ಶಿವಮೊಗ್ಗ : ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 16ನೇ ಬಜೆಟ್ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತಪಡಿಸಿದರು.
4, ಲಕ್ಷದ 9 ಕೋಟಿಯ ಬೃಹತ್ ಗಾತ್ರದ ಬಜೆಟ್ ನಲ್ಲಿ ಎಲ್ಲಾ ಸಮುದಾಯಕ್ಕೆ ಎಲ್ಲಾ ವರ್ಗದವರಿಗೆ ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಹೆಚ್ಚಿನ ಒತ್ತು ನೀಡಿ ಬಜೆಟ್ ಮಂಡಿಸಿದ್ದಾರೆ.
ಈ ಬಾರಿ ಶಿಕ್ಷಣ ಇಲಾಖೆಯ ಬೇಡಿಕೆಯನ್ನು ಈಡೇರಿಸಿದ್ದು ಬಹುತೇಕ ನಮ್ಮ ಇಲಾಖೆ ಕೇಳಿದ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದಾರೆ.
ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವುದಕ್ಕಿಂತ ಹೆಚ್ಚಾಗಿ ಅವರ ದಾಖಲಾತಿಯನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾದ ಕೆಲಸ ಎಂದು ಪೋಷಕರಿಗೆ ಕಿವಿ ಮಾತನ್ನು ಸಚಿವರು ಹೇಳಿದರು.ಮಕ್ಕಳಲ್ಲಿ ಕೌಶಲ್ಯತೆ ಮೂಡಿಸಲು ಸ್ಕಿಲ್ ಹೆಚ್ ಸ್ಕೂಲ್ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಕ್ಕಳಲ್ಲಿ ಕಲಿಕಾ ಅಸಕ್ತಿ ಹೆಚ್ಚು ಮಾಡಲು ಓದು ಕರ್ನಾಟಕ ಎಂಬ ಹೆಸರಲ್ಲಿ ಕಾರ್ಯಕ್ರಮ ಆರಂಭ ಮಾಡುತ್ತಿದ್ದೇವೆ.
ಕಲಿಕೆಗಾಗಿ ಬಜೆಟ್ ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಮುಖ್ಯಮಂತ್ರಿಗಳು ನೀಡಿದ್ದಾರೆ.ಹನ್ನೊಂದು ಸಾವಿರ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಿದ್ದಾರೆ ವೇತನದಲ್ಲಿ ಎರಡು ಸಾವಿರ ಹೆಚ್ಚು ಮಾಡಲು ಅನುಮತಿ ನೀಡಿದ್ದಾರೆ ಹದಿನಾರು ಸಾವಿರ ಶಾಲೆಯಲ್ಲಿ ಅಡುಗೆ ಪೀಠೋಪಕರಣ ಖರೀದಿ ಮಾಡಲು ಹಣದ ವ್ಯವಸ್ಥೆ ಮಾಡಿದ್ದಾರೆ.ಎಂಭತ್ತು ಸಾವಿರ ಕೋಟಿ ಅಭಿವೃದ್ಧಿ ಗೆ ಮೀಸಲು ಇಟ್ಟಿದ್ದಾರೆ.ಜಿಲ್ಲಾಡಳಿತ, ಆಸ್ಪತ್ರೆ ಜಿಲ್ಲೆಗೆ ಕೇಳಿದ್ದೆ ಬಜೆಟ್ ಹೊರತಾಗಿ ಜಿಲ್ಲಾಡಳಿತ ಭವನಕ್ಕೆ ಹಣ ಒದಗಿಸುವುದಾಗಿ ಹೇಳಿದ್ದಾರೆ ಒಟ್ಟು 200ಕೋಟಿ ಮೊತ್ತದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಬರಲಿದೆ.
ಮೆಗ್ಗಾನ್ ಆಸ್ಪತ್ರೆ ಮೇಲ್ದರ್ಜೆಗೆ ತರುವಂತೆ ಮನವಿ ಮಾಡಿದ್ಸೇನೆ.
