್ತಾರವಾಗಿ ತೆರೆದಿಡಲಿದೆ….
ರಘುರಾಜ್ ಹೆಚ್.ಕೆ..9449553305…