
ಶಿವಮೊಗ್ಗ:ನಗರಧ ಬೊಮ್ಮನಕಟ್ಟೆ ಸಾನ್ವಿ ಲೇಔಟ್ ನ ದೊಡ್ಡ ನೀರು ಟ್ಯಾಂಕ್ ಬಳಿ ಇರುವ ಬೋರ್ ವೆಲ್ ಕಂಪನಿಯೊಂದರ ಗೊಡೌನ್ ಮತ್ತು ಲಾರಿಗಳಲ್ಲಿರುವ ವಸ್ತುಗಳನ್ನು ಧರೋಡೆ ಮಾಡುವ ಯತ್ನವೊಂದು ವಿಫಲವಾಗಿದೆ.
ನಿನ್ನೆ ತಡರಾತ್ರಿ ಸುಮಾರು 12-30ರ ಹೊತ್ತಿಗೆ ಇಬ್ಬರು ಕಪ್ಪು ಪ್ಯಾಂಟ್, ಕಪ್ಪು ಫುಲ್ ಟಿ ಶಟ್೯ ಧಾರಿಗಳು ಮುಖಕ್ಕೆ ಹಳದಿ ಬಟ್ಟೆ ಕಟ್ಟಿಕೊಂಡು ಬಜಾಜ್ ಪಲ್ಸರ್ ಬೈಕಲ್ಲಿ ಬಂದಿದ್ದರು. ಬೈಕನ್ನು ಬೋರ್ ವೆಲ್ ಲಾರಿಗೆ ಐವತ್ತು ಮಾರು ದೂರದಲ್ಲಿ ನಿಲ್ಲಿಸಿ ಬಂದಿದ್ದಾರೆ. ಲಾರಿಯ ಕ್ಯಾಬಿನ್ ನಲ್ಲಿ ಯಾರಿದ್ದಾರೆ ಅಂತಾ ಮೊದಲು ನೋಡಿಕೊಂಡು ಸುತ್ತ ಕಣ್ಣು ಹಾಯಿಸಿದ್ದಾರೆ. ತಮ್ಮತ್ತ ಸಿಸಿ ಕ್ಯಾಮರಾ ಇರುವುದು ಗೊತ್ತಾದ ತಕ್ಷಣ ಅದನ್ನು ಒಡೆದು ಹಾಕಿದ್ದಾರೆ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಲಾರಿ ಹತ್ತಿರ ಬಂದು ಕ್ಯಾಬಿನ್ ಬಾಗಿಲು ತೆಗೆದು ಓರ್ವ ಒಳ ಹೊಕ್ಕಿದ್ದಾನೆ. ಇನ್ನೋರ್ವ ಕೆಳಗೇ ನಿಂತು ಆಕಡೆ ಈ ಕಡೆ ವಾಚ್ ಮಾಡ್ತಾ ಇದ್ದಾನೆ. ಸ್ವಲ್ಪ ಸಮಯದ ಬಳಿಕ ಧರೋಡೆ ಕೋರ ಕ್ಯಾಬಿನ್ನಿನಿಂದ ಹೊರ ಬಂದಿದ್ದಾನೆ.
ಸಾನ್ವಿ ಲೇಔಟ್ ಕಡೆಯಿಂದ ಒಂದು ಬೈಕ್ ಬರುತ್ತಿರುವುದನ್ನು ಕಂಡು ಇವರು ಅಲ್ಲಿದ ಕಾಲ್ಕಿತ್ತಿದ್ದಾರೆ. ಸ್ವಲ್ಪ ಸಮಯದ ಬಳಿಕ ಲಾರಿಯಲ್ಲಿ ಮಲಗಿದ್ದ ಡ್ರೈವರ್ ಸೂರ್ಯ ಮತ್ತು ಪುಷ್ಪೇಂದ್ರ ಅವರಿಗೆ ಎಚ್ಚರವಾಗಿದೆ. ಸೂರ್ಯ ಅವರ ಪ್ಯಾಂಟಿನ ಜೇಬಿಗೆ ಬ್ಲೇಡ್ ಹಾಕಿದ್ದು ಗೊತ್ತಾಗಿದೆ. ಜೇಭಿನಲ್ಲಿದ್ದ ಪಸ್೯ ಧರೋಡೆಕೋರರ ಪಾಲಾಗಿತ್ತು. ಅದರಲ್ಲಿ 4ಸಾವಿರ ರೂ.ನಗದು, ಡಿಎಲ್, ಎಟಿಎಂ, ಆಧಾರ್ ಕಾಡ್೯ಮತ್ತಿತರ ಕಾಗದ ಪತ್ರಗಳು ಇದ್ದವು ಎಂದು ಸೂರ್ಯ ಹೇಳಿಕೊಂಡಿದ್ದಾನೆ.
ಅಲ್ಲದೆ ಕ್ಯಾಬಿನ್ನಿನಲ್ಲಿದ್ದ ಆರ್ ಪಿ ಎಂ ಬುಕ್, ಲೆಡ್ಜರ್ ಇತ್ಯಾದಿ ಇದ್ದ ಬಾಕ್ಸನ್ನು ಧರೋಡೆಕೋರರು ಹೊತ್ತೊಯ್ದಿದ್ದಾರೆ. ಧರೋಡೆಯಾದ ಲಾರಿಯಿಂದ 100ಮೀ.ದೂರದಲ್ಲಿ ಓರ್ವ ಬೈಕ್ ನಿಲ್ಲಿಸಿಕೊಂಡಿದ್ದ. ಈ ಧರೋಡೆಕೋರರು ಓಡಿಹೋಗಿ ಆ ಬೈಕಲ್ಲಿ ಪರಾರಿಯಾಗಿದ್ದಾರೆ. ಗೊಡೌನ್ ಬೀಗ ಒಡೆಯಲು ತಂದಿದ್ದ ಆಳೆತ್ತರದ ಕಬ್ಬಿಣದ ಹಾರೆಯೊಂದನ್ನೂ ಧರೋಡೆಕೋರರು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದಾರೆ.ಲಾರಿ ಸಮೀಪ ಇಟ್ಟಿದ್ದ ಪಲ್ಸರ್ ಬೈಕನ್ನು ಅಲ್ಲಯೇ ಬಿಟ್ಟು ಪರಾರಿಯಾಗಿದ್ದಾರೆ. ಅಷ್ಟರಲ್ಲಿ ಬೋರ್ ವೆಲ್ ಮಾಲೀಕ ಕಾರ್ತಿಕ ಪೋಲಿಸ್ 112ಕ್ಕೆ ಕರೆ ಮಾಡಿದ್ದಾರೆ.
ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಎಲ್ಲವೂ ಇನ್ನೊಂದು ಸಿಸಿ ಕ್ಯಾಮರಾದಲ್ಲಿ ರಿಕಾಡ್೯ ಆಗಿದೆ. ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.