ಸೊರಬ ಶಿರಾಳಕೊಪ್ಪ ಜೆಜೆಎಂ ವತಿಯಿಂದ ನೂರ ಅರವತ್ತು ಕೋಟಿ ವೆಚ್ಚದಲ್ಲಿ ಶರಾವತಿ ನದಿಯಿಂದ ಕುಡಿಯುವ ನೀರು ತರುವ ಯೋಜನೆ ಬರಲಿದೆ ಎಲೆ ಚುಕ್ಕಿ ರೋಗಕ್ಕೆ ಅರವತ್ತೆರಡು ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಮಲೆನಾಡು ಭಾಗದಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸುವ ಜವಾಬ್ದಾರಿ ನನ್ನದು ಸಿಮ್ಸ್ ಅಧೀನದಲ್ಲಿರುವ ಮೆಗ್ಗಾನ್ ಆಸ್ಪತ್ರೆಯನ್ನು ಬೇರ್ಪಡಿಸಬೇಕು ಜಿಲ್ಲಾಸ್ಪತ್ರೆ ಯಾಗಿ ಉಳಿಸಿಬೇಕು ಎನ್ನುವ ಆಸೆ ನನ್ನದು ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣಷಲ್ಲಿ ನೈಟ್ ಲ್ಯಾಂಡಿಂಗ್ ಕೆಲಸ ಪ್ರಗತಿಯಲ್ಲಿದೆ ಎಂದ ಸಚಿವರು ಬಿಜೆಪಿಯ ಟಿಕೆಯ ಬಗ್ಗೆ ಉತ್ತರಿಸುತ್ತಾ ದೇಶದಲ್ಲಿ ಅತಿಹೆಚ್ಚು ಗೋಮಾಂಸ ರಪ್ತಾಗುತ್ತಿದೆ ನಾವು ಗೋಪೂಜೆ ಮಾಡಿ ಬಾಯಲ್ಲಿ ಹೇಳೊಲ್ಲ ಹೃದಯದಲ್ಲಿಟ್ಟುಕೊಂಡಿದ್ದೇವೆ ಬಿಜೆಪಿಯವರು ಗೋಪೂಜೆ ಮಾಡಿ ಗೋಮಾಂಸ ಮಾರುತ್ತಾರೆ ಬಿಜೆಪಿಯವರು ದೇಶಕ್ಕೆ ಶಾಪ ಮಾತೆತ್ತದರೆ ಜಾತಿ ಧರ್ಮ ತರುತ್ತಾರೆ ದೇಶವನ್ನು ಗೋಮಾತೆ ಹೆಸರಲ್ಲಿ ಹರಾಜು ಮಾಡಿದ್ದಾರೆ ಸಾವಿರದ ಮುನ್ನೂರು ಕೋಟಿ ಸಾಲ ಹೆಚ್ಚು ಮಾಡಿದ್ದಾರೆ ಬಡತನಕ್ಕೆ ಶಿಕ್ಷಣಕ್ಕೆ ಜಾತಿ ಇಲ್ಲ ಸಿದ್ಧರಾಮಯ್ಯ ಬಜೆಟ್ ಮೂಲಕ ಪವಿತ್ರ ಕೆಲಸ ಮಾಡಿದ್ದಾರೆ.ಬಿಜೆಪಿಯವರು ಹೊಲಸು ಬುದ್ಧಿ ಬಿಡಬೇಕು ಎಂದ ಸಚಿವರು ಶಿಕ್ಷಣ ಇಲಾಖೆಗೆ ನಲವತ್ತೈದು ಸಾವಿರ ಕೋಟಿ ಅನುದಾನ ಸಿಕ್ಕಿದೆ ಸ್ಕಿಲ್ ಅಟ್ ಸ್ಕೂಲ್ ಐದನೇ ತರಗತಿ ಮಕ್ಕಳಿಗೆ ಕಲಿಸಲಾಗುವುದು ಎಂದರು.